ಬುಧವಾರ, ಏಪ್ರಿಲ್ 14, 2021
24 °C

ಸುಂಕ ರಹಿತ ಚೀನಾ ರೇಷ್ಮೆ ಆಮದು: ನಾಳೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಕೇಂದ್ರ ಸರ್ಕಾರದ ಸುಂಕ ರಹಿತ ಚೀನಾ ರೇಷ್ಮೆ ಆಮದು ನೀತಿ ಖಂಡಿಸಿ ಕೇಂದ್ರ ಕಾನೂನು ಸಚಿವ  ವೀರಪ್ಪಮೊಯಿಲಿ ಅವರ ಚಿಕ್ಕಬಳ್ಳಾಪುರದ ಕಚೇರಿ ಎದುರು ಭಾನುವಾರ ಬೆಳಿಗ್ಗೆ 11-30 ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಕಲ್ಯಾಣ್ ಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚ್ಚಾ ರೇಷ್ಮೆ ಆಮದು  ಸುಂಕವನ್ನು ಶೇ 31 ರಿಂದ ಶೆ.5 ಕ್ಕೆ ಇಳಿಸಿರುವ ಕೇಂದ್ರ ಸರ್ಕಾರ ಚೀನಾದಿಂದ 7 ರಿಂದ 8 ಸಾವಿರ ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಂಡಿದೆ. ಇದರಿಂದ ದೇಸಿ ರೇಷ್ಮೆ ಬೆಳೆಗಾರನಿಗೆ ಪೆಟ್ಟು ಬಿದ್ದಿದೆ. ರಾಜ್ಯದ 5 ಲಕ್ಷ ರೇಷ್ಮೆ ಕೂಲಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದು ದೂರಿದರು.ಚಿಕ್ಕಬಳ್ಳಾಪುರ ರೈತ ಸಂಘದ ಅಧ್ಯಕ್ಷ ಬೈರೇಗೌಡ ಮಾತನಾಡಿ, ಕೆಲವೇ ರೇಷ್ಮೆ ವರ್ತಕರ ಪ್ರಭಾವಕ್ಕೆ ಮಣಿದು ಜಾರಿಗೆ ತಂದಿರುವ ರೇಷ್ಮೆ ಆಮದು ನೀತಿಯಿಂದ ರಾಷ್ಟ್ರ ಮತ್ತು ರಾಜ್ಯದ ರೇಷ್ಮೆ ಉದ್ಯಮ ನೆಲಕಚ್ಚಿದೆ. ಆಮದು ನೀತಿಯಿಂದ ರೇಷ್ಮೆ ಗೂಡಿನ ಬೆಲೆ ಪ್ರತಿ ಕೆ.ಜಿ.ಗೆ 425 ರೂಪಾಯಿ ಯಿಂದ 150 ರೂಪಾಯಿಗೆ ಕುಸಿದಿದೆ. ಈ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯವಹಿಸುತ್ತಿವೆ ಎಂದು ಆರೋಪಿಸಿದರು.ಚಿಕ್ಕಬಳ್ಳಾಪುರ ರೇಷ್ಮೆ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮರಳೂರು ಶಿವಣ್ಣ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.