ಮಂಗಳವಾರ, ಮಾರ್ಚ್ 28, 2023
30 °C

ಸೂಚ್ಯಂಕ: ಶೇ 1.82ರಷ್ಟು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶೇಕಡ1.82ರಷ್ಟು ಏರಿಕೆ ಕಂಡಿದ್ದು, ಶನಿವಾರ 19,864 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರು ಪೇಟೆ ‘ನಿಫ್ಟಿ’ ಕೂಡ ಶೇಕಡ 1.56ರಷ್ಟು ಏರಿಕೆ ಕಂಡು 5,948 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.



ವಾರದ ವಹಿವಾಟಿನಲ್ಲಿ ‘ವಿಪ್ರೊ’ ಶೇಕಡ 7.8, ‘ಎಸಿಸಿ’ ಶೇಕಡ 5.7, ‘ಟಿಸಿಎಸ್’ 5.5 ಮತ್ತು ‘ಟಾಟಾ ಸ್ಟೀಲ್’ 4.9ರಷ್ಟು ಏರಿಕೆ ಕಂಡು ಲಾಭ ಮಾಡಿಕೊಂಡವು. ಇದೇ ವೇಳೆ, ‘ಎಂಆ್ಯಂಡ್‌ಎಂ’ ಶೇಕಡ 7.3, ‘ಹೀರೊ ಹೋಂಡಾ’ 4.6, ‘ಎಚ್‌ಡಿಎಫ್‌ಸಿ’ ಶೇಕಡ 3.5ರಷ್ಟು ಕುಸಿತ ಕಂಡವು. ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಾಂಸ್ಥಿಕ ಹೂಡಿಕೆ ಒತ್ತಡವನ್ನು ಎದುರಿಸಬೇಕಾಯಿತು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಂಕಿ ಅಂಶದಂತೆ ಸಾಂಸ್ಥಿಕ ಹೂಡಿಕೆದಾರರು ಈ ವಾರದಲ್ಲಿ 247.4 ದಶಲಕ್ಷ ಡಾಲರ್ ವಹಿವಾಟು ದಾಖಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.