ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಹಿಂದಿನ ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳ 4ನೇ ಮಹಾ ಸಮಾರಾಧನೆ ಅಂಗವಾಗಿ ಇದೇ 6ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠ ಆಯೋಜಿಸಿದೆ.

ಮಠದ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿವೆ. 7ರಂದು ಪೂರ್ವಾರಾಧನೆ, 8ರಂದು ಮಧ್ಯಾರಾಧನೆ, 9ರಂದು ಉತ್ತರಾರಾಧನೆ ನಡೆಯಲಿದೆ. ವಿಶೇಷ ಪೂಜೆ, ವಿಚಾರಸಂಕಿರಣ, ಜ್ಞಾನಯಜ್ಞ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಪುರಸ್ಕಾರ ನಡೆಯಲಿದೆ.

ಮಹಾ ಸಮಾರಾಧನೆ ನಿಮಿತ್ತ ಪ್ರತಿನಿತ್ಯ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯ ಪಾದಪೂಜೆ, ಉಪನ್ಯಾಸ, ಸಂಸ್ಥಾನ ಪೂಜೆ, ಸಂಜೆ ದೀವಟಿಗೆ ಸೇವಾ ಮತ್ತು ಪ್ರಕಾರ ಉತ್ಸವ ಜರುಗಲಿದೆ.

`ಶ್ರೀ ಸುಶಮೀಂದ್ರರ ಜೀವನ ಮತ್ತು ಸಾಧನೆ~ ಕುರಿತು 8ರಂದು ಬೆಂಗಳೂರಿನ ಡಾ.ಮಾದನೂರು ಪವಮಾನಾಚಾರ್ಯ, 9ರಂದು ವಿದ್ವಾನ್ ಪಂಚಮುಖಿ ಪವಮಾನಾಚಾರ್ಯ ಮಾತನಾಡಿ ನುಡಿನಮನ ಸಲ್ಲಿಸಲಿದ್ದಾರೆ. 6ರಿಂದ 10ರವರೆಗೆ ಪ್ರತಿನಿತ್ಯ ನಡೆಯುವ `ಷೋಡಸ ಸಂಸ್ಕಾರ~ ಕಾರ್ಯಕ್ರಮದಲ್ಲಿ 16 ವಿಷಯಗಳ ಬಗ್ಗೆ 8 ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ.

ವಿಚಾರಸಂಕಿರಣ: 7ರಂದು ವಿದ್ವಾನ್ ರಾಜಾ ಎಸ್ ಪವಮಾನಾಚಾರ್ಯರ ಅಧ್ಯಕ್ಷತೆಯಲ್ಲಿ ವಿಚಾರಸಂಕಿರಣ ನಡೆಯುವುದು. ಮಂತ್ರಾಲಯ ಗುರುಸಾರ್ವಭೌಮ ವಿದ್ಯಪೀಠದ ಕುಲಪತಿ ಡಾ.ವಿ.ಆರ್ ಪಂಚಮುಖಿ ಪ್ರಧಾನ ಭಾಷಣ ಮಾಡಲಿದ್ದಾರೆ.

ಶ್ರೀ ವಿಜಯ ದಾಸರ ಕೃತಿಗಳು ಎಂಬ ವಿಷಯ ಕುರಿತು ವಿದ್ವಾನ್ ಸುಸ್ವರಂ ನಾಗಾರಾಜಾರ್ಯ, ಗೋಪಾಲದಾಸರ ಕೃತಿಗಳ ಕುರಿತು ವಿದ್ವಾನ್ ಗುರುರಾಜಾರ್ಯ ಗುಡಿ, ಜಗನ್ನಾಥದಾಸರ ಕೃತಿಗಳ ಕುರಿತು ವಿದ್ವಾನ್ ಉಡುಪಿ ಕೃಷ್ಣಾಚಾರ್ಯ, ವ್ಯಾಸ ಸಾಹಿತ್ಯ ಕುರಿತು ಡಾ. ತಿರುಮಲಾಚಾರ್ಯ ಕುಲಕರ್ಣಿ ಮಾತನಾಡಲಿದ್ದಾರೆ.

