ಸೂಪರ್ ಡಿವಿಷನ್ ಹಾಕಿ ಲೀಗ್ ಎಂಇಜಿ ತಂಡಕ್ಕೆ ಜಯ

ಬೆಂಗಳೂರು: ಬಿ.ಪಿ. ಪೂವಣ್ಣ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಂಇಜಿ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಂಇಜಿ 3-1 ಗೋಲುಗಳಿಂದ ಸೆಂಟ್ರಲ್ ಎಕ್ಸೈಸ್ ತಂಡವನ್ನು ಮಣಿಸಿತು.ಅನೂಪ್ ಆಂಟನಿ ಅವರು 5ನೇ ನಿಮಿಷದಲ್ಲಿ ಸೆಂಟ್ರಲ್ ಎಕ್ಸೈಸ್ ತಂಡಕ್ಕೆ ಮುನ್ನಡೆ ತಂದಿತ್ತರು. ಆ ಬಳಿಕ ಮರುಹೋರಾಟ ನಡೆಸಿದ ಎಂಇಜಿಗೆ ಪೂವಣ್ಣ ಅವರು 22, 30 ಮತ್ತು 47ನೇ ನಿಮಿಷದಲ್ಲಿ ಗೋಲುಗಳನ್ನು ತಂದಿತ್ತರು.
ಕೆನರಾ ಬ್ಯಾಂಕ್ ಮತ್ತು ಸಿಒಇ ತಂಡಗಳ ನಡುವಿನ ಎರಡನೇ ಪಂದ್ಯ ಮಂದಬೆಳಕಿನ ಕಾರಣ ಅರ್ಧದಲ್ಲೇ ಮೊಟಕುಗೊಂಡಿತು. 65ನೇ ನಿಮಿಷದಲ್ಲಿ ಪಂದ್ಯ ನಿಂತಾಗ ಬ್ಯಾಂಕ್ ತಂಡದವರು 1-0 ಗೋಲಿನಿಂದ ಮುನ್ನಡೆ ಸಾಧಿಸಿದ್ದರು.
ಪಂದ್ಯದ ಇನ್ನುಳಿದ ಐದು ನಿಮಿಷಗಳ ಆಟವನ್ನು ಇನ್ನೊಮ್ಮೆ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ. ಟರ್ಫ್‌ಗೆ ಹಾಕಲು ನೀರು ಲಭ್ಯವಿಲ್ಲದ ಕಾರಣ ಈ c 45 ನಿಮಿಷಗಳಷ್ಟು ತಡವಾಗಿ ಆರಂಭವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.