ಭಾನುವಾರ, ಮೇ 16, 2021
28 °C
ತಾಲ್ ಮೆಮೋರಿಯಲ್ ಚೆಸ್ ಟೂರ್ನಿ

ಸೋಲು ಕಂಡ ಆನಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ತಾಲ್ ಮೆಮೋರಿಯಲ್ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲಿ ಸೋಲು ಕಂಡಿದ್ದು, ಪ್ರಶಸ್ತಿಯ ದಾರಿ ಮತ್ತಷ್ಟು ಕಠಿಣಗೊಂಡಿದೆ.ಟೂರ್ನಿಯ ಐದನೇ ಸುತ್ತಿನಲ್ಲಿ ಆನಂದ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಸೋಲುವ ಮೂಲಕ ಜಂಟಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮುಂಬರುವ ನವೆಂಬರ್‌ನಲ್ಲಿ ಚೆನ್ನೈನಲ್ಲಿ ವಿಶ್ವ ಚಾಂಪಿಯನ್‌ಷಿಪ್ ನಡೆಯಲಿದ್ದು ಕಾರ್ಲ್‌ಸನ್ ಹಾಗೂ ಆನಂದ್ ಪರಸ್ಪರ ಎದುರಾಗಲಿದ್ದಾರೆ. ಇದಕ್ಕೂ ಮೊದಲು ಇವರಿಬ್ಬರ ನಡುವೆ ನಡೆದ ಕೊನೆಯ ಪಂದ್ಯ ಇದಾಗಿತ್ತು.ಇಸ್ರೇಲ್‌ನ ಬೋರಿಸ್ ಗೆಲ್ಫಾಂಡ್ ರಷ್ಯಾದ ಅಲೆಕ್ಸಾಂಡರ್ ಮೊರೊಜೊವಿಕ್ ಅವರನ್ನು ಮಣಿಸಿ 3.5 ಪಾಯಿಂಟ್‌ಗಳೊಂದಿಗೆ ಅಮೆರಿಕದ ಹಿಕಾರು ನಕಮುರಾ ಅವರೊಂದಿಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ನಕಮುರಾ ಟೂರ್ನಿಯಲ್ಲಿ ಮೊದಲ ಬಾರಿಗೆ ಡ್ರಾ ಸಾಧಿಸಿ ರಷ್ಯಾದ ದಿಮಿಟ್ರಿ ಅವರೊಂದಿಗೆ ಪಾಯಿಂಟ್ ಹಂಚಿಕೊಂಡರು.ಇನ್ನೂ ನಾಲ್ಕು ಸುತ್ತುಗಳು ಬಾಕಿ ಇದ್ದು, ಆನಂದ್ ಎರಡು ಪಾಯಿಂಟ್‌ಗಳನ್ನು ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.