ಬುಧವಾರ, ಜೂನ್ 23, 2021
30 °C

ಸಿಬ್ಬಂದಿಗೆ ನಾಗರಿಕ ಸೇವೆಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಪುರಸಭೆಯ ಸಿಬ್ಬಂದಿಗೆ ಬುಧವಾರ ಮುಖ್ಯಾಧಿಕಾರಿ ಎಂ.ಆರ್. ಮಂಜುನಾಥ್ ಸಿಬ್ಬಂದಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2012 ಕುರಿತು ಮಾಹಿತಿ ನೀಡಿದರು.ಪುರಸಭಾ ಸಭಾಂಗಣದಲ್ಲಿ ಪುರಸಭಾ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ನೂತನ ಅಧಿನಿಯಮದಂತೆ ಅಧಿಕಾರಿ ವರ್ಗದವರು ಸಂಬಂಧಿಸಿದ ಇಲಾಖೆಯಿಂದ ನಾಗರಿಕರಿಗೆ ನೀಡಬೇಕಾದ ಸೇವೆಗಳನ್ನು ನಿಗದಿತ ಸಮಯದಲ್ಲಿ ಒದಗಿಸದಿದ್ದಲ್ಲಿ ದಿನಂಪ್ರತಿ 20 ರೂ. ದಂಡದಂತೆ ಕಠಿಣ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.ಸಭೆಯಲ್ಲಿ ಕಿರಿಯ ಎಂಜಿನಿಯರ್‌ಗಳಾದ ಗೋಪಾಲಕೃಷ್ಣ, ಸರಿತಾ, ವ್ಯವಸ್ಥಾಪಕಿ ಸರಸ್ವತಿ,  ಪರಿಸರ ಎಂಜಿನಿಯರ್ ಮಮತಾ, ಆರೋಗ್ಯಾಧಿಕಾರಿ ಮಂಜುಳಾ, ಪ್ರಥಮ ದರ್ಜೆ ಗುಮಾಸ್ಥರುಗಳಾದ ಬಾಬು, ಭೈರಪ್ಪ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.