ಸೋಮವಾರ, ಏಪ್ರಿಲ್ 19, 2021
32 °C

ಸ್ತ್ರೀ-ಪುರುಷರ ಕಣ್ಣ ನೋಟ ಭಿನ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಯಾವುದೇ ದೃಶ್ಯ ಗ್ರಹಿಸುವಾಗ ಪುರುಷರ ಹಾಗೂ ಸ್ತ್ರೀಯರ ಕಣ್ಣುಗಳ ನೋಟದ ಹರಿವು ಭಿನ್ನವಾಗಿರುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.ದೃಶ್ಯ ಗ್ರಹಿಕೆ, ಕಣ್ಣ ನೋಟದ ಲಕ್ಷ್ಯಗಳು ಭಿನ್ನ ಲಿಂಗ, ಜನಾಂಗಗಳು ಮತ್ತು ಯಾವುದೇ ವಯಸ್ಸಿನಲ್ಲಿ ಒಂದೇ ರೀತಿ ಕಾರ್ಯನಿರ್ವಹಿಸುತ್ತವೆ ಎಂದು ಈವರೆಗೆ ಮಾಡಲಾಗುತ್ತಿದ್ದ ಪ್ರತಿಪಾದನೆಗೆ ಇದು ಸವಾಲೆಸೆದಿದೆ.

ಲಾರೆಂಟ್ ಇಟ್ಟಿ ಲ್ಯಾಬೊರೇಟರಿ ಮತ್ತು ಸದರ್ನ್ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಪಿಎಚ್.ಡಿ. ವಿದ್ಯಾರ್ಥಿ ಜಾನ್ ಶೆನ್ ಈ ಕುರಿತು ಸಂಶೋಧನೆ ನಡೆಸ್ದ್ದಿದಾರೆ.ಅಧ್ಯಯನಕ್ಕಾಗಿ ಸಂದರ್ಶನ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಅದನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿತ್ತು. ಹಿನ್ನೆಲೆಯಲ್ಲಿ ಕೆಲವು ವಸ್ತುಗಳು ಇರುವಂತೆ ಮಾಡಲಾಗಿತ್ತು. ಜತೆಗೆ, ಸಂದರ್ಶನದ ಮಧ್ಯೆ, ವಿಡಿಯೊ ಫ್ರೇಮ್‌ನಲ್ಲಿ ಪಾದಚಾರಿಗಳು, ಸೈಕಲ್‌ಗಳು, ಕಾರುಗಳು ಆಗಾಗ ಅತ್ತಿತ್ತ ಹಾದು ಹೋಗುವಂತೆ ಸಂಯೋಜನೆ ಮಾಡಲಾಗಿತ್ತು. ಇದನ್ನು ಆಯ್ದ 34 ಜನರಿಗೆ ತೋರಿಸಲಾಯಿತು. ಈ ನೋಡುಗರ ಕಣ್ಣ ಚಲನೆಯನ್ನು ಬೇರೊಂದು ರಹಸ್ಯ ಕ್ಯಾಮೆರಾದಿಂದ ಸೆರೆ ಹಿಡಿದು ವಿಶ್ಲೇಷಿಸಿದಾಗ ಹೊಸ ಸಂಗತಿ ಪತ್ತೆಯಾಯಿತು ಎಂದು ಸಂಶೋಧಕರು ವಿವರಿಸಿದ್ದಾರೆ.ಪುರುಷರ ನೋಟವು ಸಂದರ್ಶನದಲ್ಲಿ ಭಾಗಿಯಾದ ವ್ಯಕ್ತಿಯ ಬಾಯಿಯೆಡೆಗೆ ಕೇಂದ್ರೀಕೃತವಾಗಿತ್ತು. ಹಿನ್ನೆಲೆಯ ವಸ್ತುಗಳ ಚಲನೆಯಿಂದ ಅವರ ಏಕಾಗ್ರತೆಗೆ ಭಂಗವಾಯಿತು.  ಆದರೆ ಮಹಿಳೆಯರ ನೋಟವು, ಸಂದರ್ಶನದಲ್ಲಿ ಭಾಗಿಯಾದ ವ್ಯಕ್ತಿಯ ಕಣ್ಣು ಮತ್ತು ದೇಹದೆಡೆಗೆ ಅತ್ತಿತ್ತ ಹೊರಳುತ್ತಿತ್ತು. ಹಿನ್ನೆಲೆಯ ಚಲನೆಗಳಿಂದ ಅವರ ಲಕ್ಷ್ಯಕ್ಕೇನೂ ತೊಂದರೆಯಾಗಲಿಲ್ಲ.  ಆದರೆ ತೆರೆಯ ಮಧ್ಯೆ ಬೇರೆ ವ್ಯಕ್ತಿಗಳ ಪ್ರವೇಶವಾದಾಗ ಮಹಿಳೆಯರ ಏಕಾಗ್ರತೆಗೆ ಧಕ್ಕೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.