ಗುರುವಾರ , ಏಪ್ರಿಲ್ 22, 2021
28 °C

ಸೂಕ್ತಿ- ಛಾಯಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಹಾನ್ ಮಾರ್ಕ್ಸ್‌ವಾದಿ ಚಿಂತಕರು, ಎಸ್‌ಯುಸಿಐ ಪಕ್ಷದ ಸಂಸ್ಥಾಪಕರಾದ ಕಾಮ್ರೇಡ್ ಶಿವದಾಸ್ ಘೋಷ್ ಅವರ 36ನೇ ಸ್ಮರಣ ದಿನದ ಅಂಗವಾಗಿ ಸೋಮವಾರ ಇಲ್ಲಿನ ತಹಸೀಲ್ದಾರ ಕಚೇರಿ ಎದುರು ಎಸ್‌ಯುಸಿಐ ಜಿಲ್ಲಾ ಸಮಿತಿಯು ಸೂಕ್ತಿ, ಛಾಯಾಚಿತ್ರ ಪ್ರದರ್ಶನ ಹಾಗೂ ಅವರ ಸಾಹಿತ್ಯ ಕೃತಿಗಳ ಮಾರಾಟವನ್ನು ಆಯೋಜಿಸಿತ್ತು.ಈ ಪ್ರದರ್ಶನವನ್ನು ಶಾಲಾ ಮಕ್ಕಳು, ಕಾಲೇಜು ಯುವಕ-ಯುವತಿಯರು, ಜನಸಾಮಾನ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸೇರಿದಂತೆ ಅನೇಕ ಜನರು ವೀಕ್ಷಣೆ ಮಾಡಿದರು. ಶಿವದಾಸ್ ಘೋಷ್ ಅವರ ಚಿಂತನೆ ಮತ್ತು ಆದರ್ಶಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಡಾ.ಟಿ.ಎಸ್ ಸುನೀತ್‌ಕುಮಾರ್ ಅವರು, ಅತ್ಯಂತ ಎಳೆಯ ವಯಸ್ಸಿನಲ್ಲಿಯೇ ಸ್ವಾತಂತ್ರ್ಯಾದೋಲನದಲ್ಲಿ ಧುಮುಕಿದ ಶಿವದಾಸ್ ಘೋಷ್ ಅವರು ಇದೇ ಆಗಸ್ಟ್ 5ಕ್ಕೆ ಅಗಲಿ 36 ವರ್ಷ ಗತಿಸಿದವು.  ಘೋಷ್ ಅವರು ಎಲ್ಲ ಧರ್ಮ ಹಾಗೂ ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದರು. ಕೇವಲ ಮಾರ್ಕ್ಸ್‌ವಾದ ಮಾತ್ರವೇ ಈ ಅತ್ಯಂತ ವೈಜ್ಞಾನಿಕ ಮತ್ತು ಶ್ರೇಷ್ಠವಾದ ತತ್ವಶಾಸ್ತ್ರ ಎಂದು ಅರ್ಥ ಮಾಡಿಕೊಂಡಿದ್ದರು ಎಂದು ಹೇಳಿದರು.ಬಂಡವಾಳ ಶಾಹಿ ವ್ಯವಸ್ಥೆ ಕಿತ್ತು ಹಾಕಿ ಶೋಷಣೆಯನ್ನು ಕೊನೆಗೊಳಿಸಲು ಸಮಾಜವಾದಿ ಕ್ರಾಂತಿಯು ಅಗತ್ಯ. ಅದನ್ನು ನೆರವೇರಿಸಲು ನೈಜ ಕಮ್ಯೂನಿಸ್ಟ್ ಪಕ್ಷ ಬೇಕು ಎಂದು ಪ್ರತಿಪಾದಿಸಿದ್ದರು. 1948ರ ಏಪ್ರಿಲ್ 24ರಂದು ಎಸ್‌ಯುಸಿಐ ಎಂಬ ನೈಜ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದರು ಎಂದು ವಿವರಿಸಿದರು.ಸಂಘಟನೆ ಜಿಲ್ಲಾ ಸಮಿತಿ ಸದಸ್ಯರಾದ ಅಪರ್ಣಾ ಬಿ.ಆರ್, ರಾಮಣ್ಣ ಎಂ, ಮಹೇಶ ಸಿ, ಚನ್ನಬಸವ ಜಾನೇಕಲ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.