ಮಂಗಳವಾರ, ಜೂನ್ 15, 2021
23 °C

ಸುಂದರ ವಾತಾವರಣದ ಗೋಪಾಲಪುರ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಸುಂದರ ವಾತಾವರಣ, ಚಂದದ ಕಟ್ಟಡ, ಉತ್ತಮ ಗ್ರಂಥಾಲಯ, ಕ್ರೀಡಾ ಮೈದಾನ ಶಿಸ್ತಿನ ವಿದ್ಯಾರ್ಥಿಗಳು ಹಾಗೂ ಕ್ರಿಯಾಶೀಲ ಶಿಕ್ಷಕಿಯರಿದ್ದರೆ ಆ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ? ಇಂಥ ಶಾಲೆಗೆ ಒಂದು ನಿದರ್ಶನ ಗೋಪಾಲಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಶನಿವಾರಸಂತೆಯಿಂದ 3ಕಿ.ಮೀ.ದೂರದಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ಶಾಲೆಯಲ್ಲಿರುವುದು ಶಿಕ್ಷಕಿಯರೇ. 1ರಿಂದ 7ನೇ ತರಗತಿಯವರೆಗೆ 153 ವಿದ್ಯಾರ್ಥಿಗಳು ವ್ಯಾಸಂಗ  ಮಾಡುತ್ತಿದ್ದು, ಏಳನೇ ತರಗತಿಯಲ್ಲಿ ಶೇ.100 ಫಲಿತಾಂಶ ಬರುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ನವೋದಯ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳಿಗೂ ಆಯ್ಕೆಯಾಗಿದ್ದಾರೆ. ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆಗಳ್ಲ್ಲಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ಕಲಿತ ಹೋದವರು ದೇಶ-ವಿದೇಶದಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ.ಗ್ರಾಮದ ದೇವಾಲಯದಲ್ಲಿ 1961ರಲ್ಲಿ ಸ್ಥಾಪನೆಯಾದ ಈ ಶಾಲೆ ಆರಂಭದ ದಿನಗಳಲ್ಲಿ 1ರಿಂದ 4ನೇ ತರಗತಿಯವರೆಗೆ ಮಾತ್ರ ಇದ್ದು, ಏಕೋಪಾಧ್ಯಾಯ ಶಾಲೆಯೆನಿಸಿತ್ತು. ನಂತರ ಇಬ್ಬರು ಶಿಕ್ಷಕರು ಹಾಗೂ 35 ವಿದ್ಯಾರ್ಥಿಗಳಾದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ.ಪ್ರಸ್ತುತ ಈ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿಯಾಗಿ ಜಾಕ್ಲಿನ್, ಸಹಶಿಕ್ಷಕರಾಗಿ ಕೆ.ಎಂ.ಕಲ್ಪನಾ, ವಿ.ಜೆ.ಚಂದ್ರಾವತಿ, ಎಸ್.ಎಂ.ಲೀಲಾ, ಕೆ.ಡಿ.ಕಾಳಮ್ಮ, ಎಚ್.ಸಿ.ಗೌರಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಟಿ.ರಾಮು, ಸದಸ್ಯರಾಗಿ ಸುಮತಿ, ಗೀತಾ, ಮೈಮುನಾ, ವಿ.ಎಂ.ರಮೇಶ್, ಶೋಭಾ, ಜಿ.ಟಿ.ಪ್ರಕಾಶ್, ಚಂದ್ರಶೇಖರ್, ಜಿ.ರಮೇಶ್, ಪದನಿಮಿತ್ತ ಸದಸ್ಯರಾಗಿ ನಿವೃತ್ತ ಉಪಪ್ರಾಂಶುಪಾಲ ಜಿ.ಬಿ.ನಾಗಪ್ಪ, ಶರತ್‌ಶೇಖರ್, ಸಚಿನ್, ಹೇಮಲತಾ, ಸವಿತಾ, ಪ್ರೇಮಾವತಿ, ಪವಿತ್ರಾ ಇದ್ದು ಸಮಸ್ಯೆಗಳಿಗೆ ಸ್ಪಂದಿಸುತ್ತ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.ಮಾಜಿ ಸಂಸದ ಜನಾರ್ದನ ಪೂಜಾರಿ ಅವರ ಅನುದಾನದಲ್ಲಿ ನಿರ್ಮಾಣವಾಗಿರುವ ಉತ್ತಮ ಕ್ರೀಡಾ ಮೈದಾನವಿದೆ. ರಂಗಮಂದಿರವಿದೆ. ಶಾಲೆಯಲ್ಲಿ ಕೂಲಿ ಕಾರ್ಮಿಕರ ಹಾಗೂ ಕೃಷಿಕರ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದಾರೆ. ಹಾಜರಾತಿ ಉತ್ತಮವಾಗಿದೆ. ಬಿಸಿಯೂಟದ ವ್ಯವಸ್ಥೆ ಚೆನ್ನಾಗಿದೆ. ತಿಂಗಳಾಂತ್ಯಕ್ಕೆ ಕಂಪ್ಯೂಟರ್ ಶಿಕ್ಷಣವೂ ದೊರೆಯಲಿದೆ.ಜಿಲ್ಲಾ ಪಂಚಾಯಿತಿ ಅನುದಾನದಿಂದ ಶಾಲಾ ಮೈದಾನವನ್ನು ಸಮತಟ್ಟುಗೊಳಿಸಲಾಗುವುದು. ತಡೆಗೋಡೆಯ ಅವಶ್ಯಕತೆಯಿದ್ದು, ಗ್ರಾ.ಪಂ. ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಆ ಕೊರತೆಯೂ ನೀಗಲಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.