ಪ್ರಶಸ್ತಿ: ಸುಶಮೀ-ರಾಘವೇಂದ್ರ ಪ್ರಶಸ್ತಿಯನ್ನು ಕೊಯಮತ್ತೂರಿನ ಕೆ.ಜಿ ಸೌಂದರರಾಜ್ ಹಾಗೂ ಮರಣೋತ್ತರವಾಗಿ ರಾಯಚೂರು ಜಿಲ್ಲೆ ಲಿಂಗಸುಗೂರಿನ ಸುಳಾದಿ ಕುಪ್ಪೆರಾಯ ಅವರಿಗೆ ಪ್ರಕಟಿಸಲಾಗಿದೆ.

ಸುಶಮೀ ಪುರಸ್ಕಾರ: ವಿದ್ವಾನ್ ಉಂದರು ಶ್ರೀನಿವಾಸ ಮೂರ್ತಿ ಆಚಾರ್ಯ, ವಿದ್ವಾನ್ ಜಯತೀರ್ಥಾಚಾರ್ಯ, ಡಾ.ಎಸ್ ಗುರುರಾಜಾಚಾರ್ಯ, ವಿದ್ವಾನ್ ಎನ್ಎಪಿಎಸ್ ರಾವ್ (ದ್ವೈತ ವೇದಾಂತ), ಡಾ. ಗಣಪತಿ ಭಟ್, ಡಾ.ವಿಶ್ವನಾಥ ಶಾಸ್ತ್ರೀ, ವಿದ್ವಾನ್ ಸಂಜೀವಾಚಾರ್ಯ (ಸಂಸ್ಕೃತ ಸಾಹಿತ್ಯ), ರಾಯಚೂರಿನ ಕೆ ಸತ್ಯನಾರಾಯಣ, ಎನ್ ನಾಗರಾಜ, ಬಳ್ಳಾರಿಯ ಮತ್ತಿಹಳ್ಳಿ ಅಹಿರಾಜ್, ಪಿ.ಎಸ್ ಶಶಿಧರ, ಶ್ರೀಕಾಂತ (ಪತ್ರಿಕೋದ್ಯಮ), ರಮೇಶ ಕುಲಕರ್ಣಿ, ಎನ್ ರಾಮಚಂದ್ರರಾವ್, ಹನುಮಂತಪುರಂ ಭೂವರಾಹನ, ಸಿಂಗೀತಂ ಶ್ರೀನಿವಾಸರಾವ್ (ಸಂಗೀತ ಕ್ಷೇತ್ರ), ಶಾಮಸುಂದರ ಮುತಾಲಿಕ, ಜಗನ್ನಾಥ ದಾಸ, ದಿದ್ದಿಗಿ ಜಗನ್ನಾಥರಾಯ, ಮುಂಡರಗಿ ಪ್ರಾಣೇಶ, ಪುರಂದರ ಜೋಶಿ (ದಾಸ ಸಾಹಿತ್ಯ), ಕೆ.ಎಸ್ ರಾಮಸುಬ್ಬಣ್ಣ, ಜಿ ರಾಜಶೇಖರನ್, ರಂಗರಾಜನ್, ತಿರುಮಲರೆಡ್ಡಿ, ಡಿ.ವಿ ನಾಗಭೂಷಣ, ಡಾ.ಎನ್ ಕಾಮಕೋಟಿ, ಡಾ.ವೈದ್ಯ ಸುಬ್ರಮಣಿಯನ್, ಪಿ.ಆರ್ ಸೋಮಸುಂದರಂ (ಸಮಾಜ ಸೇವೆ), ಅಲ್ಲದೇ ಶಾರದಾ ಸಂಗೀತ ಪಾಠ ಶಾಲೆ, ಗಣೇಶ ಚಾರಿಟೇಬಲ್ ಟ್ರಸ್ಟ್ ಹಾಗೂ ಕುಮಾರ ವಿಜಯ ಕಿವುಡ ಮತ್ತು ಮೂಗ ಮಕ್ಕಳ ಶಾಲೆ ಇವರಿಗೆ ಈ ಬಾರಿಯ ಸುಶಮೀ ಪುರಸ್ಕಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.