ಗುರುವಾರ , ಮೇ 13, 2021
34 °C

ಸೇನಾ ಕಾರ್ಯಾಚರಣೆ ನಡೆಸಿ: ಅಮೆರಿಕಕ್ಕೆ ಸಯೀದ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್ಎಸ್): ~ನನ್ನನ್ನು  ಯಾವ ಸಮಯದಲ್ಲಿ ಬೇಕಾದರೂ ಸಂಪರ್ಕಿಸಬಹುದು ದೈರ್ಯವಿದ್ದರೆ ಲಾಡೆನ್ ವಿರುದ್ಧ ಎಸಗಿದಂತೆ ನನ್ನ ವಿರುದ್ಧವೂ ಸೇನಾ ಕಾರ್ಯಾಚರಣೆ ನಡೆಸಲಿ~ ಎಂದು ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಮತ್ತು ಮುಂಬೈದಾಳಿಯ ರೂವಾರಿ ಹಫೀಜ್ ಮೊಹಮ್ಮದ್ ಸಯೀದ್ ಅಮೆರಿಕಕ್ಕೆ ಸವಾಲು ಹಾಕಿದ್ದಾನೆ.  

ಅಮೆರಿಕವು, ಆತನ ಬಗ್ಗೆ ಸುಳಿವು ಮತ್ತು ಮಾಹಿತಿ ನೀಡಿದವರಿಗೆ ಒಂದು ಕೋಟಿ ಡಾಲರ್‌ಗಳ ಬಹುಮಾನ ಘೋಷಿಸಿದ್ದಕ್ಕೆ ಆತ ಈ ರೀತಿ ಪ್ರತಿಕ್ರಿಯಿಸಿದ್ದಾನೆ.

 ಅಮೆರಿಕಾ ಸರ್ಕಾರ ಭಾರತದ ಒತ್ತಡಕ್ಕೆ ಮಣಿದು ಈ ರೀತಿ ಬಹುಮಾನವನ್ನು ಘೋಷಿಸಿದೆ ಎಂದು ಸಯೀದ್ ಆರೋಪಿಸಿದ್ದಾನೆ. 

ನಾನು ಎಲ್ಲಿದ್ದೇನೆಂದು ಪ್ರಕಟಿಸುತ್ತಿದ್ದೇನೆ. ಅಮೆರಿಕವು ಈ ಬಹುಮಾನದ ಹಣವನ್ನು ನನಗೆ ನೀಡಿದರೆ ಬಲೂಚಿಸ್ತಾನದ ಅಭಿವೃದ್ಧಿಗೆ ಅದನ್ನು ಬಳಸುತ್ತೇನೆ ಎಂದೂ ಆತ ವ್ಯಂಗ್ಯವಾಡಿದ್ದಾನೆ.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.