ಶನಿವಾರ, ಮೇ 8, 2021
24 °C

ಸೂಕ್ಷ್ಮ ಸರಕುಗಳ ಆಮದು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೂಕ್ಷ್ಮ ಸರಕುಗಳ ಪಟ್ಟಿಗೆ ಸೇರಿದ ಹಣ್ಣು, ತರಕಾರಿ, ಕ್ಷೀರೋತ್ಪನ್ನ, ಖಾದ್ಯ ತೈಲ ಸೇರಿದಂತೆ ಹಲವು ಸರಕುಗಳ ಆಮದು 2011ರ ಏಪ್ರಿಲ್‌ನಿಂದ 2012ರ ಜನವರಿವರೆಗಿನ ಅವಧಿಯಲ್ಲಿ ಶೇ 42ರಷ್ಟು ಹೆಚ್ಚಳವಾಗಿದ್ದು, ರೂ. 83,714 ಕೋಟಿಯಷ್ಟು ಮೌಲ್ಯದ ವಿದೇಶಿ ಸರಕು ದೇಶದ ಮಾರುಕಟ್ಟೆ ಪ್ರವೇಶಿಸಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 58,697 ಕೋಟಿ ಮೌಲ್ಯದ  ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಪ್ರಮುಖವಾಗಿ ಇಂಡೋನೇಷ್ಯಾ, ಚೀನಾ, ಮಲೇಷ್ಯಾ, ಜರ್ಮನಿ, ಕೆನಡಾ, ಅಮೆರಿಕ ಮತ್ತು ಆಸ್ಟ್ರೇಲಿಯಾದಿಂದ ಆಮದು ಪ್ರಮಾಣ ಹೆಚ್ಚಿದ್ದರೆ, ಬ್ರೆಜಿಲ್‌ನಿಂದ ಈ ಬಾರಿ ಕಡಿಮೆ ಸರಕು ತರಿಸಿಕೊಳ್ಳಲಾಗಿದೆ.ಕಳೆದ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ರೂ. 7,932 ಕೋಟಿ  ಮೊತ್ತದ ಹಣ್ಣು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.