ಗುರುವಾರ , ಏಪ್ರಿಲ್ 22, 2021
29 °C

ಸೌರಾಷ್ಟ್ರ ಕರಕುಶಲ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿತ್ತಾಳೆ ದೀಪಗಳನ್ನು ಖರೀದಿಸಲು ಪ್ರದರ್ಶನವೊಂದಕ್ಕೆ ಭೇಟಿ ನೀಡಿದ ಗೃಹಿಣಿಗೆ ಒಡಿಶಾ ಕರಕುಶಲ ವಸ್ತುಗಳು, ಪೇಂಟಿಂಗ್ಸ್, ಮರದ ಪಿಠೋಪಕರಣಗಳು ಗಮನ ಸೆಳೆದವು. ಪ್ರದರ್ಶನಕ್ಕೆ ಬಂದ ಉದ್ದೇಶ ಮರೆತು ಒಡಿಶಾ ಪೇಂಟಿಂಗ್ಸ್ ಖರೀದಿಸಿದರು.

ಸೌರಾಷ್ಟ್ರ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಜುಲೈ 22ವರೆಗೆ ಆಯೋಜಿಸಿರುವ ಕೈಮಗ್ಗ, ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಕುಶಲಕರ್ಮಿಗಳ ಉತ್ಪನ್ನಗಳು ಆಕರ್ಷಿಸುತ್ತಿವೆ.

ಇಲ್ಲಿ ಕಾಶ್ಮೀರಿ ಶಾಲು, ಕೋಲ್ಕತ್ತ ಸೀರೆಗಳು, ಟೆರ‌್ರಾಕೋಟಾ, ಮೀನಾಕಾರಿ ಕಲ್ಲುಗಳು, ಆಲಂಕಾರಿಕ ಒಡವೆಗಳು, ಮಧುಬನಿ ಚಿತ್ರಗಳು, ಗುಜರಾತ್ ಬಟ್ಟೆಗಳು... ಹೀಗೆ ಸಾಲು ಸಾಲು ಉತ್ಪನ್ನಗಳು ಕಣ್ಮನ ಸೆಳೆಯುತ್ತವೆ. ಹೆಂಗಳೆಯರಿಗಷ್ಟೇ ಅಲ್ಲದೇ ಯುವಕರು, ಮಕ್ಕಳ ಬಟ್ಟೆಗಳು ಇಲ್ಲಿವೆ.

ಗುಜರಾತಿನ ಸಲ್ವಾರ್ ಕಮೀಜ್,  ಕನ್ನಡಿ ಕಸೂತಿಯ ಕುರ್ತಾಗಳು, ಚರ್ಮದ ಬ್ಯಾಗ್‌ಗಳು, ಕಾಟನ್ ಸೀರೆಗಳು ಪ್ರದರ್ಶನದಲ್ಲಿ ಹೆಂಗಳೆಯರಿಗೆ ಮೆಚ್ಚುಗೆಯಾಗಲಿವೆ. ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳಿಗೆ ಶೇ.10ರಿಂದ 20 ರಷ್ಟು ರಿಯಾಯಿತಿ ಇದೆ. ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದೆ.

ಸ್ಥಳ: ಶ್ರೀನಿವಾಸ ಕಲ್ಯಾಣ ಮಂಟಪ, ನಂ 264/267, ಟಿ.ಮರಿಯಪ್ಪ ರಸ್ತೆ, 2ನೆ ಬ್ಲಾಕ್, ಜಯನಗರ (ಅಶೋಕ ಸ್ತಂಭದ ಸಮೀಪ). 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.