ಬುಧವಾರ, ಜನವರಿ 22, 2020
22 °C

ಸೂಗೂರೇಶ್ವರ ಜೋಡು ರಥೋತ್ಸವ: ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಾಡಿನ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ರಾಯಚೂರು ತಾಲ್ಲೂಕು ದೇವಸುಗೂರು ಗ್ರಾಮದ ದೇವಸುಗೂರು ದೇವರ ಜಾತ್ರೆ ಜೋಡು ರಥೋತ್ಸವ ಭಾನುವಾರ ಸಂಜೆ ನಡೆಯಿತು.ನಾಡಿನ ವಿವಿಧ ಭಾಗಗಳಿಂದ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಸೂಗೂರೇಶ್ವರ ದೇವರಿಗೆ ಭಕ್ತಿ ಸಲ್ಲಿಸಿದರು.ರಾಯಚೂರು, ಗುಲ್ಬರ್ಗ ಜಿಲ್ಲೆ, ಯಾದಗಿರಿ ಜಿಲ್ಲೆಗಳಿಂದ ಈಶಾನ್ಯ ಸಾರಿಗೆ ಸಂಸ್ಥೆಯು ಜಾತ್ರಾ ಮಹೋತ್ಸವ ನಿಮಿತ್ತ ವಿಶೇಷ ಬಸ್‌ ಸಂಚಾರ ವ್ಯವಸ್ಥೆ ಮಾಡಿತ್ತು.

ಪ್ರತಿಕ್ರಿಯಿಸಿ (+)