ಬೆಂಗಳೂರು: ರಾಜ್ಯದಲ್ಲಿ ಬುಧವಾರ ಸಂಜೆ ಸಿಡಿಲು ಬಡಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ತಂದೆ, ಮಗ ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.

ಮೊಳಕಾಲ್ಮುರು ವರದಿ: ಮನೆಗೆ ಸಿಡಿಲು ಬಡಿದು ಇಬ್ಬರು ಸತ್ತ ಘಟನೆ ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆಯಲ್ಲಿ ನಡೆದಿದೆ.ಅದೇ ಗ್ರಾಮದ ಕೃಷಿ ಕಾರ್ಮಿಕರಾದ ಓದು ತಿಪ್ಪೇಸ್ವಾಮಿ (46) ಹಾಗೂ ಆತನ ಪುತ್ರ ತಿಮ್ಮಣ್ಣ (20) ಮೃತಪಟ್ಟವರು.

ಸ್ಥಳಕ್ಕೆ ತಹಶೀಲ್ದಾರ್ ವಿ.ಆರ್. ನಾಯಕ್, ಸಿಪಿಐ ಎಸ್. ನಾಗರಾಜ್ ಭೇಟಿ ನೀಡಿದ್ದರು. ತಾಲ್ಲೂಕಿನ ವಿವಿಧೆಡೆ ಸುಮಾರು ಒಂದು ಗಂಟೆ ಕಾಲ ಮಳೆ ಸುರಿದಿದೆ.

ಗುಲ್ಬರ್ಗ ವರದಿ: ಚಿಂಚೋಳಿ ತಾಲ್ಲೂಕಿನ ಚಿಕ್ಕಲಿಂಗದಳ್ಳಿ ತಾಂಡಾದಲ್ಲಿ ಶೇಕಿಬಾಯಿ ಮೇಘು (14) ಎಂಬಾಕೆ ಸಿಡಿಲಿಗೆ ಬಲಿಯಾಗಿದ್ದಾಳೆ. ತಾಲ್ಲೂಕಿನಲ್ಲಿ ಕೆಲವೆಡೆ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ.

ಖಾನಾಪುರ (ಬೆಳಗಾವಿ): ಹೊಲದಿಂದ ಮನೆಗೆ ಹೊರಟಿದ್ದ ರೈತ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅವರೊಳ್ಳಿಯಲ್ಲಿ ಸಂಭವಿಸಿದೆ. ಮೃತನನ್ನು ಅದೇ ಗ್ರಾಮದ ರಾವಳಪ್ಪ ಕುಬೇರ ಕೋಡೋಳಿ (18) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.