ತುಮಕೂರು: ಬಾಂಬ್ ಸ್ಫೋಟದಿಂದ ಚೆಲ್ಲಾಪಿಲ್ಲಿಯಾದ ವಿದ್ಯಾರ್ಥಿಗಳು, ಎಲ್ಲೆಂದರಲ್ಲಿ ಬಿದ್ದ ಮೃತದೇಹಗಳು, ಆಂಬುಲೆನ್ಸ್ ವಾಹನಗಳ ಶಬ್ದ, ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ...
ಹೀಗೊಂದು ಭೀಕರ ಅವಘಡದ ಅಣಕು ಪ್ರದರ್ಶನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆಯಿತು.

ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ಮತ್ತು ರ್‌್ಯಾಲಿ’ ಕಾರ್ಯ-ಕ್ರಮದಲ್ಲಿ ಅವಘಡ ನಿಭಾಯಿಸುವ ಕುರಿತು ವಿದ್ಯಾರ್ಥಿಗಳಿಗೆ ಅಣುಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.

ಕಟ್ಟಡ ಕುಸಿತದ ವೇಳೆ ಹಗ್ಗದ ಸಹಾಯದಿಂದ ಗಾಯಾಳುಗಳನ್ನು ಕೆಳಗಿಳಿಸುವ ಕುರಿತು ಗೃಹ ರಕ್ಷಕದಳದ ಸಿಬ್ಬಂದಿ ಪ್ರಾತಕ್ಷಿಕೆ ನೀಡಿದರು.

ಬಾಂಬ್ ಸ್ಫೋಟ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆ, ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ಸಾಗಿಸುವ ಅಣುಕು ಪ್ರದರ್ಶನ ನೀಡಲಾಯಿತು. ಹುಲ್ಲಿನ ಬಣವೆ, ಗೋದಾಮು, ಕಟ್ಟಡಗಳಲ್ಲಿ ರಿವಾಲ್ವಿಂಗ್ ಗೇಟ್, ಜೆಟ್, ಸ್ಪ್ರೇ ಮೂಲಕ ಬೆಂಕಿ ನಂದಿಸುವುದನ್ನು ಪ್ರದರ್ಶಿಸಲಾಯಿತು.
ಸಣ್ಣ ಪ್ರಮಾಣದ ಬೆಂಕಿ ನಂದಿಸಲು ವಿಶೇಷವಾಗಿ ವಿನ್ಯಾಸಗೊಳಿಸಿರುವ ಅಗ್ನಿಶಾಮಕ ಬೈಕ್ ಕಾರ್ಯವೈಖರಿಯನ್ನು ಪ್ರಾತಕ್ಷಿಕೆ ಮೂಲಕ ತೋರಿಸಲಾಯಿತು.

ಡಾ.ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಎನ್.ಆರ್.ಜಗದೀಶ್, ಎಂ.ಬಿ.ಕುಮಾರ್, ಕವಿತಾಕೃಷ್ಣ, ಗೃಹರಕ್ಷಕ ದಳದ ಕಮಾಂಡೆಂಟ್ ಕೆ.ರವಿಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎಂ.ಶಂಕರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.