ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕಾರಿ ಸಮಿತಿಯ ತುರ್ತು ಸಭೆ ಸೋಮವಾರ ನಡೆಯಲಿದ್ದು, ಬೆಟ್ಟಿಂಗ್ ವಿವಾದದಲ್ಲಿ ಸಿಲುಕಿರುವ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಮತ್ತು ರಾಯಲ್ಸ್ ತಂಡದ ಭವಿಷ್ಯದ ಕುರಿತ ಚರ್ಚೆ ಪ್ರಮುಖ ವಿಷಯವಾಗಿದೆ. ಆದ್ದರಿಂದ ಈ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

`ಬೆಟ್ಟಿಂಗ್ ಆಡಿದ್ದೇನೆ' ಎಂದು ಪೊಲೀಸರ ಎದುರು ವಿಚಾರಣೆ ವೇಳೆ ಒಪ್ಪಿಕೊಂಡಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಹೇಳಿಕೆ ಹೊರ ಬಿದ್ದಾಗಿನಿಂದ ರಾಯಲ್ಸ್ ಫ್ರಾಂಚೈಸ್, ಕುಂದ್ರಾ ಅವರಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ರಾಯಲ್ಸ್ ತಂಡವನ್ನು ಐಪಿಎಲ್ನಿಂದ ಅಮಾನತು ಮಾಡಬೇಕೇ ಅಥವಾ ಬೇಡವೇ ಎನ್ನುವ ಚರ್ಚೆಯೇ ಪ್ರಧಾನ ವಿಷಯವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

`ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಕಳ್ಳಾಟದಿಂದ ಈಗಾಗಲೇ ಸಾಕಷ್ಟು ಮುಜುಗರ ಎದುರಿಸಿರುವ ಬಿಸಿಸಿಐ, ಕುಂದ್ರಾ ವಿಚಾರದಲ್ಲಿ ಮೃದುಧೋರಣೆ ತೋರಬಾರದು. ತನಿಖೆ ಪೂರ್ಣಗೊಳ್ಳುವ ತನಕ ಕುಂದ್ರಾ ಅವರನ್ನು ರಾಯಲ್ಸ್ ತಂಡದಿಂದ ದೂರವಿಡಬೇಕು ಎಂದು ಸಭೆಯಲ್ಲಿ ಕೆಲ ಸದಸ್ಯರು ಒತ್ತಾಯಿಸುವ ಸಾಧ್ಯತೆಯಿದೆ' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುಂದ್ರಾ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಯಲ್ಸ್ ತಂಡ ಬಿಸಿಸಿಐನಿಂದ ಅಮಾನತು ಭೀತಿ ಎದುರಿಸುತ್ತಿದೆ. ಆದ್ದರಿಂದ ರಾಯಲ್ಸ್ ಫ್ರಾಂಚೈಸ್ ಅತೀ ಸೂಕ್ಷ್ಮವಾಗಿ ಈ ಪ್ರಕರಣವನ್ನು ನಿಭಾಯಿಸುತ್ತಿದ್ದು, ತಂಡವನ್ನು ಉಳಿಸಿಕೊಳ್ಳಲು ಕುಂದ್ರಾ ಅವರನ್ನು ಪಾಲುದಾರಿಕೆಯಿಂದ ಕೈ ಬಿಡಲೂ ಸಿದ್ಧವಾಗಿದೆ.

`ರಾಯಲ್ಸ್ ತಂಡದಲ್ಲಿ ರಾಜ್ಕುಂದ್ರಾ 11.7ರಷ್ಟು ಮಾತ್ರ ಷೇರುಗಳನ್ನು ಹೊಂದಿದ್ದಾರೆ. ಅವರು ಅನಿವಾಸಿ ಭಾರತೀಯ ಕೂಡಾ. ಅವರ ವಿರುದ್ಧದ ಆರೋಪ ಸಾಬೀತಾದರೆ ಪಾಲುದಾರಿಕೆಯಿಂದ ಕೈ ಬಿಡುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ರಾಯಲ್ಸ್ ತಂಡದ ಸಿಇಒ ರಘು ಅಯ್ಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಸಿಸಿಐ ನೂತನ ಕಾರ್ಯದರ್ಶಿ ಸಂಜಯ್ ಪಟೇಲ್ ಮತ್ತು ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಖಜಾಂಚಿ ಅಜಯ್ ಶಿರ್ಕೆ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಖಜಾಂಚಿ ತಲ್ಲಂ ವೆಂಕಟೇಶ್ ಅವರನ್ನು ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

`ಕಳ್ಳಾಟದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ (ಅಧಿಕಾರ ರಹಿತ) ಅವರ ಅಳಿಯ ಗುರುನಾಥ್ ಮೇಯಪ್ಪನ್ ಕುರಿತು ವಿಚಾರಣೆ ನಡೆಸಲು ನೇಮಿಸಲಾಗಿರುವ ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ, ಕುಂದ್ರಾ ವಿವಾದವನ್ನೂ ತನಿಖೆ ನಡೆಸುವ ಸಾಧ್ಯತೆಯಿದೆ. ಈ ಕುರಿತೂ ಸಭೆಯಲ್ಲಿ ಚರ್ಚಿಸಲಾಗುವುದು' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ಟಿ. ಜಯರಾಮ್ ಚೌಟ ಮತ್ತು ಆರ್. ಸುಬ್ರಮಣಿಯಮ್ ಇದ್ದಾರೆ.

`ಶ್ರೀಶಾಂತ್ ಬಂಧನ ಆಘಾತ ತಂದಿದೆ'
ಕೊಚ್ಚಿ ವರದಿ: `ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್ ಬಂಧನ ಕ್ರಿಕೆಟ್ ಪ್ರಿಯರಿಗೆ ಸಾಕಷ್ಟು ಆಘಾತ ತಂದಿದೆ' ಎಂದು ಶಶಿ ತರೂರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.