ಬುಧವಾರ, 17 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು
Published 17 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶಿಕ್ಷಕ ವರ್ಗದವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಸಿಗುವುದು. ಸಹನಾಶೀಲರಾಗಿ ವರ್ತಿಸಿದಲ್ಲಿ ಪ್ರಯತ್ನಬಲಕ್ಕೆ ಸರಿಯಾದ ಯಶಸ್ಸು ಸಿಗುತ್ತದೆ. ಆತಂಕವು ದೂರವಾಗುತ್ತದೆ.
ವೃಷಭ
ಸಮಾಜದಲ್ಲಿ ಅಸಭ್ಯವಾಗಿ ವರ್ತಿಸದೆ ಗೌರವಾನ್ವಿತವಾಗಿ ಬದುಕುವುದನ್ನು ರೂಢಿಸಿಕೊಳ್ಳಿರಿ. ಮಾಡುವ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ.
ಮಿಥುನ
ವೃತ್ತಿ ಜೀವನಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಆಪ್ತರೊಬ್ಬರ ಸಲಹೆ ಕೇಳುವಿರಿ. ಒಂದು ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸುತ್ತೀರಿ. ಕೆಲಸದ ಒತ್ತಡ ಕಡಿಮೆಯಾಗಲಿದೆ.
ಕರ್ಕಾಟಕ
ಮನೆಯಲ್ಲಿ ಶಾಂತ ವಾತಾವರಣವಿದ್ದು, ನಿಧಾನಗತಿಯ ಕೆಲಸ ಕಾರ್ಯಗಳು ಚುರುಕಾಗಿ ನೆಮ್ಮದಿ ಬರುವುದು. ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಸಿಗುವುದು.
ಸಿಂಹ
ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಅಥವಾ ಸಂಧಾನ ಮೂಲಕ ಬಗೆ ಹರಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದು ಒಳ್ಳೆಯದು. ಬದಲಾವಣೆಯ ಲಕ್ಷಣಗಳು ಕಣ್ಣಿಗೆ ಬೀಳಲಿವೆ.
ಕನ್ಯಾ
ತಂದೆ ತಾಯಿಯರ ಶುಶ್ರೂಷೆ, ಚಿಕಿತ್ಸೆ ಕಾರಣಕ್ಕೆ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಾಣುವಿರಿ. ವಿಮಾ ಕ್ಷೇತ್ರದಿಂದ ಆಗಬೇಕಾದ ಸಹಕಾರದಲ್ಲಿ ಗೊಂದಲಗಳು ಮೂಡಲಿವೆ. ದಿಢೀರ್ ಪ್ರಯಾಣ ಸಂಭವಿಸಬಹುದು.
ತುಲಾ
ಗೃಹ ನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ಆರ್ಥಿಕತೆ ಸ್ವಲ್ಪ ಮಟ್ಟಿನ ತೊಂದರೆಯನ್ನು ಸೃಷ್ಟಿ ಮಾಡುವುದು. ಶಿಲ್ಪಿಗಳಿಗೆ, ಸಮುದ್ರೋತ್ಪನ್ನಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಲಾಭ ಸಿಗಲಿದೆ.
ವೃಶ್ಚಿಕ
ಎಲ್ಲಾ ಆಸೆಗಳನ್ನು ಕೈಬಿಟ್ಟು ಜೀವನ ನಡೆಸುವ ಸಮಯದಲ್ಲಿ ಪುನಃ ಅದೃಷ್ಟ ಕೈ ಬೀಸಿ ಕರೆಯುವುದು. ಕೆಲಸಗಳು ನಿಧಾನಗತಿಯಲ್ಲಿ ಸಾಗುವುದಕ್ಕೆ ಮನಸ್ಸಿಗೆ ಬೇಸರ ಉಂಟಾಗುವುದು.
ಧನು
ಕೃಷಿಕ್ಷೇತ್ರದಲ್ಲಿ ಇರುವವರಿಗೆ ಅಧಿಕ ಲಾಭ. ಅದರಲ್ಲೂ ತರಕಾರಿ ಮಾರಾಟಗಾರರಿಗೆ ಕುಬೇರನ ಅನುಗ್ರಹವು ಸಿಗಲಿದೆ. ಹರಿತಾದ ವಸ್ತುಗಳ, ಯಂತ್ರಗಳ ಜೊತೆ ಕೆಲಸ ಮಾಡುವವರು ಜಾಗ್ರತರಾಗಿರಿ.
ಮಕರ
ವಂಶಪಾರಂಪರಿಕವಾಗಿ ಬಂದ ವ್ಯಾಪಾರ ಅಥವಾ ವೃತ್ತಿಯಲ್ಲಿ ಮತ್ತಷ್ಟು ಏಳಿಗೆ ಕಾಣಲಿದೆ. ಶತ್ರುಗಳ ಗಾಳಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸಬೇಕು. ಸಮ್ಮಿಶ್ರ ಫಲವನ್ನು ಕಾಣುವಿರಿ.
ಕುಂಭ
ರಾಜಕಾರಣಿಗಳೊಂದಿಗೆ ಅಧಿಕವಾಗಿ ಬೆಳೆಸಿಕೊಂಡ ಒಡನಾಟವು ಕಾರಾಗೃಹ ವಾಸದಂತಹ ಅಪಾಯದ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಆಸ್ತಿ ವಿಷಯಗಳನ್ನು ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ.
ಮೀನ
ವೃತ್ತಿ ಮಾಡುವ ಸ್ಥಳದಲ್ಲಿ ಯಾವುದೇ ವಾದ ವಿವಾದಗಳು ನಡೆಸಬೇಡಿ. ಇದು ಕಾರ್ಯ ಸಾಧನೆಗೆ ಅಡ್ಡಿಯಾಗುವುದು. ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ನಿಮಗಾಗಿ ತೆರೆದಿದೆ.
ADVERTISEMENT
ADVERTISEMENT