ದಿನ ಭವಿಷ್ಯ: ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ
Published 16 ಡಿಸೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸಗಾರರಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಅನುಸರಿಸಿದ ಮಾರ್ಗ ಮೆಚ್ಚಿ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಮನೆ ಕಟ್ಟುವ ಬಗ್ಗೆ ಹಿರಿಯರ ಹಾಗೂ ಮನೆಯವರ ಅಭಿಪ್ರಾಯವನ್ನು ಸಂಗ್ರಹಿಸಿ.
ವೃಷಭ
ಶತ್ರುಗಳು ವಂಚನೆ ಮಾಡುವ ಸಲುವಾಗಿ ಮಿತ್ರರಾಗುವಂತೆ ನಟನೆ ಮಾಡಿಯಾರು. ಸ್ವಪ್ನದಲ್ಲಿ ಕೂಡಾ ಅಂಥವರ ಬಗ್ಗೆ ಜಾಗ್ರತರಾಗಿರಿ. ಧನಾಗಮನ ಬಹುಪಾಲು ಅನವಶ್ಯಕವಾಗಿ ವೆಚ್ಚವಾಗಲಿದೆ.
ಮಿಥುನ
ಗೃಹಿಣಿಯರು ಆಹಾರ ತಯಾರಿಕೆಯ ವಿಚಾರದಲ್ಲಿ ಉತ್ತಮ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು. ಸಾಹಿತ್ಯ ವಲಯದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
ಕರ್ಕಾಟಕ
ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದರಿಂದಾಗಿ ಇತರರ ಅವಲಂಬನೆ ಕಡಿಮೆಯಾಗುವುದು. ಹಲವು ದಿನಗಳ ನಂತರ ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ.
ಸಿಂಹ
ಸಹೋದರರಲ್ಲಿನ ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದು, ತಂದೆಯವರ ಮಾತಿನಂತೆಯೇ ನಡೆಯಲು ಒಪ್ಪುವಿರಿ. ರಾಸಾಯನಿಕ ವಸ್ತುಗಳ ಮಾರಾಟದಿಂದ ಲಾಭ ಕಾಣುವಿರಿ. ಚಿಂತೆಗೊಳಗಾಗದಿರಿ.
ಕನ್ಯಾ
ಸಹೋದರನಲ್ಲಿ ಮತ್ತು ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸುವುದರಿಂದ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುವುದು. ಗೆಳೆತನಕ್ಕೆ ಸಂಬಂಧಿಸಿದ ಗುಪ್ತ ವಿಚಾರ ಸೋರಿಕೆಯಾಗಬಹುದು.
ತುಲಾ
ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಜರೂರಿನಲ್ಲಿ ಚರ್ಚೆ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಸಣ್ಣ ಕೈಗಾರಿಕೋದ್ಯಮದವರಿಗೆ ಸರ್ಕಾರದಿಂದ ಸಹಕಾರ ದೊರೆಯಲಿದೆ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಓದು ಅಥವಾ ಉದ್ಯೋಗದ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸಲಹೆ ದೊರೆಯಲಿದೆ. ನಿಮ್ಮ ನಡೆಯು ಮೇಲಧಿಕಾರಿ ಅಥವಾ ಪಾಲುದಾರರಿಗೆ ಇಷ್ಟವಾಗುವ ರೀತಿಯಲ್ಲಿ ಇರುವುದು ಉತ್ತಮ.
ಧನು
ಮನೆಯಲ್ಲಿ ದೂರದ ಸಂಬಂಧಿಕರೊಬ್ಬರ ಆಗಮನದಿಂದ ಸಡಗರ ಸೃಷ್ಟಿಸಲಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಂಭವವಿದೆ.
ಮಕರ
ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಗಮನಹರಿಸಬೇಕಾಗುವುದು. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಮನೆಯವರಿಗೆ ಸಂತಸವಾಗುವುದು.
ಕುಂಭ
ಆಸ್ತಿ ಕೊಳ್ಳುವುದರಲ್ಲಾಗಲೀ, ಮನೆ ಕಟ್ಟುವ ವಿಚಾರದಲ್ಲಿ ಅದೃಷ್ಟವು ಇರುತ್ತದೆ. ನಾಯಕತ್ವದ ಗುಣಗಳನ್ನು ಪ್ರದರ್ಶಿಸುವುದರಿಂದ ಲಾಭವಿದೆ. ಚಿನ್ನ ಮೊದಲಾದ ದುಬಾರಿ ಲೋಹಗಳಿಗೆ ಹಣ ವಿನಿಯೋಗ ಮಾಡುವಿರಿ.
ಮೀನ
ಮನೆಯ ಆಸ್ತಿಯ ವಿಷಯದಲ್ಲಿ ಅನುಭವಸ್ಥರಿಂದ ಬರುವ ಸಲಹೆ ಸೂಚನೆಗಳಿಗೆ ಗಮನ ನೀಡಿ. ವೃತ್ತಿಪರ ಸಾಧನೆಗಳಿಂದಾಗಿ ಸೂಕ್ತ ಸ್ಥಾನಮಾನ ತಾನಾಗಿಯೇ ಒದಗಿ ಬರಲಿದೆ. ಷೇರು ವ್ಯಾಪಾರ ಅದೃಷ್ಟದಾಯಕ.