ಮೀಟ್ರು
ಉದ್ದ, ಎತ್ತರವನ್ನು ಅಳೆಯಲು `ಮೀಟರ್~ ಒಂದು ಮಾಪಕ. ಸ್ಪರ್ಧೆಗಳಲ್ಲಿ ಓಟದ ದೂರವನ್ನು ಸೂಚಿಸಲು ಇದನ್ನು ಬಳಸುವುದು ಕೂಡ ಮಾಮೂಲು. ವೈರ್, ದಾರ ಮೊದಲಾದ ಬಾಗುವ ವಸ್ತುಗಳನ್ನು ಅಂಗಡಿಗಳಲ್ಲಿ ಅಳೆಯುವುದು ಮೀಟರ್ನಲ್ಲೇ.

ವಿದ್ಯುತ್ ಬಿಲ್, ನೀರಿನ ಬಿಲ್ ಎಷ್ಟಾಗಿದೆ ಎಂದು ಅಳೆಯಲು ಉಪಯೋಗಿಸುವ ಮೀಟರ್ಗಳನ್ನೂ ನಾವು ಕಂಡಿದ್ದೇವೆ. ಆಟೊ ಹತ್ತಿದರೆ, ದರ ತೋರುವ ಉಪಕರಣ ಇನ್ನೊಂದು ಮೀಟರ್. ಹೀಗೆ ಮೀಟರ್ ಬಗೆಬಗೆಯ ಬಳಕೆಗೆ ತಕ್ಕಂತೆ ತನ್ನ ಅರ್ಥವ್ಯಾಪ್ತಿಯನ್ನೂ ಹಿಗ್ಗಿಸಿಕೊಂಡಿದೆ.

ಆದರೆ, ಸಾಮರ್ಥ್ಯ, ಧೈರ್ಯವನ್ನು ಬಿಂಬಿಸಲು ಈಚೀಚೆಗೆ `ಮೀಟರ್~ ಎಂಬ ಪದ ವ್ಯಾಪಕವಾಗಿ ಬಳಕೆಯಾಗತೊಡಗಿತು. ಜನಪ್ರಿಯ ಮಾಧ್ಯಮಗಳಲ್ಲೂ ಅದರ ಬಳಕೆ ಬಂದದ್ದೇ ಅದು `ಮೀಟ್ರು~ ಎಂದು ಅಪಭ್ರಂಶವಾಯಿತು. `ನಿಂಗೆ ಮೀಟ್ರು ಇದ್ರೆ ನನ್ನ ಮುಟ್ಟು~ ಅಂತ ಸಿನಿಮಾ ನಾಯಕ ಕಣ್ಣು ಕೆಕ್ಕರಿಸಿಕೊಂಡು ಹೇಳಿದರೆ ಅದು ಅವನ ಸಂಭಾಷಣಾಚತುರತೆಯಂತೆ ಕಾಣುತ್ತದೆ. ಈ ಪದ ಜನಪ್ರಿಯವಾದದ್ದೇ ಇತ್ತೀಚೆಗೆ ಇದೇ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ. ಸುರೇಶ್ ಎಂಬ ನೃತ್ಯ ನಿರ್ದೇಶಕ `ಮೀಟ್ರು~ ಎಂಬ ಚಿತ್ರ ನಿರ್ದೇಶಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಅವರಿಗೆ ಇನ್ನೆಷ್ಟು ಮೀಟ್ರಿರಬೇಡ!

ವಿನೈಲ್ ಹಾಕ್ಸು
`ನೀನು ಕಟೌಟ್ ಆಗ್ಬುಡ್ತಿಯಾ ಗುರು~ ಎಂಬುದು ಎತ್ತರಕ್ಕೇರುತ್ತೀರಾ ಎಂಬುದರ ಸಂಕೇತ. `ನೀನು ಪಾಂಪ್ಲೇಟ್ ಆಗ್ಬುಡ್ತಿಯಾ ಗುರು~ ಎಂದರೆ ಸತ್ತುಹೋಗಿತ್ತೀಯಾ ಎಂಬ ಬೆದರಿಕೆ. ಹಿಂದೆ ಬ್ಯಾನರ್ಗಳು ಹಾಗೂ ಕಟೌಟ್ಗಳನ್ನು ಬಟ್ಟೆಯನ್ನೋ, ಕಾಗದವನ್ನೋ ಬಳಸಿ ಮಾಡುತ್ತಿದ್ದರು.

ಈಗ ಅವೆಲ್ಲಾ ಮಾಯವಾಗಿ ಅವುಗಳ ಜಾಗದಲ್ಲಿ ವಿನೈಲ್ ಪೋಸ್ಟರ್ಗಳು, ಹೋರ್ಡಿಂಗ್ಗಳು ಬಂದಿವೆ. ಕಂಪ್ಯೂಟರೀಕೃತ ಮುದ್ರಣದಿಂದಾಗಿ ವಿನೈಲ್ ಭಿತ್ತಿಯ ಮೇಲೆ ಅಕ್ಷರಗಳನ್ನು, ಚಿತ್ರಗಳನ್ನು ಮೂಡಿಸುವುದು ಸುಲಭ. ಅವು ಪರಿಣಾಮಕಾರಿಯಾಗಿಯೂ ಕಾಣುತ್ತವೆ.

