ಭಾನುವಾರ, ಜೂನ್ 13, 2021
26 °C

ಸ್ನೂಕರ್:ಐಒಸಿಎಲ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಒಸಿಎಲ್ ತಂಡದವರು ಇಲ್ಲಿ ನಡೆದ ಪಿಎಸ್‌ಪಿಬಿ ಅಂತರ ಯೂನಿಟ್ ಸ್ನೂಕರ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಐಒಸಿಎಲ್ 4-3ರಲ್ಲಿ ಒಎನ್‌ಜಿಸಿ ಎದುರು ಗೆಲುವು ಸಾಧಿಸಿತು.ವಿಜಯಿ ತಂಡದ ರಿಷಬ್ ಪಾಂಡೆ 55-63, 0-79ರಲ್ಲಿ ಪಂಕಜ್ ಅಡ್ವಾಣಿ ಎದುರು ಸೋಲು ಕಂಡರು.  ಆದಿತ್ಯ ಮೆಹ್ತಾ ಹಾಗೂ ಸೌರವ್ ಕೊಠಾರಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. ಇಬ್ಬರೂ ಸ್ಪರ್ಧಿಗಳು ತಲಾ ಒಂದು ಫ್ರೇಮ್‌ಗಳಲ್ಲಿ ಗೆಲುವು ಸಾಧಿಸಿದರು.ಮೂರನೇ ಪಂದ್ಯದಲ್ಲಿ ಬ್ರಿಜೇಶ್ ದಮನಿ 61-27, 57-16ರಲ್ಲಿ ರೂಪೇಶ್ ಶಾ ಅವರನ್ನು ಸೋಲಿಸಿದರು. ಇದರಿಂದ ಪ್ರಶಸ್ತಿ ಜಯಿಸಲು ಆಸೆಗೆ ಬಲ ಬಂದಿತು. ಈ ವೇಳೆ ಫೈನಲ್ ಪಂದ್ಯ 1-1ರಲ್ಲಿ ಸಮವಾಗಿತ್ತು.

ನಿರ್ಣಾಯಕ ನಾಲ್ಕನೇ ಘಟ್ಟ ಅಂತ್ಯಂತ ಮಹತ್ವ ಪಡೆದಿತ್ತು. ಈ ವೇಳೆ ಆದಿತ್ಯ 89-1ರಲ್ಲಿ ಪಂಕಜ್ ಅವರನ್ನು ಮಣಿಸಿದರು. ಈ ಮೂಲಕ ಐಒಸಿಎಲ್ ಗೆಲುವಿನ ನಗು ಬೀರಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.