ಸ್ಥಳೀಯ ಸಮಸ್ಯೆಗೆ ಸಂಘಟನೆ ಸ್ಪಂದನೆ: ಭರವಸೆ

7

ಸ್ಥಳೀಯ ಸಮಸ್ಯೆಗೆ ಸಂಘಟನೆ ಸ್ಪಂದನೆ: ಭರವಸೆ

Published:
Updated:

ಕನಕಪುರ:  ಜಯಕರ್ನಾಟಕ ಸಂಘಟನೆಯು ನಾಡು ಕಟ್ಟುವುದರ ಜೊತೆಗೆ ಸ್ಥಳೀಯ ಸಮಸ್ಯೆಗಳಿಗೂ ಸ್ಪಂದಿಸಲಿದೆ ಎಂದು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು.ತಾಲ್ಲೂಕಿನ ಪುರದೊಡ್ಡಿ ಗ್ರಾಮದಲ್ಲಿ ಗ್ರಾಮಶಾಖೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಸಂಘಟನೆಯು ನಾಡು, ನುಡಿ, ನೆಲ, ಜಲದ ಬಗ್ಗೆ ಹೋರಾಟ ನಡೆಸುವುದರ ಜೊತೆಗೆ ಸಮಾಜದಲ್ಲಿನ ಅಶಕ್ತರನ್ನು ಮೇಲೆತ್ತುವ ಕೆಲಸದಲ್ಲಿ ತೊಡಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಲ ಸೌಕರ್ಯಗಳಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಆಡಳಿತಾರೂಢ ಸರ್ಕಾರಗಳು ಗ್ರಾಮೀಣ ಪ್ರದೇಶದ ಕಡೆಗೆ ಹೆಚ್ಚಿನ ಒತ್ತು ನೀಡಿ, ಮೂಲ ಸೌಕರ್ಯಗಳನ್ನು ಒದಗಿಸಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದಲ್ಲಿ ಸಂಘಟನೆ ಸಾರ್ವಜನಿಕರ ಜೊತೆಗೂಡಿ ಬೀದಿಗಿಳಿದು ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು. ಸಮಾಜ ಸೇವಕ ಎಂ.ಎನ್.ಅನಿಲ್‌ಕುಮಾರ್, ಎಸ್ಸಿ,ಎಸ್ಟಿ ರಾಜ್ಯಾಧ್ಯಕ್ಷೆ ನಾಗಲೇಖ, ತಾಲ್ಲೂಕು ಗೌರವಾಧ್ಯಕ್ಷ ಕೃಷ್ಣಪ್ಪ ಮಾತನಾಡಿದರು.ಈ ಸಂದರ್ಭದಲ್ಲಿ ಚುನಾಯಿತ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಡಿ.ಜಿ.ಕುಮಾರ್, ಜಿಲ್ಲಾ ಸಂಚಾಲಕ ಸ್ಟುಡಿಯೋ ಚಂದ್ರು, ಉಪಾಧ್ಯಕ್ಷ ಜಗದೀಶ್, ತಾ.ಪಂ.ಸದಸ್ಯ ವಿಶ್ವಪ್ರಿಯ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಪಿ.ಸಿ.ಕೆಂಪೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಪಿ.ಎನ್.ಕೃಷ್ಣೇಗೌಡ, ಮಾಜಿ ಸದಸ್ಯರಾದ ಜಿ.ಎಂ.ಮಾದೇಗೌಡ, ಗಣೇಶ್, ಸಿದ್ದರಾಜು, ಗ್ರಾಮದ ಮುಖಂಡರಾದ ರಮೇಶ್‌ರಾವ್ ಸಿಂಧ್ಯಾ, ದುಂಡು ಮಾದೇಗೌಡ, ದಾಸೇಗೌಡ, ಕೆಂಪೇಗೌಡ, ಪಿ.ಮಾದೇಗೌಡ, ಗುರುವಯ್ಯ, ಚಂದ್ರು, ಮೋಹನ್‌ರಾವ್, ಪಿ.ಕೆ.ಆನಂದ, ದುರ್ಗೇಗೌಡ, ರಾಜಶೇಖರ್, ಶ್ರಿಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry