ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 2026ನೇ ಸಾಲಿನ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ಆಲ್ರೌಂಡ್ ಆಟಗಾರ ಕ್ಯಾಮರೂನ್ ಗ್ರೀನ್ ಬರೋಬ್ಬರಿ ₹25.20 ಕೋಟಿ ಮೊತ್ತಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ.

ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೂರನೇ ಅತಿ ದುಬಾರಿ ಆಟಗಾರ ಎನಿಸಿರುವ ಗ್ರೀನ್, 2026ರ ಐಪಿಎಲ್ ಮಿನಿ ಹರಾಜಿನ ಅತಿ ದುಬಾರಿ ಆಟಗಾರ ಎಂದೆನಿಸಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ನ ಅತಿ ದುಬಾರಿ ವಿದೇಶಿ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
.IPL Auction: ಅನ್ಕ್ಯಾಪ್ಡ್ ಭಾರತೀಯ ಆಟಗಾರರಿಗೆ ತೆರೆದ ಅದೃಷ್ಟದ ಬಾಗಿಲು.IPL Auction 2026: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರರ ಸಾಲಿಗೆ ಗ್ರೀನ್ .
ತನ್ನ ಮೆಚ್ಚಿನ ಆಟಗಾರನ ಖರೀದಿಗಾಗಿ ಬಿಡ್ನಲ್ಲಿ ಹೆಚ್ಚು ದುಡ್ಡು ಸುರಿಯುವುದನ್ನು ರೂಢಿ ಮಾಡಿಕೊಂಡಿರುವ ಕೆಕೆಆರ್, ಶ್ರೀಲಂಕಾದ ವೇಗಿ ಮತೀಶ ಪತಿರಣ ಅವರನ್ನು ₹18 ಕೋಟಿ ನೀಡಿ ಕೆಕೆಆರ್ ಖರೀದಿಸಿದೆ. ಪತಿರಣ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಎರಡನೇ ದುಬಾರಿ ಆಟಗಾರ ಎನಿಸಿದ್ದಾರೆ.

2024ರಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು ₹24.75 ಕೋಟಿಗೆ ಬಲೆ ಬೀಸಿದ್ದ ಕೆಕೆಆರ್, 2025ರಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ₹23.75 ಕೋಟಿಗೆ ಖರೀದಿಸಿತ್ತು.

ಪ್ರಶಾಂತ್, ಕಾರ್ತಿಕ್ಗೆ ಜಾಕ್ಪಾಟ್…

ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ ಅವರನ್ನು ತಲಾ ₹14.20 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೊಂಡುಕೊಳ್ಳುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಅನ್ಕ್ಯಾಪ್ಡ್ ಆಟಗಾರರು ಎಂಬ ಸಾಧನೆ ಮಾಡಿದ್ದಾರೆ. ಆ ಮೂಲಕ ಯುವ ಆಟಗಾರರು ಜಾಕ್ಪಾಟ್ ಪಡೆದಿದ್ದಾರೆ.

ಉತ್ತರ ಪ್ರದೇಶ ಮೂಲದ 20 ವರ್ಷದ ಆಲ್ರೌಂಡ್ ಆಟಗಾರ ಪ್ರಶಾಂತ್ ವೀರ್ ಅವರು ₹30 ಲಕ್ಷ ಮೂಲ ಬೆಲೆ ಹೊಂದಿದ್ದರು. ಅಂತಿಮವಾಗಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸುವಲ್ಲಿ ಯಶಸ್ವಿಯಾಯಿತು.

ಮತ್ತೊಂದೆಡೆ ರಾಜಸ್ಥಾನ ಮೂಲದ 19 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಅವರನ್ನು ₹14.20 ಕೋಟಿ ನೀಡಿ ಸಿಎಸ್ಕೆ ಖರೀದಿಸಿತು.

ಇನ್ನು ಜಮ್ಮು ಕಾಶ್ಮೀರ ಮೂಲದ 29 ವರ್ಷದ ಬೌಲಿಂಗ್ ಆಲ್ರೌಂಡರ್ ಆಕಿಬ್ ಡಾರ್ ಅವರು ₹8.4 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

ಹಾಗೆಯೇ ₹7.2ಕೋಟಿಗೆ ರವಿ ಬಿಷ್ಣೋಯಿ ಅವರನ್ನು ರಾಜಸ್ಥಾನ ರಾಯಲ್ಸ್ ಮತ್ತು ₹7ಕೋಟಿಗೆ ವೆಂಕಟೇಶ್ ಅಯ್ಯರ್ ಅವರನ್ನು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿಸಿದೆ.

ಕಳೆದ ಸಾಲಿನಲ್ಲಿ ₹23.75 ಕೋಟಿಗೆ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ಖರೀದಿಸಿತ್ತು.

ಐಪಿಎಲ್ ಮಿನಿ ಹರಾಜು 2026ರ ದುಬಾರಿ ಆಟಗಾರರ ಪಟ್ಟಿ:

ಕ್ಯಾಮರೂನ್ ಗ್ರೀನ್: ₹25.20 ಕೋಟಿ (ಕೆಕೆಆರ್)

ಮತೀಶ ಪತಿರಣ: ₹18 ಕೋಟಿ (ಕೆಕೆಆರ್)

ಕಾರ್ತಿಕ್ ಶರ್ಮಾ: ₹14.20 ಕೋಟಿ (ಸಿಎಸ್ಕೆ)

ಪ್ರಶಾಂತ್ ವೀರ್: ₹14.20 ಕೋಟಿ (ಸಿಎಸ್ಕೆ)

ಲಿಯಾಮ್ ಲಿವಿಂಗ್ಸ್ಟೋನ್: ₹13 ಕೋಟಿ (ಎಸ್ಆರ್ಎಚ್)

ಮುಸ್ತಾಫಿಜುರ್ ರಹಮಾನ್: ₹9.2 ಕೋಟಿ (ಕೆಕೆಆರ್)

ಜೋಶ್ ಇಂಗ್ಲಿಸ್: ₹8.6 ಕೋಟಿ (ಎಲ್ಎಸ್ಜಿ)

ಆಕಿಬ್ ಡಾರ್: ₹8.4 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)

ರವಿ ಬಿಷ್ಣೋಯಿ: ₹7.2 ಕೋಟಿ (ರಾಜಸ್ಥಾನ ರಾಯಲ್ಸ್)

ವೆಂಕಟೇಶ್ ಅಯ್ಯರ್: ₹7 ಕೋಟಿ (ಆರ್ಸಿಬಿ)

ಜೇಸನ್ ಹೋಲ್ಡರ್: ₹7 ಕೋಟಿ (ಜಿಟಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.