ಸೈಫೀನಾ ಮದುವೆ ಎಂದು?

7

ಸೈಫೀನಾ ಮದುವೆ ಎಂದು?

Published:
Updated:
ಸೈಫೀನಾ ಮದುವೆ ಎಂದು?

ಸೈಫ್ ಅಲಿ ಖಾನ್ ತಮ್ಮ ಮದುವೆ ಈ ವರ್ಷಾಂತ್ಯದಲ್ಲಿ ಅಂತ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಅಲ್ಲಿಗೆ ಅ.16ರಂದು ನಡೆಯಬೇಕಿದ್ದ ಮದುವೆ ಮುಂದೂಡಿದಂತಾಗಿದೆ. ಇದೇ ಕಾರಣಕ್ಕೆ ಕರೀನಾ ಕಪೂರ್ ಮದುವೆಯ ಮಾತು ಬಂದಾಗಲೆಲ್ಲ ಸುಮ್ಮನಾಗುತ್ತಿದ್ದುದು ಎಂಬ ಗಾಳಿ ಮಾತೊಂದು ಹಿಂದಿ ಚಿತ್ರರಂಗದಲ್ಲೆಗ ಅಲೆಯುತ್ತಿದೆ.ಮೊದಲು ಶರ್ಮಿಳಾ ಟ್ಯಾಗೋರ್ ಅಕ್ಟೋಬರ್ 16ರಂದು ಪಟೌಡಿ ಗ್ರಾಮದ ಪಟೌಡಿ ಅರಮನೆಯಲ್ಲಿಯೇ ಮದುವೆ ನಡೆಯಲಿದೆ ಎಂದು ತಿಳಿಸಿದ್ದರು.

 

ನಂತರ ಮದುವೆಯನ್ನು ಲಂಡನ್‌ನಲ್ಲಿ ಮಾಡಲಾಗುವುದು ಎಂಬ ಸುದ್ದಿಯೂ ಹರಡಿತ್ತು. ಆದರೆ ಲಂಡನ್‌ನಲ್ಲಿ ಮದುವೆಯಾಗುವ ಬಗ್ಗೆ ಸ್ಪಷ್ಟವಾಗಿ ಅಲ್ಲಗಳೆದಿರುವ ಸೈಫ್ ದಿನಾಂಕದ ಬಗ್ಗೆಯೂ ಏನೂ ಹೇಳಿಲ್ಲ. ಆದರೆ ಈ ವರ್ಷಾಂತ್ಯಕ್ಕೆ ಮದುವೆಯೆಂದು ಹೇಳಿದ್ದಾನೆ.ಮದುವೆ ಹಿಂದು ಸಂಪ್ರದಾಯದಂತೆ ನಡೆಯುವದೇ ಅಥವಾ ನಿಖಾ ಮಾಡಲಾಗುವುದೇ ಎಂದು ಕೇಳಿದ್ದಕ್ಕೆ, `ಇದು ತೀರ ವೈಯಕ್ತಿಕ ಪ್ರಶ್ನೆಯಾಗಿದೆ.ಇದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಮದುವೆಯ ದಿನ, ಬಗೆ ಯಾವುದೂ ತೀರ್ಮಾನವಾಗಿಲ್ಲ. ಆಗಿದ್ದರೂ ಅದನ್ನು ಮಾಧ್ಯಮಕ್ಕೆ ತಿಳಿಸುವ ಅಗತ್ಯವಿಲ್ಲ ಅದು ವೈಯಕ್ತಿಕ ವಿಷಯ~ ಎಂದೆಲ್ಲ ಸೈಫ್ ಹೇಳಿದ್ದಾರೆ. ಕರೀನಾ ಮಾತ್ರ ಈಗಲೂ ಮೌನವಹಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry