ಗುರುವಾರ , ಜನವರಿ 30, 2020
20 °C

ಸ್ನೂಕರ್: ನಾಕ್‌ಔಟ್‌ ಹಂತಕ್ಕೆ ಮನನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಗಾವ್‌ಪಿಲ್ಸ್‌, ಲಾತ್ವಿಯಾ (ಪಿಟಿಐ): ಭಾರತದ ಮನನ್‌ ಚಂದ್ರ ಹಾಗೂ ಅರಂತ್ಸಾ ಸಂಚಿಸ್‌ ಇಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ನಾಕ್‌ಔಟ್‌ ಹಂತ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಪುರುಷರ ವಿಭಾಗದ ಲೀಗ್‌ ಪಂದ್ಯದಲ್ಲಿ ಮನನ್‌ 4–0ರಲ್ಲಿ (88–9, 80–28, 126–0, 85–1) ಸ್ಪೇನ್‌ನ ಫ್ರಾನ್ಸಿಸ್ಕೊ ರಾಡ್ರಿಗಾಸ್‌ ಅವರನ್ನು ಪರಾಭವ ಗೊಳಿಸಿದರು. ಆದರೆ ಬ್ರಿಜೇಶ್‌ ದಾಮನಿ ಸೋಲು ಕಂಡರು.ಮಹಿಳೆಯರ ವಿಭಾಗದ ಕೊನೆಯ ಲೀಗ್‌ ಪಂದ್ಯದಲ್ಲಿ ಸಾಂಚಿಸ್‌ ಸೋಲು ಕಂಡರೂ ಗುಂಪಿನಲ್ಲಿ ಎರಡನೇ       ಸ್ಥಾನ ಪಡೆದು ಮುಂದಿನ ಸುತ್ತು ತಲುಪಿದರು. ನೀನಾ ಜಾರ್ಜ್‌ ತಮ್ಮ ಕೊನೆಯ ಎರಡೂ ಲೀಗ್‌ ಪಂದ್ಯಗಳಲ್ಲಿ ಗೆದ್ದರು.

ಪ್ರತಿಕ್ರಿಯಿಸಿ (+)