ಸೋಮವಾರ, 7-3-1961
ಮಟಾಡಿಯಲ್ಲಿ ಸೂಡಾನಿನ ಸೈನಿಕರ ನಿಶ್ಶಸ್ತ್ರೀಕರಣ,ತಾತ್ಕಾಲಿಕ ವಾಪಸಾತಿ
ಲಿಯೋಫೋಲ್ಡ್ವಿಲ್, ಮಾ. 6- ಮಟಾಡಿ ಬಂದರಿನಲ್ಲಿ ವಿಶ್ವರಾಷ್ಟ್ರ ಸಂಸ್ಥೆಯ ಸೂಡಾನಿನ ಪಡೆಗಳಿಗೂ ಕಾಂಗೋ ಪಡೆಗಳಿಗೂ 24 ಗಂಟೆಗಳಿಗೂ ಹೆಚ್ಚು ಕಾಲ ಹೋರಾಟ ನಡೆದ ನಂತರ, ಕಾಂಗೋ ಸೈನ್ಯವು ಸೂಡಾನಿನ ಸೈನ್ಯವನ್ನು ನಿಶ್ಶಸ್ತ್ರಗೊಳಿಸಿ ಹಿಮ್ಮೆಟ್ಟಿಸಿದುವೆಂದು ವಿಶ್ವರಾಷ್ಟ್ರ ಸಂಸ್ಥೆಯ ವಕ್ತಾರರೊಬ್ಬರು ಇಂದು ತಿಳಿಸಿದರು.
ಸರ್ಕಾರದ ರಾಜೀನಾಮೆಗೆ ವಿರೋಧ ಪಕ್ಷದ ಒತ್ತಾಯ
ಬೆಂಗಳೂರು, ಮಾ. 6- ಅವಿಶ್ವಾಸ ನಿರ್ಣಯದ ಮೇಲೆ ಇಂದು ವಿಧಾನಸಭೆಯಲ್ಲಿ ಚರ್ಚೆ ಮುಂದುವರಿದು ವಿರೋಧ ಪಕ್ಷದ ಸದಸ್ಯರು ಸರ್ಕಾರದ ನಾನಾ “ಲೋಪದೋಷಗಳನ್ನು” ವಿವರಿಸಿ ಮಂತ್ರಿಮಂಡಲ ರಾಜೀನಾಮೆ ಕೊಡಬೇಕೆಂದು ಒತ್ತಾಯ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.