ಮಂಗಳವಾರ, ಜೂನ್ 22, 2021
26 °C

ಸ್ಫೋಟ: ಐವರು ಭಾರತೀಯರು ಸೇರಿ 11 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ (ಪಿಟಿಐ): ಕತಾರ್‌ನ ರಾಜ­ಧಾನಿ ದೋಹಾದ ಟರ್ಕಿ ರೆಸ್ಟೋರೆಂಟ್‌­ನಲ್ಲಿ ಗುರು­ವಾರ ಸಂಭವಿಸಿದ ಸ್ಫೋಟ­ದಲ್ಲಿ ಐವರು

ಭಾರತೀ­ಯರು ಸೇರಿ 11 ಜನ ಮೃತಪಟ್ಟಿದ್ದಾರೆ.ಮಾಲ್‌ ಪಕ್ಕದ ಟರ್ಕಿ ರೆಸ್ಟೋರೆಂಟ್‌ನಲ್ಲಿ ಈ ಸ್ಫೋಟ ಸಂಭ­ವಿಸಿದೆ. ಈ ರೆಸ್ಟೋರೆಂಟ್‌ ಪೆಟ್ರೊಲ್‌ ಬಂಕ್‌ ಪಕ್ಕದಲ್ಲಿಯೇ ಇದೆ.

ದುರ್ಘ­ಟನೆ­ಯಲ್ಲಿ 35 ಜನರು ಗಾಯ­ ಗೊಂಡಿ­ದ್ದು, ಈ ಕುರಿತು ಕತಾರ್‌ ಸರ್ಕಾರ ತನಿಖೆ ನಡೆಸುವುದಾಗಿ ಘೋಷಿಸಿದೆ.ಮೃತಪಟ್ಟ ಭಾರತೀಯರನ್ನು ರಿಯಾಸ್‌ ಖಿಜಕೆ­ಮನೊ­ಲಿಲ್‌, ಅಬ್ದುಲ್‌ ಸಲೀಂ ಪಾಲನ್‌­ಗಡ್‌, ಝಕ­ರಿಯಾ ಪಡಿಂ­ಜಾರೆ ಅನಕಂಡಿ, ವೆಂಕ­ಟೇಶ್‌ ಮತ್ತು ಶೇಖ್‌ ಬಾಬು ಎಂದು ಗುರುತಿ­ಸ­ಲಾಗಿದೆ. ಇನ್ನು ಉಳಿದವರಲ್ಲಿ ಇಬ್ಬರು ನೇಪಾಳಿ­ಯ­ರು, ನಾಲ್ವರು ಫಿಲಿಪ್ಪೀನ್ಸ್‌ನವರು ಎಂದು ಗುರುತಿಸಲಾಗಿದೆ.ಮೃತದೇಹಗಳನ್ನು ಸಂಬಂಧಿ­ಕರಿಗೆ ಕಳುಹಿ­ಸ­ಲಿ­ಕ್ಕಾಗಿ ಅಗತ್ಯ ಕ್ರಮ­ಕೈಗೊಳ್ಳಬೇಕು ಎಂದು ಕತಾರ್‌ ದೇಶಕ್ಕೆ ಕೋರಲಾಗಿದೆ ಎಂದು ಭಾರತೀಯ ರಾಯ­ಭಾರಿ ಸಂಜೀವ್‌ ಅರೋರಾ ತಿಳಿಸಿದ್ದಾರೆ.ಭಾರತೀಯನ ವಿರುದ್ಧ ಆರೋಪಪಟ್ಟಿ

ಸಿಡ್ನಿ (ಐಎಎನ್‌ಎಸ್‌):
ಹದಿಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯ ವಿರುದ್ಧ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.ಸುರೇಂದ್ರ ಚೌಧರಿ (57) ಅತ್ಯಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿ. ಆರೋಪಿ 2013ರಂದು ಸಿಡ್ನಿಯಲ್ಲಿ ಬಾಲಕಿಯ ಕೈ ಕಟ್ಟಿ­ಹಾಕಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.