ಸೋಮವಾರ, 4-6-1962
ವಿಮಾನ ಅನಾಹುತದಲ್ಲಿ 130 ಜನ ಮರಣ
ಪ್ಯಾರಿಸ್, ಜೂನ್ 3- ಏರ್ ಫ್ರಾನ್ಸ್ ಸಂಸ್ಥೆಯ ಬೋಯಿಂಗ್ 707 ವಿಮಾನವೊಂದು ಈ ದಿನ ಇಲ್ಲಿ ಓರ್ಲಿ ವಿಮಾನ ನಿಲ್ದಾಣದಿಂದ ಮೇಲೇರಲಿದ್ದಾಗ `ರನ್ವೇ~ ನಿಂದ ಪಕ್ಕಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡು 130 ಮಂದಿ ಸತ್ತರು.ಒಂದೇ ವಿಮಾನವನ್ನೊಳಗೊಂಡ ಇಂಥ ಭೀಕರ ಅನಾಹುತ ಹಿಂದೆಂದೂ ಸಂಭವಿಸಿದ್ದಿಲ್ಲ.
ಭಾರತ - ಪಾಕ್ ವ್ಯಾಪಾರ ಒಪ್ಪಂದ ಸಾಧನೆ
ನವದೆಹಲಿ, ಜೂನ್ 3 - ಕಳೆದ ಹನ್ನೊಂದು ದಿನಗಳಿಂದ ಭಾರತ ಪಾಕ್ ವಾಣಿಜ್ಯ ಪ್ರತಿನಿಧಿಗಳ ನಡುವೆ ಇಲ್ಲಿ ನಡೆಯುತ್ತಿದ್ದ ಸಂಧಾನ ನಿನ್ನೆ ಫಲಪ್ರದವಾಗಿ ಮುಕ್ತಾಯಗೊಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.