ಶುಕ್ರವಾರ, ಏಪ್ರಿಲ್ 16, 2021
31 °C

ಸುಗಮ ಸಂಚಾರಕ್ಕೆ ಸಜ್ಜಾದ ರಸ್ತೆ!

ಪ್ರಜಾವಾಣಿ ವಾರ್ತೆ/ವೀರೇಶ್.ಎನ್.ಮಠಪತಿ Updated:

ಅಕ್ಷರ ಗಾತ್ರ : | |

ಚಿಟಗುಪ್ಪಾ: ಪಟ್ಟಣದ ಕುಡಂಬಲ್ ರಸ್ತೆ ಮೇಲೆ ಸದಾ ಸಾಕು ಪ್ರಾಣಿಗಳು ಮಲಗುತ್ತಿರುವುದುರಿಂದ ಸಂಚಾರ ವ್ಯವಸ್ಥೆಗೆ ತೊಂದರೆ ಆಗುತ್ತಿರುವ ಬಗ್ಗೆ ಪ್ರಜಾವಾಣಿ ಯಲ್ಲಿ ಈಚೆಗೆ ಪ್ರಕಟಿಸಿದ ವರದಿಗೆ ಸ್ಫಂದಿಸಿದ ಸ್ಥಳಿಯ ಪೊಲೀಸ್ ಇಲಾಖೆ, ಪುರಸಭೆ ಸಿಬ್ಬಂದಿ  ತಕ್ಷಣ ಕಾರ್ಯಪ್ರವೃತ್ತರಾಗಿ ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ವೃತ್ತ ನಿರೀಕ್ಷಕ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ಸಬ್‌ಇನ್ ಸ್ಪೆಕ್ಟರ್ ಜಿ.ಎಸ್.ಹೆಬ್ಬಾಳ್ ಹಾಗೂ ಸಿಬ್ಬಂದಿ ರಸ್ತೆಗಳ ಮೇಲೆ ಕುಳಿತುಕೊಳ್ಳುತ್ತಿರುವ ಕುರಿಗಳನ್ನು ವಶಕ್ಕೆ ತೆಗೆದುಕೊಂಡು ಅವುಗಳ ಮಾಲಿಕರ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ 92 ಕಲಂ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.ಇದುವರೆಗೆ 10ಕ್ಕೂ ಹೆಚ್ಚು ಕುರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, 4 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೆಬ್ಬಾಳ್ ಪ್ರಜಾವಾಣಿ ಗೆ ಮಾಹಿತಿ ನೀಡಿದ್ದಾರೆ.ಪೊಲೀಸ್ ಇಲಾಖೆಯ ಸಿಬ್ಬಂದಿ ಅವರಿಗೆ ರಸ್ತೆ ಮೇಲೆ ಕುಳಿತುಕೊಳ್ಳುತ್ತಿರುವ ಪ್ರಾಣಿಗಳನ್ನು ಬೇರೆಡೆಗೆ ಸಾಗಿಸಲು ಕೈಗೊಳ್ಳಬಹುದಾದ ಎಲ್ಲ ಕ್ರಮಗಳಿಗೆ ಪುರಸಭೆಯ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾಹಿತಿ ನೀಡಿದರು.ಒಟ್ಟಾರೆ, ಸಾರ್ವಜನಿಕರ, ಸರ್ಕಾರಿ ಅಧಿಕಾರಿಗಳ ಸಹಕಾರದಿಂದ ಪಟ್ಟಣದ ರಸ್ತೆಗಳಲ್ಲಿ ನಾಗರಿಕರು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿದೆ ಎಂಬುದ್ದು ಹಲವರ ಅಂಬೋಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.