ಬರಬರುತ್ತಾ ವಿನೈಲ್ ಪೋಸ್ಟರ್ಗಳನ್ನು ಶ್ರದ್ಧಾಂಜಲಿ ಸೂಚಿಸಲು ಕೂಡ ಬಳಸತೊಡಗಿದರು. ಬೆಂಗಳೂರಿನಲ್ಲಂತೂ ಯಾರಾದರೂ ಮೃತಪಟ್ಟರೆ ಓಟುಬ್ಯಾಂಕ್ ಕಾಪಾಡಿಕೊಳ್ಳಲು ಆ ವಾರ್ಡ್ನ ಕಾರ್ಪೊರೇಟರ್ ಕಡೆಯವರೇ ವಿನೈಲ್ ಪೋಸ್ಟರ್ ಮಾಡಿಸಿ ಶ್ರದ್ಧಾಂಜಲಿಯನ್ನು `ಟಾಂಟಾಂ~ ಹೊಡೆಯುತ್ತಾರೆ.

ಸಿನಿಮಾದಲ್ಲಿ ಇದೇ ಒಂದು ಕಚ್ಚಾ ಈಡಿಯಂ ಆಗಿ ಬಳಕೆಯಾಗತೊಡಗಿತು. `ವಿನೈಲ್ ಹಾಕಿಸ್ಕೋತ್ಯಾ~ ಎಂದರೆ ಪ್ರಾಣ ಕಳೆದುಕೊಳ್ಳುತ್ತೀಯಾ ಎಂಬುದು ಧ್ವನಿ. ಜನೋಪಯೋಗಿ ಸರಕುಗಳು ಕೂಡ ಹೇಗೆ ವಿಲಕ್ಷಣ ಈಡಿಯಂಗಳಾಗಿ ಚಾಲ್ತಿಗೆ ಬರುತ್ತವೆ, ನೋಡಿ.

ಪುಲಾವ್ ಕಟ್ಸು
ಇದು ಕೂಡ `ನೆಗೆಟಿವ್~ ಅರ್ಥ ಕೊಡುವ ನುಡಿಗಟ್ಟು. ಮೊದಲೆಲ್ಲಾ ಜೈಲಿಗೆ ಹೋಗಬೇಕಾಗುತ್ತದೆ ಅಷ್ಟೆ ಎಂದು ಎಚ್ಚರಿಸಲು `ಕಂಬಿ ಎಣಿಸಬೇಕಾಗುತ್ತದೆ~ ಎನ್ನುತ್ತಿದ್ದರು. ಈಗ ಅದಕ್ಕೆ `ಪುಲಾವ್ ಕಟ್ಸು~ ಎಂಬ ಮಾತು ರೂಢಿಗೆ ಬಂದಿದೆ. ಪುಲಾವ್ ಕಟ್ಸೋದು ಎಂದರೇನು ಎಂಬುದು ಪ್ರಶ್ನೆ.

ಮಗನೋ, ಗಂಡನೋ ಜೈಲು ಸೇರಿದರೆ ಅವನನ್ನು ನೋಡಲು ಹೋಗುವವರು ಬುತ್ತಿ ಕಟ್ಟಿಕೊಂಡು ಹೋಗುವುದು ಸಹಜ. ಅವರು ಜೈಲಿನಲ್ಲಿರುವವನಿಗೆ ಇಷ್ಟವಾದ ತಿಂಡಿ ಮಾಡಿಕೊಂಡು ಹೋಗುವುದು ಮಾಮೂಲು.

ಅದನ್ನೇ ಸಂಭಾಷಣಾಚತುರರು ಒಂದು ಈಡಿಯಂ ಆಗಿಸಿದ್ದಾರೆ. ಕಾರ್ಮಿಕ, ಶ್ರಮಿಕ ವರ್ಗಗಳಲ್ಲಿ ಪುಲಾವ್ ಇಷ್ಟಪಡುವ ಜನ ಹೆಚ್ಚಾಗಿದ್ದಾರೆ. ಹಾಗಾಗಿ ತಪ್ಪು ಮಾಡಿ ಜೈಲಿಗೆ ಹೋಗಬೇಕಾಗುತ್ತದೆ ಎಂಬುದನ್ನು ಸೂಚಿಸಲು `ಮಗನೇ, ಹಿಂಗೆ ಆಡ್ತಿದ್ರೆ ನಿಮ್ಮಮ್ಮ ಪುಲಾವ್ ಕಟ್ಟಿಸ್ಬೇಕಾಯ್ತದೆ~ ಎಂಬ ಬಳಕೆ ಚಾಲ್ತಿಗೆ ಬಂತು. ಜನಪ್ರಿಯ ಮಾಧ್ಯಮದ ಭಾಷಾಮಾಯೆಗೆ ಇದು ಇನ್ನೊಂದು ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.