ಅಕ್ಷಯ ತೃತೀಯದ ಶುಭದಿನದಂದು ರಜಿನಿಕಾಂತ್ ಅವರ ‘ಲಿಂಗ’ ಚಿತ್ರ ಸೆಟ್ಟೇರಿದೆ. ಮೈಸೂರಿನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ರಜಿನಿ ಜತೆ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಪಾಲ್ಗೊಂಡಿದ್ದರು.

ಐಐಎಫ್–2014 ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಫ್ಲಾರಿಡಾಗೆ ಹೋಗಿದ್ದ ಸೋನಾಕ್ಷಿ ತಮ್ಮ ಮೊದಲ ತಮಿಳು ಚಿತ್ರ ‘ಲಿಂಗ’ ಚಿತ್ರದ ಮುಹೂರ್ತಕ್ಕಾಗಿ ‘ಜೆಟ್ಲ್ಯಾಗ್’ ಅನ್ನು ಬದಿಗೊತ್ತಿ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದೌಡಾಯಿಸಿದ ಸುದ್ದಿ ವರದಿಯಾಗಿದೆ. ಇದನ್ನು ಅವರೇ ಟ್ವೀಟ್ ಮಾಡಿದ್ದಾರೆ.

‘ಸಿನಿಮಾ ರಂಗದ ಕೆಲವೇ ಮಂದಿಗೆ ರಜಿನಿ ಅವರೊಂದಿಗೆ ನಟಿಸುವ ಅವಕಾಶ ಸಿಗುತ್ತದೆ. ನಾನು ದಕ್ಷಿಣಕ್ಕೆ ಕಾಲಿಡುವುದಾದರೆ ರಜನಿ ಜೊತೆಗೇ ಎಂದು ಕನಸು ಕಂಡಿದ್ದೆ. ಅದು ಈಗ ನೆರವೇರಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ರಾಕ್ಲೈನ್ ಸಿನಿಮಾಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಜಿನಿ ಅವರ ಮೊಮ್ಮಗ ನ(ಧನುಶ್ ಪುತ್ರ) ಹೆಸರನ್ನೇ ಇಡಲಾಗಿದೆಯಂತೆ. ‘ಮುತ್ತು’ ಹಾಗೂ ‘ಪಡಿಯಪ್ಪ’ ದಂಥ ಹಿಟ್ ಚಿತ್ರಗಳನ್ನು ನೀಡಿದ ರವಿಕುಮಾರ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. z

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.