ಭಾನುವಾರ, ಜನವರಿ 26, 2020
27 °C
ನಗರ ಸಂಚಾರ: ಸಿರಿ ಉತ್ಪನ್ನಗಳ ವಸ್ತುಪ್ರದರ್ಶನ, ಮಾರಾಟ ಮೇಳ

ಸಿರಿ ಶೈನ್‌, ಶ್ರಮಿಕ್‌ ಶರ್ಟ್‌ಗೆ ಭಾರಿ ಬೇಡಿಕೆ...!

ಪ್ರಜಾವಾಣಿ ವಾರ್ತೆ/ ಶ್ರೀಪಾದ ಯರೇಕುಪ್ಪಿ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗ್ರಾಮೀಣ ಸ್ವ ಸಹಾಯ ಸಂಘದ ಮಹಿಳೆಯರ ಉತ್ಪನ್ನಗಳಿಗೆ ಕುಂದಾನಗರಿಯಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದೆ. ಸಿರಿ ಶೈನ್‌ ಹಾಗೂ ಶ್ರಮಿಕ್‌ ಶರ್ಟ್‌ಗಳು ಜನರನ್ನು ಆಕರ್ಷಿ ಸುತ್ತಿವೆ. ಗ್ರಾಮೀಣ ಜನರ ಕೌಶಲ ನೋಡಲು ನಗರದ ಜನತೆಗೆ ಉತ್ತಮ ಅವಕಾಶ ಕಲ್ಪಿಸಿ ಕೊಡಲಾಗಿದೆ.ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆರಂಭಿಸಿರುವ ಸಿರಿ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಅತ್ಯುತ್ತಮ ಗುಣಮಟ್ಟದ ಹಾಗೂ ಗ್ರಾಮೀಣ ಮಹಿಳೆಯರು ತಯಾರಿಸಿದ ಸಿರಿ ಶೈನ್‌ ಹಾಗೂ ಶ್ರಮಿಕ್‌ ಶರ್ಟ್ ಗಳು, ಸಿರಿ ಕ್ಯಾಸುವಲ್‌ ಶರ್ಟ್‌ಗಳು, ನೈಟಿ, ಚೂಡಿದಾರ್‌, ಸೀರೆಗಳು, ಸ್ಕರ್ಟ್‌, ಸಿರಿ ಅಗರಬತ್ತಿಗಳು, ಉಪ್ಪಿನ ಕಾಯಿ, ಸೋಪ್‌, ಫಿನಾಯಿಲ್‌, ಲಕ್ವಿಡ್‌ ಸೋಪ್‌, ಬ್ಲೀಚಿಂಗ್‌ ಪೌಡರ್‌, ನೋವಿನ ಎಣ್ಣೆ, ಹಪ್ಪಳ, ಹೊನ್ನಾವರದ ಜೇನುತುಪ್ಪ ಹಾಗೂ ಇನ್ನಿತರ ಗೃಹ ಬಳಕೆಯ ವಸ್ತುಗಳು ಪ್ರದರ್ಶನದಲ್ಲಿವೆ.‘ಸಿರಿ ಗ್ರಾಮೋದ್ಯೋಗ ಸಂಸ್ಥೆಯ 8000 ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಮಹಿಳೆಯರು ಕೈಯಿಂದ ತಯಾರಿಸಿದ ವಸ್ತು ಗಳು ಇವು. ಸಿರಿ ಶೈನ್‌ ಶರ್ಟ್‌ ಗಳು ಅತ್ಯುತ್ತಮ ಗುಣಮಟ್ಟದ ಫ್ಯಾಬ್ರಿಕ್‌ನಿಂದ ತಯಾರಿಸಲಾ ಗಿದೆ. ಗುಣಮಟ್ಟದ ಕಚ್ಚಾವಸ್ತುಗಳನ್ನು ಬಳಸಿ ಸಿರಿ ಉತ್ಪನ್ನಗಳನ್ನು ತಯಾರಿಸಲಾಗಿದೆ. ಈ ಉತ್ಪನ್ನಗಳು ಗ್ರಾಮೀಣ ಸ್ವ ಸಹಾಯ ಸಂಘದ ಮಹಿಳೆಯರ ಹೆಮ್ಮೆಯ ಉತ್ಪನ್ನಗಳು’ ಎಂದು ಸಂಸ್ಥೆಯ ಮಾರುಕಟ್ಟೆ ಪ್ರತಿನಿಧಿ ರತನ್‌ ಶೆಟ್ಟಿ ಹೇಳುತ್ತಾರೆ.‘ಸಿರಿ ಉತ್ಪನ್ನಗಳು ಅತ್ಯಾಧುನಿಕ ಕ್ವಾಲಿಟಿ ಕಂಟ್ರೋಲ್‌ ಲ್ಯಾಬ್‌ ಹಾಗೂ ಗುಣಮಟ್ಟ ನಿಯಂತ್ರಣ ವಿಭಾಗದ ಸುಪರ್ದಿಯಲ್ಲಿ ತಯಾರಾಗುತ್ತವೆ. ಸಿರಿ ಸಂಸ್ಥೆಯು ಸ್ವದೇಶಿ ಆಂದೋಲನದ ಇನ್ನೊಂದು ರೂಪವಾಗಿದ್ದು, ಬಡ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ’ ಎನ್ನುತ್ತಾರೆ ಅವರು.‘ಶರ್ಟ್‌ಗಳನ್ನು ಹುಬ್ಬಳ್ಳಿ, ಬೆಳ್ತಂಗಡಿ, ಹಾವೇರಿಯಲ್ಲಿ ತಯಾರಿಸಲಾಗಿದೆ. ತಿಂಗಳಿ ಗೊಂದು ಜಿಲ್ಲೆಯಲ್ಲಿ ಇಂಥ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸಲಾಗುತ್ತದೆ. ಸಂಸ್ಥೆಯ ಬೆಳಗಾವಿ ತಾಲ್ಲೂಕಿನ ಸದಸ್ಯರಿಗೆ ಈ ವಸ್ತುಗಳ ಪ್ರದರ್ಶನ ಮಾಡುವ ಉದ್ದೇಶದಿಂದ ಈ ಮೇಳ ನಡೆಸಲಾಗುತ್ತಿದೆ. ಜೊತೆಗೆ ಗ್ರಾಮೀಣ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶವೂ ಇದರಲ್ಲಿ ಅಡಗಿದೆ’ ಎನ್ನುತ್ತಾರೆ ಮಾರುಕಟ್ಟೆ ಮೇಲ್ವಿಚಾ ರಕ ಸಂದೇಶ ಕುಮಾರ.‘ಗ್ರಾಹಕರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಒಂದು ಶರ್ಟ್‌ ಖರೀದಿಸಿ ದರೆ, ಅದೇ ಬೆಲೆಯ ಇನ್ನೊಂದು ಶರ್ಟ್‌ ಉಚಿತ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಗ್ರಾಮೀಣ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗುತ್ತ ಬರಲಾಗಿದೆ’ ಎಂದು ಅವರು ಹೇಳುತ್ತಾರೆ.ಸಿರಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಇದೇ 17 ರಿಂದ ಆರಂಭ ವಾಗಿದ್ದು, 15 ದಿನಗಳವರೆಗೆ ನಡೆಯಲಿದೆ.

ಪ್ರತಿಕ್ರಿಯಿಸಿ (+)