ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 2026ನೇ ಸಾಲಿನ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಬರೋಬ್ಬರಿ ₹25.20 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ.

₹2 ಕೋಟಿ ಮೂಲ ಬೆಲೆಯ ಆಸೀಸ್ ಆಲ್ರೌಂಡರ್ ಆಟಗಾರನನ್ನು ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
.IPL Auction: ₹ 5.2 ಕೋಟಿಗೆ RCB ಪಾಲಾದ 23 ವರ್ಷದ ಆಲ್ರೌಂಡರ್ ಮಂಗೇಶ್ ಯಾದವ್.IPL Auction ದಾಖಲೆ ಮೊತ್ತಕ್ಕೆ CSK ಸೇರಿದ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ.
ಆ ಮೂಲಕ ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲೇ ಮೂರನೇ ಅತಿ ದುಬಾರಿ ಆಟಗಾರ ಎಂದೆನಿಸಿದ್ದಾರೆ. ಅಲ್ಲದೆ ಐಪಿಎಲ್ನ ಅತಿ ದುಬಾರಿ ವಿದೇಶಿ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇದೇ ಹರಾಜಿನಲ್ಲಿ ಶ್ರೀಲಂಕಾದ ವೇಗಿ ಮತೀಶ ಪತಿರಣ ಅವರನ್ನು ₹18 ಕೋಟಿ ನೀಡಿ ಕೆಕೆಆರ್ ಖರೀದಿಸಿದೆ.

ಐಪಿಎಲ್ನ ದುಬಾರಿ ಆಟಗಾರ ಎಂಬ ದಾಖಲೆ ಭಾರತದ ರಿಷಭ್ ಪಂತ್ ಅವರ ಹೆಸರಲ್ಲೇ ಇದೆ. 2025ರಲ್ಲಿ ₹27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಖರೀದಿಸಿತ್ತು.

ಐಪಿಎಲ್ನ ಅತಿ ದುಬಾರಿ ವಿದೇಶಿ ಆಟಗಾರರ ಸಾಲಿನಲ್ಲಿ ಆಸ್ಟ್ರೇಲಿಯಾದವರೆ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಹಾಗೂ ಪ್ಯಾಟ್ ಕಮಿನ್ಸ್ (₹20.50 ಕೋಟಿ) ದಾಖಲೆಯನ್ನು ಗ್ರೀನ್ ಮುರಿದಿದ್ದಾರೆ.

2023ರಲ್ಲಿ ಐಪಿಎಲ್ಗೆ ಗ್ರೀನ್ ಪಾದರ್ಪಣೆ ಮಾಡಿದ್ದರು. ಅಂದು ₹17.5 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಬಳಿಕ ಅದೇ ಮೊತ್ತಕ್ಕೆ 2024ಲ್ಲಿ ಆರ್ಸಿಬಿ ಪಾಲಾಗಿದ್ದರು. ಆರ್ಸಿಬಿ ಪರ 255 ರನ್ ಹಾಗೂ 10 ವಿಕೆಟ್ ಗಳಿಸಿದ್ದರು. ಗಾಯಾಳುವಾಗಿದ್ದರಿಂದ 2025ರ ಮೆಗಾ ಹರಾಜಿಗೆ ಹೆಸರು ನಮೂದಿಸಿರಲಿಲ್ಲ.

ಐಪಿಎಲ್ನ ಅತಿ ದುಬಾರಿ ಆಟಗಾರರ ಪಟ್ಟಿ:

ರಿಷಭ್ ಪಂತ್: ₹27 ಕೋಟಿ (ಲಖನೌ, 2025)

ಶ್ರೇಯಸ್ ಅಯ್ಯರ್: ₹26.75 ಕೋಟಿ (ಪಂಜಾಬ್, 2025)

ಕ್ಯಾಮರೂನ್ ಗ್ರೀನ್: ₹25.20 ಕೋಟಿ (ಕೆಕೆಆರ್, 2026)

ಮಿಚೆಲ್ ಸ್ಟಾರ್ಕ್: ₹24.75 ಕೋಟಿ (ಕೆಕೆಆರ್, 2024)

ವೆಂಕಟೇಶ್ ಅಯ್ಯರ್: ₹23.75 ಕೋಟಿ (ಕೆಕೆಆರ್, 2025)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.