ಕಳೆದ ಏಪ್ರಿಲ್ 19ರಂದು ವಿಶ್ವದ ಎಲ್ಲ ವಿಜ್ಞಾನ ಪತ್ರಿಕೆಗಳಲ್ಲಿ ಜೈವಿಕ ತಂತ್ರಜ್ಞಾನದ (ಬಿಟಿ) ಮಹತ್ವ ಕುರಿತ ಲೇಖನ ಪ್ರಕಟವಾಗಿದ್ದವು. ಬ್ರಿಟನ್ನ ಜೈವಿಕ ವಿಜ್ಞಾನಿ ಫಿಲಿಪ್ ಹಾಲಿಗರ್ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಮಾನವನ ವಂಶವಾಹಿಯನ್ನೇ ನಕಲು ಮಾಡುವ ಸಾಧ್ಯತೆ (ಎಕ್ಸ್ಎನ್ಎ) ಅನಾವರಣಗೊಂಡಿತ್ತು. ಇಡಿ ವಿಶ್ವ ಬಿಟಿ ಕುರಿತು ಮತ್ತೊಮ್ಮೆ ಗಮನ ಹರಿಸಲು ಇದು ನೆಪವಾಯಿತು.

ಈ ಬೆಳವಣಿಗೆಯಾದ ಒಂದೂವರೆ ತಿಂಗಳ ಅಂತರದಲ್ಲಿ ತುಮಕೂರಿನ ಶ್ರೀದೇವಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ `ಬಿಟಿ~ ಕುರಿತ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು. ಕಳೆದ ಜೂನ್ 9ರಂದು ಮುಕ್ತಾಯವಾದ ಕಾರ್ಯಾಗಾರದಲ್ಲಿ ಒಟ್ಟು 130 ವೈಜ್ಞಾನಿಕ ಪ್ರಬಂಧಗಳು ಮಂಡನೆಯಾದವು.

ಪಶ್ಚಿಮಘಟ್ಟದ ಜೀವ ವೈವಿಧ್ಯ, ಕೃಷಿ ಇಳುವರಿ, ಮನುಷ್ಯನ ರೋಗ ನಿರೋಧಕ ಶಕ್ತಿ, ಮಾನವ ಅಭ್ಯುದಯಕ್ಕೆ ಹಾಗೂ ಪರಿಸರದ ಉಳಿವಿಗೆ ಬ್ಯಾಕ್ಟೀರಿಯಾ- ಶಿಲೀಂಧ್ರಗಳ ಕೊಡುಗೆ, ಜೈವಿಕ ತಂತ್ರಜ್ಞಾನದ ಹೊಸ ಸಾಧ್ಯತೆಗಳು ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆಯಿತು.

`ಭಾರತದಲ್ಲಿ ಜೈವಿಕ ತಂತ್ರಜ್ಞಾನದ ಮಹತ್ವ~ ಕುರಿತು ಶ್ರೀದೇವಿ ಕಾಲೇಜು ಪ್ರಾಚಾರ್ಯ ಸುಕುಮಾರನ್ ಹಲವು ಪ್ರಮುಖ ವಿಚಾರಗಳನ್ನು ಮಂಡಿಸಿದರು. `ಬಿಟಿ~ಯ ಮುಂದಿನ ಸಾಧ್ಯತೆ ಕುರಿತು ವಿಸ್ತೃತ ಚರ್ಚೆಗೆ ವೇದಿಕೆ ಒದಗಿಸಿದರು.

`ವಾತಾವರಣದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಹಾಗೂ ಮಾನವನಿಗೆ ಆಹಾರ ಹಾಗೂ ಆರೋಗ್ಯದ ಭದ್ರತೆ ಒದಗಿಸಲು ಜೈವಿಕ ತಂತ್ರಜ್ಞಾನ ಅತ್ಯಗತ್ಯ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಅತಿಹೆಚ್ಚು ಪ್ರಾಮುಖ್ಯತೆ ಇದೆ.

ನಮ್ಮ ದೇಶದಲ್ಲಿ ಸುಮಾರು 3 ಲಕ್ಷ ಜೈವಿಕ ತಂತ್ರಜ್ಞಾನ ಎಂಜಿನಿಯರ್ಗಳಿದ್ದಾರೆ. ಕೃಷಿಯಲ್ಲಿ ಇಳುವರಿ ಹೆಚ್ಚಿಸಲು ಜೈವಿಕ ತಂತ್ರಜ್ಞಾನ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ವ್ಯವಸ್ಥಿತ ಅಪಪ್ರಚಾರದಿಂದ ಸಾರ್ವಜನಿಕರು ಇಂಥ ಕುಲಾಂತರಿ ಉತ್ಪನ್ನಗಳನ್ನು ಒಪ್ಪಿಕೊಳ್ಳುತ್ತಿಲ್ಲ~ ಇತರ ವಿಚಾರಗಳು ಚರ್ಚೆಯಾದವು.

`ಜೈವಿಕ ತಂತ್ರಜ್ಞಾನ ಆಧರಿತ ಉದ್ದಿಮೆಗಳ ಸ್ಥಾಪನೆ ಸಂದರ್ಭದಲ್ಲಿ ಸಂಶೋಧನೆಗಾಗಿ ಅಪಾರ ಪ್ರಮಾಣದ ಹಣ ವ್ಯಯಿಸಬೇಕಾಗುತ್ತದೆ. ಜೈವಿಕ ತಂತ್ರಜ್ಞಾನದ ಕಾರ್ಖಾನೆಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಹೀಗಾಗಿ ತಂತ್ರಜ್ಞರಿಗೆ ಭಾರೀ ಪ್ರಮಾಣದಲ್ಲಿ ವೇತನ ನೀಡುವುದು ಕಷ್ಟ. ಹೀಗಾಗಿ ಜೈವಿಕ ತಂತ್ರಜ್ಞಾನ ಆಧಾರಿತ ಉದ್ದಿಮೆಗಳು ನಮ್ಮ ದೇಶದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತಿಲ್ಲ. ದೇಶದಲ್ಲಿ ಸುಮಾರು 325 ಬಿಟಿ ಉದ್ದಿಮೆಗಳು ಮಾತ್ರ ಹೆಜ್ಜೆ ಗುರುತು ಮೂಡಿಸಲು ಸಾಧ್ಯವಾಗಿದೆ~ ಎಂದು ಸುಕುಮಾರನ್ ಅಭಿಪ್ರಾಯಪಟ್ಟರು.

