ಬೆಳಗಾವಿ: ಅಮೆರಿಕಾದ ನಿಯೋಗದಲ್ಲಿ ಆಗಮಿ ಸಿರುವ ಸಗಿನಾವ ವೆಲ್ಲಿ ಸ್ಟೇಟ್ ಯುನಿ ವರ್ಸಿಟಿ (ಎಸ್ವಿಎಸ್ಯು) ಹಾಗೂ ಕ್ಯಾರೋಲ್ಟನ್ ಪಬ್ಲಿಕ್ ಸ್ಕೂಲ್ ಮಿಚಿ ಗನ್ನ ವಿದ್ಯಾರ್ಥಿಗಳು ಕಳೆದ ಐದು ದಿನ ಗಳಿಂದ ಕಾಲ ಕಳೆದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ಅಧ್ಯಯನ ಪರಿಸರದಿಂದ ಪ್ರಭಾವಿತರಾಗಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಎಸ್ವಿಎಸ್ಯು ಕಾಲೇಜ್ ಆಫ್ ಎಜ್ಯುಕೇಶನ್ನ ಪ್ರೊಫೆಸರ್ ಡಾ. ರಾಬರ್ಟ್ ಪ್ರಟ್, ಕಳೆದ ಐದು ದಿನಗಳಿಂದ ಸೈನಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ನಾನು ಹಾಗೂ ನಿಯೋಗದ ವಿದ್ಯಾರ್ಥಿಗಳು ವಿಚಾರ ವಿನಿಮಯ ಮಾಡಿದ್ದೇವೆ.

ವಿವಿಧ ವಿಷಯಗಳ ಮೇಲೆ ಇಲ್ಲಿ ಬೋಧಿಸುವ ವಿಧಾನಗಳನ್ನು ಅರಿತುಕೊಂಡಿದ್ದೇವೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದ ಹೊಸ ಹೊಸ ವಿಚಾರಧಾರೆಗಳನ್ನು ಪರಸ್ಪರ ಅರಿತುಕೊಂಡೆವು ಎಂದು ತಿಳಿಸಿದರು.

ಸೈನಿಕ ಶಾಲೆಯ ಶಿಕ್ಷಕಿ ಸರಸ್ವತಿ ಹೆಗಡೆ ಮಾತನಾಡಿ, ನಾವು ಇಬ್ಬರು ಶಿಕ್ಷಕಿಯರು ಹಾಗೂ ನಾಲ್ವರು ವಿದ್ಯಾರ್ಥಿನಿಯರು ಕ್ಯಾರೊಲ್ಟನ್ ಪಬ್ಲಿಕ್ ಸ್ಕೂಲ್ಗೆ ಭೇಟಿ ನೀಡಿ ತರಗತಿಗಳಲ್ಲಿ ಪಾಲ್ಗೊಂಡಿದ್ದೆವು. ನಮಗೆ ಅಮೆರಿಕಾದ ಶಿಕ್ಷಣ ವಿಧಾನ ಹಾಗೂ ಅವರ ಸಂಸ್ಕೃತಿಯ ಪರಿಚಯ ನೇರವಾಗಿ ಆಯಿತು. ಅಲ್ಲಿನ ಹೈಟೆಕ್ ಕ್ಲಾಸ್ರೂಮ್ ಹಾಗೂ ಬೋಧನಾ ವಿಧಾನಗಳ ಬಗ್ಗೆ ತಿಳಿದುಕೊಂಡ ನಮ್ಮ ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ವಾಪಸ್ಸಾಗಿದ್ದಾರೆ. ಅಲ್ಲಿನ ಬೋಧನಾ ಮಾದರಿ ಹಾಗೂ ಕ್ರಿಯಾಶೀಲತೆಯನ್ನು ನಾವೂ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಅಮೆರಿಕಾಗೆ ಭೇಟಿ ನೀಡಿದ್ದ ಸೈನಿಕ ಶಾಲೆಯ ವಿದ್ಯಾರ್ಥಿನಿ ರಂಜನಾ ಜಾಧವ, ನಾವು ಪರಸ್ಪರ ಭೇಟಿ ನೀಡುವುದರಿಂದ ವಿದೇಶದ ವಿದ್ಯಾರ್ಥಿಗಳೊಂದಿಗೆ ನಮ್ಮ ಬಾಂಧವ್ಯ ಬೆಳೆಯುವಂತಾಯಿತು. ಎರಡೂ ದೇಶಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ನಡೆಸುವ ಅವಕಾಶ ಲಭಿಸಿದಂತಾಗಿದೆ. ಅಮೆರಿಕಾಕ್ಕೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ವಿಧಾನವನ್ನು ಕಂಡು ಬಂದ ಬಳಿಕ ಶಿಕ್ಷಕರ ಮೇಲೆ ಜಾಸ್ತಿ ಅವಲಂಬಿಸದೇ ಸ್ವ-ಅಧ್ಯಯನ ಕೈಗೊಳ್ಳುವ ನಿಟ್ಟಿನಲ್ಲಿ ಆತ್ಮ ವಿಶ್ವಾಸ ಬಂದಿದೆ ಎಂದು ತಿಳಿಸಿದರು.

ಭಾರತೀಯ ಸಂಪ್ರದಾಯದಂತೆ ಸೀರೆಯನ್ನು ತೊಟ್ಟಿಕೊಂಡು, ಹಣೆಯ ಮೇಲೆ ಬಿಂದಿ ಇಟ್ಟುಕೊಂಡು ಬಂದು ಗಮನ ಸೆಳೆದ ಅಮೆರಿಕಾ ನಿಯೋಗದ ವಿದ್ಯಾರ್ಥಿನಿಯರಾದ ಹನ್ನಾಹ ಮೇರಿ ವಿನ್ಜಿಲಿಕ್, ಟೇಲರ್ ಬ್ರೂಕ್ ರೀಡಿ, ಕೆಲ್ಸೆ ಲಿನ್ ಹಾಲ್ ಹಾಗೂ ಹಾಲಿ ಮೆರಿ ಡೆಲ್ಟಿನ್ ಹಾಗೂ ಶಿಕ್ಷಕಿ ಆಮಿ ಫ್ರಾನ್ಸಿಸ್ ವಿಲ್ಕಿನ್ಸ್ ಅವರು ಸೈನಿಕ ಶಾಲೆಯಲ್ಲಿ ಕಳೆದ ತಮ್ಮ ಅನುಭವವನ್ನು ಹಂಚಿಕೊಂಡರು. ಎಸ್ವಿಎಸ್ಯು ಪ್ರೊಫೆಸರ್ ಡಾ. ಜೊಶುವಾ ಜೇಮ್ಸ ಓಡೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸೈನಿಕ ಶಾಲೆಯ ಅಧ್ಯಕ್ಷ ಮಹೇಂದ್ರ ಕಂಠಿ, ಅಮೆರಿಕಾಕ್ಕೆ ನಿಯೋಗದಲ್ಲಿ ಹೋಗಿದ್ದ ವಿದ್ಯಾರ್ಥಿನಿಯರಾದ ರೇಣುಕಾ ಶಂಕರ ದೇಸಾಯಿ, ರಶ್ಮಿ ರಾಜೇಂದ್ರ ನ್ಯಾಮಗೌಡರ, ವೈಷ್ಣವಿ ರಂಗಸ್ವಾಮಿ ಬಿಳಿಗಿರಿ ಹಾಗೂ ಸುಷ್ಮಾ ತೆಂಬದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.