ಮಾನ್ವಿ: ಲಿಂಗಸುಗೂರು ಪುರಸಭೆ ಅಧ್ಯಕ್ಷ ಕುಪ್ಪಣ್ಣ ಮೇಲ್ಗೆರಿ ಆತ್ಮಹತ್ಯೆ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿ ಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ವತಿಯಿಂದ ಸೋಮವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ವಾಲ್ಮೀಕಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರ ವಣಿ ಗೆಯಲ್ಲಿ ತೆರಳಿದ ವಾಲ್ಮೀಕಿ ನಾಯಕ ಮಹಾಸಭಾ ಕಾರ್ಯ ಕರ್ತರು, ಕುಪ್ಪಣ್ಣ ಸಾವಿಗೆ ಸಂಬಂಧಿ ಸಿದಂತೆ ಸಿಒಡಿ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಕೊಲೆ ಪ್ರಕರಣದಲ್ಲಿ ಬಂಧಿಸಬೇಕು. ಲಿಂಗಸುಗೂರು ಪುರಸಭೆ ಕಚೇರಿಯಲ್ಲಿ ಸುಟ್ಟು ಹಾಕಲಾಗಿದ್ದ ದಾಖಲೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.

ಪುರ ಸಭೆಯನ್ನು ಸೂಪರ್ ಸೀಡ್ ಮಾಡ ಬೇಕು. ತನಿಖೆ ಪೂರ್ಣಗೊಳ್ಳು ವವರೆಗೆ ಪುರಸಭೆಯ ಯಾವುದೇ ಕಾರ್ಯಕಲಾಪ ನಡೆಸಬಾರದು. ಕುಪ್ಪಣ್ಣನ ಮನೆಯವರಿಗೆ ಸರ್ಕಾರಿ ನೌಕರಿ ನೀಡಬೇಕು. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲ ರಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸೋಮಲಿಂಗ ಜಿ.ಗೆಣ್ಣೂರು ಅವರಿಗೆ ಸಲ್ಲಿಸಲಾಯಿತು.ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ, ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಮ್ಯಾಕಲ್ ಅಯ್ಯಪ್ಪ ನಾಯಕ, ಪದಾಧಿಕಾರಿಗಳಾದ ಬಿ.ಹಂಪಯ್ಯ ನಾಯಕ, ಆಂಜನೇಯ ನಾಯಕ, ಮಲ್ಲೇಶ ನಾಯಕ, ಮೌನೇಶ ನಾಯಕ, ಬುಡ್ಡಪ್ಪ ನಾಯಕ, ಮಂಜುನಾಥ ನಾಯಕ, ವೆಂಕಟೇಶ ನಾಯಕ, ಅಮರೇಶ ನಾಯಕ, ಬಸವರಾಜ ನಾಯಕ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.