ವಿವಿಧ ದೇಶಗಳ 40 ಪ್ರಾಧ್ಯಾಪಕರು ಹಾಗೂ 260 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಕಾರ್ಯಾಗಾರದಲ್ಲಿ ಮಂಡನೆಯ ಪ್ರಬಂಧಗಳ ಶೀರ್ಷಿಕೆಗಳತ್ತ ಕಣ್ಣು ಹಾಯಿಸಿದರೆ ಅದರ ಮಹತ್ವ ಹಾಗೂ ಪ್ರಬಂಧ ಸಿದ್ಧಪಡಿಸಲು ಸಂಶೋಧಕರು ಮಾಡಿಕೊಂಡ ಸಿದ್ಧತೆ ಅರಿವಾಗುತ್ತದೆ.

ಬ್ರಿಟನ್ನ ಸ್ಟಾಕ್ವಕ್ಲೆಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರೂ ಏಂಜೆಲಿ ಏಡ್ರೆಡ್ ಎಬೆಲ್ `ಸೂಕ್ಷ್ಮ ಜೀವಿಗಳ ಉಪಯುಕ್ತತೆ~ ಕುರಿತು ಪ್ರಬಂಧ ಮಂಡಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸೂಕ್ಷ್ಮಾಣು ಜೀವಿಗಳ ಪಾತ್ರ, ಕ್ಯಾನ್ಸರ್ ಮತ್ತು ಡಯಾಬಿಟಿಸ್ ಔಷಧಿಗಳಿಗೆ ಸೂಕ್ಷ್ಮ ಜೀವಿಗಳ ಬಳಕೆ ಕುರಿತು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸಿದರು.

ತೈವಾನ್ ದೇಶದ ಸದರನ್ ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಚಾರ್ಲಸ್ ಜೆನ್ ಚಿನ್ `ಹಣಬೆಗಳಲ್ಲಿರುವ ಶಿಲೀಂಧ್ರಗಳ ಉಪಯುಕ್ತತತೆ~ ಕುರಿತು ಮಾಹಿತಿ ನೀಡಿದರು.

ಮಲೆಷೀಯನ್ ವಿಜ್ಞಾನ ವಿಶ್ವವಿದ್ಯಾನಿಲಯದ ಜೈವಿಕ ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಫಯಾಜ್ ಅಹಮದ್, ಡಯಾಬಿಟಿಸ್ ನಿವಾರಣೆಗೆ ಔಷಧೀಯ ಸಸ್ಯಗಳ ಬಳಕೆ ಕುರಿತು ವಿಸ್ತೃತ ಮಾಹಿತಿ ಒದಗಿಸಿದರು.

ಶ್ರೀಲಂಕಾದ ಕ್ಯಾಂಡಿ ನಗರದಲ್ಲಿರುವ ಪೆರೇಡೆನಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ನಿಮಲ್ ಸಾವಿತ್ರಿ ಕುಮಾರ್, `ಔಷಧಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕಗಳು ಮಾನವ ದೇಹದ ಮೇಲೆ ಬೀರುವ ದುಷ್ಪರಿಣಾಮ~ ಕುರಿತು ಹಲವು ಉದಾಹರಣೆಗಳನ್ನು ಪ್ರಸ್ತಾಪಿಸಿದರು. ಚಹಾ ಸೊಪ್ಪನ್ನು ಕುದಿಸಿದ ನೀರು ಕುಡಿಯುವುದರಿಂದ ಸಂಧಿವಾತ ಕಾಯಿಲೆ ಗುಣವಾಗುತ್ತದೆ ಎಂಬುದನ್ನು ಆಧಾರ ಸಹಿತ ನಿರೂಪಿಸಿದರು.

ಕಾರ್ಯಾಗಾರದಲ್ಲಿ ಮಾತನಾಡಿದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಕ್ಯಾನ್ಸರ್ ನಿವಾರಣೆಗೆ ಲ್ಯಾಪ್ಕಾಲ್ ಬಳಕೆ, ಹೊಂಗೆ ಎಣ್ಣೆಯಿಂದ ಜೈವಿಕ ಇಂಧನ, ನೀರಿನ ಗುಣಮಟ್ಟ ಪರಿಶೀಲನೆ ಕುರಿತು ಗಮನ ಸೆಳೆದರು.

ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧಕರು ಒಂದೇ ಸೂರಿನಡಿ ಸೇರುವುದೇ ಒಂದು ಅಪರೂಪದ ವಿದ್ಯಮಾನ. ಜೈವಿಕ ತಂತ್ರಜ್ಞಾನದ ಸಮಕಾಲೀನ ಬೆಳವಣಿಗೆ ಕುರಿತು ಅರಿಯಲು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನೆರವಾಯಿತು ಎಂದು ಸಮ್ಮೇಳನದ ಆಯೋಜಕ ಸಮಿತಿ ಕಾರ್ಯದರ್ಶಿ ಡಾ.ಗೋವಿಂದಪ್ಪ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.