ಸೋಮವಾರ, ಮಾರ್ಚ್ 8, 2021
25 °C

ಸೆಲ್ಟಿಕ್ ಕ್ಲಬ್‌ನಲ್ಲಿ ತರಬೇತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಲ್ಟಿಕ್ ಕ್ಲಬ್‌ನಲ್ಲಿ ತರಬೇತಿಗೆ ಆಯ್ಕೆ

ಬೆಂಗಳೂರು: ಕೋಲ್ಕತ್ತದ ಪಂದುವಾ ಎಸ್‌ಬಿಎಸ್ ಹೈಸ್ಕೂಲ್‌ನ ಪ್ರೇಮಾನಂದ ಸಿಂಘ ಮತ್ತು ಮಂಗಲ್ ಮುರ್ಮು ಹಾಗೂ ನವದೆಹಲಿಯ ಸಿಆರ್‌ಪಿಎಫ್ ಹೈಸ್ಕೂಲ್‌ನ ಮುಕೇಶ್ ಕುಮಾರ್ ಅವರು ಸ್ಕಾಟ್ಲೆಂಡ್‌ನ ಸೆಲ್ಟಿಕ್ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ನಡೆಸುವ ಅದೃಷ್ಟ ಪಡೆದಿದ್ದಾರೆ.ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಹೀಂದ್ರಾ ಯೂತ್ ಫುಟ್‌ಬಾಲ್ ಚಾಲೆಂಜ್ ಅಂತರ ಶಾಲಾ ಟೂರ್ನಿಯಲ್ಲಿ (14 ವರ್ಷ ವಯಸ್ಸಿನೊಳಗಿನವರ) ಉತ್ತಮ ಪ್ರದರ್ಶನ ನೀಡಿದ 22 ಆಟಗಾರರು ನಾಲ್ಕು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸೆಲ್ಟಿಕ್ ಕ್ಲಬ್‌ನ ಕೋಚ್‌ಗಳ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದ ಕೊನೆಯಲ್ಲಿ ಮೂವರ ಆಯ್ಕೆ ನಡೆದಿದೆ ಎಂದು ಮಾರ್ಕ್ ರೀಡ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.