ಮಂಗಳವಾರ, ಮಾರ್ಚ್ 9, 2021
23 °C

ಸುನೀತಾ ಇಂದು ಅಂತರಿಕ್ಷಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುನೀತಾ ಇಂದು ಅಂತರಿಕ್ಷಕ್ಕೆ

ವಾಷಿಂಗ್ಟನ್ (ಪಿಟಿಐ): ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ನೆಲೆಸಿ ದಾಖಲೆ ಸೃಷ್ಟಿಸಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ ಭಾನುವಾರ ಎರಡನೇ ಬಾರಿ ಅಂತರಿಕ್ಷಕ್ಕೆ ತೆರಳಲಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ಗಗನಯಾತ್ರೆಗೆ ತೆರಳಿದ್ದರು.ಕಜಕ್‌ಸ್ತಾನದಲ್ಲಿರುವ ಬೈಕೊನುರ್ ಕೊಸ್ಮೊಡ್ರೊಮ್‌ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 8.40ಕ್ಕೆ (ಭಾರತೀಯ ಕಾಲಮಾನ ಬೆಳಿಗ್ಗೆ 8.10) ವೈಮಾನಿಕ ಎಂಜಿನಿಯರ್‌ಗಳಾದ ರಷ್ಯಾದ ಯೂರಿ ಮಾಲೆಂಚೆಂಕೊ ಮತ್ತು ಜಪಾನಿನ ಅಕಿಹಿಕೊ ಹೊಶಿದೆ ಅವರೊಂದಿಗೆ ಸುನೀತಾ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ನಾಸಾ ಹೇಳಿದೆ.ಮೂವರು ಸಿಬ್ಬಂದಿಯನ್ನೊಳಗೊಂಡ ಸೊಯುಜ್ ಟಿಎಂಎ-05ಎಂ ಗಗನನೌಕೆ ಮಂಗಳವಾರ ಅಂತರಿಕ್ಷದಲ್ಲಿರುವ ನಿಲ್ದಾಣವನ್ನು ಸಂಧಿಸಲಿದೆ. ವೈಮಾನಿಕ ಎಂಜಿನಿಯರ್ ಆಗಿರುವ ಸುನೀತಾ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಎರಡು ಬಾರಿ ಅಂತರಿಕ್ಷ ನಡಿಗೆ ಕೈಗೊಳ್ಳಲಿದ್ದಾರೆ. ಜೊತೆಗೆ ನಿಲ್ದಾಣದಲ್ಲಿ ವೈಜ್ಞಾನಿಕ ಸಂಶೋಧನೆಯನ್ನೂ ಮಾಡಲಿದ್ದಾರೆ.ಸುನೀತಾ ಅವರ ತಂದೆ ಗುಜರಾತ್ ಮೂಲದವರು. ನಾಸಾ 1998ರಲ್ಲಿ ಸುನೀತಾ ಅವರನ್ನು ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತ್ತು. 2006ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಡೆದಿದ್ದ 14ನೇ ಮಾಹಾಯಾತ್ರೆಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಆಗ ಅವರು ಅಂತರಿಕ್ಷದಲ್ಲಿ ಅತೀ ಹೆಚ್ಚು ಸಮಯ ಕಳೆದ      (195 ದಿನಗಳು) ಮೊದಲ ಮಹಿಳೆ ಎಂಬ ದಾಖಲೆಯೂ ಸುನೀತಾ ಹೆಸರಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.