ಶನಿವಾರ, ಜೂನ್ 12, 2021
23 °C

ಸೋಮವಾರ, 26-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪರಾಷ್ಟ್ರಪತಿ ಆಗಿ  ಡಾ. ಜಕೀರ್‌ಹುಸೇನ್

ನವದೆಹಲಿ, ಮಾ. 25- ಭಾರತದ ಮುಂದಿನ ರಾಷ್ಟ್ರಪತಿ ಆಗಿ ಆಯ್ಕೆಯಾಗುವರೆಂದು ಖಚಿತವಾಗಿ ಹೇಳಲಾಗುತ್ತಿರುವ ಡಾ. ಎಸ್. ರಾಧಾಕೃಷ್ಣನ್ ಅವರ ಸ್ಥಾನದಲ್ಲಿ ಉಪರಾಷ್ಟ್ರಪತಿ ಆಗಿ ಬಿಹಾರದ ರಾಜ್ಯಪಾಲ ಡಾ. ಜಕೀರ್ ಹುಸೇನ್ ಅವರನ್ನು ನೇಮಕ ಮಾಡಲಾಗುವುದೆಂದು ನಂಬಲರ್ಹ ವಲಯಗಳಿಂದ ತಿಳಿದುಬಂದಿದೆ.ವಿಮುಕ್ತರಾದ ಬಗ್ಗೆ ಅಮಿತ ಆನಂದ

ಪಂಜಿಮ್, ಮಾ. 25- ಗೋವದ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಹಿಂದೂಗಳು, ಕ್ರಿಶ್ಚಿಯನರು ಮತ್ತು ಮುಸ್ಲಿಮರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಉಥಾಂಟರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿ “ಒಬ್ಬ ವ್ಯಕ್ತಿಯ ನೆರವಿನಿಂದ ನಮ್ಮನ್ನು ಭಯಂಕರ ಚಿತ್ರಹಿಂಸೆಯಿಂದ ಬಿಡುಗಡೆ ಮಾಡುವುದರ ಮೂಲಕ ದೈವವು ಕರುಣೆ ತೋರಿಸಿದೆ. ಈ ವ್ಯಕ್ತಿ ಭಾರತದ ಪ್ರಧಾನಿ ಶ್ರಿ ಜವಹರಲಾಲ್ ನೆಹರು” ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.