ಶುಕ್ರವಾರ, ಜೂನ್ 25, 2021
24 °C

ಸೈನಿಕರಿಗೆ ಸವಲತ್ತು ಒದಗಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ನಾಗರಿಕ ಹಕ್ಕುಗಳ ವೇದಿಕೆ ಹಾಗೂ ಮಾಜಿ ಸೈನಿಕರ ಸಂಘವು ಭಾನುವಾರ ಮಹಾತ್ಮ ಗಾಂಧಿ ರಸ್ತೆಯ ಕ್ವೀನ್ಸ್‌ ಪ್ರತಿಮೆ ಎದುರು ಸೈನಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ರ‍್ಯಾಲಿ ನಡೆಸಿದರು.ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಪಿ.ಜಿ.ಕಾಮತ್‌ ಅವರು, ‘ನಿರ್ಬಂಧಿತ ಸ್ಥಳಗಳಲ್ಲಿರುವ ಸೈನಿಕರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಸೈನಿಕರೇ ಈ ದೇಶದ ಶಕ್ತಿಯಾಗಿದ್ದಾರೆ’ ಎಂದರು.‘ಸರ್ಕಾರ ಸೈನ್ಯದ ಬೇಕು–ಬೇಡಗಳನ್ನು ತಿಳಿಯಲು ಅಸಮರ್ಥವಾಗಿದೆ. ಅವರಿಗೆ ಸರಿಯಾದ ತರಬೇತಿ ಮತ್ತು ಅವಶ್ಯಕವಿರುವ ಉಪಕರಣಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.