ಶುಕ್ರವಾರ, ಏಪ್ರಿಲ್ 16, 2021
31 °C

ಸ್ಮಾರಕದೊಂದಿಗೆ ಪರಿಸರ ರಕ್ಷಣೆಗೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿ (ಹೊಸಪೇಟೆ): `ಐತಿಹಾಸಿಕ ತಾಣವಾದ ಹಂಪಿಯಲ್ಲಿ ಸ್ಮಾರಕ ಸಂರಕ್ಷಣೆಯ ಜೊತೆ ಪರಿಸರ ಹಾಗೂ ಆರೋಗ್ಯ ರಕ್ಷಣೆಯು ಮುಖ್ಯವಾಗಿದ್ದು ಪ್ರಾಧಿಕಾರದೊಂದಿಗೆ ಸ್ಥಳೀಯರು ಹಾಗೂ ಪ್ರವಾಸಿಗರು ಕೈಜೋಡಿಸಬೇಕು~ ಎಂದು ಹಂಪಿ ವಿಶ್ವಪರಂಪರಾ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಸಮನ್ವಯಾಧಿಕಾರಿ ಯಮುನಾ ನಾಯ್ಕ ಹೇಳಿದರು.ಹಂಪಿಯಲ್ಲಿ ಶುಕ್ರವಾರ ಪ್ರಾಧಿಕಾರ ಹಂಪಿ ಗ್ರಾಮ ಪಂಚಾಯ್ತಿ, ಫ್ರೆಂಡ್ಸ್ ಆಫ್ ಹಂಪಿ, ವಿಕಾಸ ಸೇವಾ ಸಂಸ್ಥೆ ಹೊಸಪೇಟೆ, ಹಂಪಿ ಫೌಂಡೇಷನ್, ಶ್ರೀನಿವಾಸ ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆ, ಮನೆ ಕಸ ಸಂಗ್ರಹಣೆ ಹಾಗೂ ನಿರ್ವಹಣಾ ಜಾಗೃತಿ ಕಾರ್ಯಕ್ರಮ ಮತ್ತು `ನಿರ್ಮಲ ಹಂಪಿ~ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ಮಾರಕಗಳು ಅವುಗಳ ರಕ್ಷಣೆ ಅಷ್ಟೇ ಪ್ರಮುಖವಾಗಿರುವ ಪರಿಸರ ಹಾಗೂ ಆರೋಗ್ಯ ರಕ್ಷಣೆಗೂ ಮುಂದಾಗುವಂತೆ ಸಾರ್ವಜನಿಕರಿಗೆ ಮಾಹಿತಿ ಮಾಡುವ ಮಹತ್ವವನ್ನು ಪ್ರಾಧಿಕಾರ ತಿಳಿಸುತ್ತಿದೆ. ಸಾರ್ವಜನಿಕರು ಕೈಜೋಡಿಸುವಂತೆ ಪ್ರತಿಮನೆಗೂ ಎರಡು ಕಸದ ಡಬ್ಬಾಗಳನ್ನು ನೀಡಲಾಗುತ್ತಿದ್ದು ಕಸ ಪ್ರತ್ಯೇಕಗೊಳಿಸಿ, ಸಂಗ್ರಹಿಸಿ ಶುಚಿ ಕಾರ್ಮಿಕರಿಗೆ ನೀಡಲು ಮುಂದಾಗುವಂತೆ ಕೋರಿದರು.ಪ್ರಾಥಮಿಕ ಶಾಲೆಯ ಮುಖ್ಯಗುರು ಸಿದ್ದಪ್ಪ ಮಾತನಾಡಿ ಮಕ್ಕಳು ಹಾಗೂ ಸಾರ್ವಜನಿಕರು ಸ್ಮಾರಕಗಳ ಮಹತ್ವ ಹಾಗೂ ಸ್ವಚ್ಛತೆಯ ಮಹತ್ವವನ್ನು ಅರಿಯಬೇಕಾಗಿರುವುದು ಅಗತ್ಯವಾಗಿದೆ ತಾವು ತಿಳಿದು, ನೆರೆಹೊರೆಯವರಿಗೂ ತಿಳಿವಳಿಕೆ ನೀಡಬೇಕು ಎಂದರು.ಸಮಾರಂಭದಲ್ಲಿ ಹಂಪಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೆಂಕಟಲಕ್ಷ್ಮಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಿ.ಪಿ. ಮಹೇಶ್, ಹಂಪಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಿರಣ್ ಮತ್ತು ಹಂಪಿ ಪುನರ್‌ವಸತಿ ಸಮಿತಿ ಅಧ್ಯಕ್ಷ ಕುಬೇರಪ್ಪ ಮಾತನಾಡಿದರುಹಂಪಿ ಗ್ರಾ.ಪಂ. ಅಧ್ಯಕ್ಷ ವಿರೂಪಾಕ್ಷಗೌಡ ಉದ್ಘಾಟಿಸಿದರು, ಪ್ರಾಧಿಕಾರದ ಅಧಿಕಾರಿಗಳಾದ ಗುರುರಾಜ ದಿಗ್ಗಾವಿ, ಸುಭಾಷ್, ವಿರೂಪಾಕ್ಷಪ್ಪ, ಪಂಪನಗೌಡ, ಗೋವಿಂದರಾಜ್, ವಿಕಾಸ ಸೇವಾ ಸಂಸ್ಥೆಯ ಪ್ರವೀಣ ಕುಲಕರ್ಣಿ ಸೇರಿದಂತೆ ಸ್ಥಳೀಯರು ಹಾಜರಿದ್ದರು.ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು, ದೇಶ ವಿದೇಶಗಳ ಪ್ರವಾಸಿಗರು ಮತ್ತು ಸ್ಥಳೀಯರು ಕರಪತ್ರ ಹಂಚಿಕೆ. ಕಸ ಸಂಗ್ರಣೆಗಾಗಿ ನೀಡಿದ ಪುಟ್ಟಿಗಳ ವಿತರಣೆ, ಸ್ವಚ್ಛತೆ ಹಾಗೂ ಆರೋಗ್ಯ ರಕ್ಷಣೆಯ ಮಹತ್ವ ತಿಳಿಸುವ ನಾಮ ಫಲಕಗಳೊಂದಿಗೆ ಜಾಗೃತಿ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.