ಗುರುವಾರ , ಮೇ 6, 2021
26 °C

ಸೂಟ್‌ಕೇಸ್ ದೋಚಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ಸೂಟ್‌ಕೇಸ್ ಕಳವು ಮಾಡಿರುವ ಘಟನೆ ಸಿಲ್ವರ್ ಜ್ಯುಬಿಲಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.ಈ ಸಂಬಂಧ ಮಂಡ್ಯ ಜಿಲ್ಲೆಯ ಮದ್ದೂರಿನ ಲೋಕೇಶ್ ದೂರು ನೀಡಿದ್ದಾರೆ. ಎನ್.ಆರ್.ರಸ್ತೆಯಲ್ಲಿರುವ ಹಾರ್ಮೋನಿಯಂ ಅಂಗಡಿಗೆ ಹೋಗಿ ಬಂದ ಲೋಕೇಶ್, ಕಾರು ಹತ್ತಲು ಹೋದಾಗ ದುಷ್ಕರ್ಮಿಗಳು ಅವರನ್ನು ಮಾತನಾಡಿಸುವ ನಾಟಕವಾಡಿದ್ದಾರೆ. ಹತ್ತು ರೂಪಾಯಿ ನೋಟುಗಳನ್ನು ಕೆಳಗೆ ಹಾಕಿ ನಿಮ್ಮ ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ. ಲೋಕೇಶ್ ದುಡ್ಡು ತೆಗೆದುಕೊಳ್ಳುವಾಗ ದುಷ್ಕರ್ಮಿಗಳು ಕಾರಿನಲ್ಲಿದ್ದ ಸೂಟ್‌ಕೇಸ್ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.