ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರದ ವಹಿವಾಟಿನಲ್ಲಿ ಗರಿಷ್ಠ ಮಟ್ಟದ ಏರಿಕೆ ದಾಖಲಿಸಿದೆ.

ಐರೋಪ್ಯ ಒಕ್ಕೂಟದ ಸಾಲದ ಬಿಕ್ಕಟ್ಟು ಪರಿಹರಿಸಲು ಯೂರೋಪ್ ಮುಖಂಡರು ಕೊನೆಗೂ ಒಪ್ಪಂದಕ್ಕೆ ಬಂದಿರುವುದು ಮತ್ತು ಏಷ್ಯಾ ಸೇರಿದಂತೆ ಜಾಗತಿಕ ಷೇರುಪೇಟೆಗಳಲ್ಲಿ ಕಂಡು ಬಂದಿರುವ ಖರೀದಿ ಉತ್ಸಾಹವು ಇಲ್ಲಿಯೂ ಪ್ರತಿಫಲನಗೊಂಡಿತು. ಸೂಚ್ಯಂಕವು 516 ಅಂಶಗಳಷ್ಟು ಹೆಚ್ಚಳಗೊಂಡು 17,804.80ಕ್ಕೆ ದಿನದ ವಹಿವಾಟು ಕೊನೆಗೊಳಿಸಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಅಂದಾಜು ರೂ 1.5 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

ದಿನದ ಆರಂಭದಲ್ಲಿ ಸೂಚ್ಯಂಕವು 600 ಅಂಶಗಳವರೆಗೆ ಏರಿಕೆಯಾಗಿ, 17,908ಕ್ಕೆ ತಲುಪಿದ್ದರೂ ದಿನದಂತ್ಯದಲ್ಲಿ 17,804ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಆಗಸ್ಟ್ 29ರಂದು 567.50 ಅಂಶಗಳಷ್ಟು ಏರಿಕೆ ಕಂಡಿತ್ತು.
ಎಲ್ಲ 13 ವಲಯಗಳ ಷೇರು ಬೆಲೆಗಳು ಏರಿಕೆ ಕಂಡವು. ಲೋಹ, ರಿಯಾಲ್ಟಿ, ಬ್ಯಾಂಕಿಂಗ್, ಭಾರಿ ಯಂತ್ರೋಪಕರಣ ಮತ್ತು ಆಟೊಮೊಬೈಲ್ ಷೇರುಗಳೂ ಏರಿಕೆ ದಾಖಲಿಸಿದವು.ಮಾರುತಿ ಸುಜುಕಿ, ಭಾರ್ತಿ ಏರ್ಟೆಲ್ ಮತ್ತು ಬಜಾಜ್ ಆಟೊ ಹೊರತುಪಡಿಸಿ ಸಂವೇದಿ ಸೂಚ್ಯಂಕದ ಎಲ್ಲ 27 ಷೇರುಗಳು ಲಾಭ ಬಾಚಿಕೊಂಡವು.

ಅಮೆರಿಕದ ಆರ್ಥಿಕ ವೃದ್ಧಿ ದರವು ನಿರೀಕ್ಷೆಗಿಂತ ಉತ್ತಮವಾಗಿರುವುದೂ ಖರೀದಿ ಉತ್ಸಾಹ ಹೆಚ್ಚಿಸಿತು. ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಪುರ ಮತ್ತು ತೈವಾನ್ ಷೇರುಪೇಟೆಗಳಲ್ಲಿಯೂ ಚೇತರಿಕೆ ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.