ಬುಧವಾರ, ಜೂನ್ 23, 2021
24 °C

ಸುರಕ್ಷಿತ ಕಾಮಗಾರಿಗೆ ಆಗ್ರಹ

ಕಾಡನೂರು ರಾಮಶೇಷ Updated:

ಅಕ್ಷರ ಗಾತ್ರ : | |

ಮೆಟ್ರೊ ಕಾಮಗಾರಿಯಿಂದ ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿರುವ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಹಲವಾರು ಅನಾನುಕೂಲಗಳಾಗಿವೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು, ಶಾಸಕರು, ಸಚಿವರು, ಬಿ.ಬಿ.ಎಂ.ಪಿ. ವಾರ್ಡ್ ಸದಸ್ಯರು, ಸಚಿವರು ಇನ್ನೂ ಜಾಣ ಕುರುಡು, ಕಿವುಡು ನಟಿಸುತ್ತಿರುವುದು ಎಂತಹ ವಿಪರ್ಯಾಸ! ಮೆಟ್ರೊ ಕಾಮಗಾರಿ ನಡೆಯುತ್ತಿರುವುದು ನಗರದ ಬಹುತೇಕ ಪ್ರದೇಶಗಳ ರಸ್ತೆಗಳು, ಪಾದಚಾರಿ ರಸ್ತೆಗಳು ಹಾಳಾಗಿವೆ. ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ.

ಕಾಮಗಾರಿ ಧೂಳಿನಿಂದ ವಾಹನ ಚಾಲಕರಿಗೆ ಅಲರ್ಜಿ, ಕೆಮ್ಮು, ನೆಗಡಿ ಇನ್ನಿತರ ರೋಗಗಳು ಬಂದಿವೆ. ಇಷ್ಟಾದರೂ ರಾಜ್ಯ ಸರ್ಕಾರ, ಬಿ.ಬಿ.ಎಂ.ಪಿ., ಮೆಟ್ರೊ ಸಂಸ್ಥೆ ಸಚಿವರು, ಶಾಸಕರು, ಜನತೆಯ ಆರೋಗ್ಯಕ್ಕೆ ಧಕ್ಕೆಯಾಗದಂತೆ ಮೆಟ್ರೊ ಕಾಮಗಾರಿ ಕೈಗೊಳ್ಳಬೇಕು ಎನ್ನುವ ಎಚ್ಚರಿಕೆಯ ಕ್ರಮಗಳನ್ನು ನಾಗರೀಕತೆಯನ್ನು ಪ್ರದರ್ಶಿಸುವುದು ಎಂದು!?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.