ಬುಧವಾರ, ಜನವರಿ 22, 2020
25 °C

ಸೂಚ್ಯಂಕ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 277 ಅಂಶಗಳಷ್ಟು ಚೇತರಿಕೆ ಕಂಡಿದ್ದು, ಕಳೆದ ಐದು ವಾರಗಳಲ್ಲೇ ಗರಿಷ್ಠ ಮಟ್ಟ 16,466 ಅಂಶಗಳಿಗೆ ಏರಿಕೆ ಪಡೆದಿದೆ.

ಮುಂಬರುವ  ತಿಂಗಳುಗಳಲ್ಲಿ ದೇಶದ ಆರ್ಥಿಕ ವೃದ್ಧಿ ದರ ಗಣನೀಯ ಚೇತರಿಕೆ ಕಾಣಲಿದೆ ಎನ್ನುವ ಸಂಗತಿ ವಹಿವಾಟಿಗೆ ಬಲ ತುಂಬಿತು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~   ಕೂಡ 93 ಅಂಶಗಳಷ್ಟು ಏರಿಕೆ ಕಂಡು 4,900 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಪ್ರತಿಕ್ರಿಯಿಸಿ (+)