ಸೋಮವಾರ, ಜನವರಿ 27, 2020
28 °C

ಸ್ವಚ್ಛತೆಗೆ ಸಹಕಾರ ಅವಶ್ಯ: ಬಾಲರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಸ್ವಚ್ಛತೆ ಕಾರ್ಯ ಕೈಗೊಳ್ಳುವ ಪುರಸಭೆಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದು ತಹಸೀಲ್ದಾರ ಬಾಲರಾಜ ಹೇಳಿದರು. ಪುರಸಭೆ ವತಿಯಿಂದ ಪಟ್ಟಣದ ಶಿವಪೂರ ಓಣಿಯಲ್ಲಿ ಭಾನುವಾರ ಆಯೋಜಿಸಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.ಮುಖ್ಯಧಿಕಾರಿ ಸತೀಶ ಗುಡ್ಡೆ ಮಾತನಾಡಿ, ಸ್ವಚ್ಛತೆ ಕೈಗೊಳ್ಳುವುದು ಪುರಸಭೆ ಆದ್ಯ ಕರ್ತವ್ಯ. ಅದಕ್ಕೆ ಸಹಕಾರ ನೀಡುವ ಕೆಲಸ ಸಾರ್ವಜನಿಕರಿಂದ ಆಗಬೇಕು ಎಂದರು. ಮನೆಯಲ್ಲಿನ ಕಸವನ್ನು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಎಸೆಯುದೆ ಅದಕ್ಕೆಂದೇ ಇಡಲಾದ ಡಬ್ಬಿಗಳಲ್ಲಿ ಎಸೆಯಬೇಕು ಎಂದರು.ನೈರ್ಮಲ್ಯ ನಿರೀಕ್ಷಕ ಲೋಹಿತಕುಮಾರ ಮಾತನಾಡಿ, ನೀವು ಮಾಡುವ ಅತ್ಯಂತ ಸಣ್ಣ ತಪ್ಪಿನಿಂದ ನಿಮ್ಮ ಮಕ್ಕಳಿಗೆ ವಿವಿಧ ರೋಗಗಳು ತಗಲುವ ಸಾಧ್ಯತೆ ಇರುವುದರಿಂದ ಮನೆಯ ಅಂಗಳ ಮೊದಲಾದ ಕಡೆಗಳಲ್ಲಿ ಬಿದ್ದ ಸಣ್ಣ ಡಬ್ಬಿ, ಒಡೆದ ಮಡಿಕೆ ಮೊದಲಾದವುಗಳಲ್ಲಿ ನೀರು ಸಂಗ್ರಹ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಂಥ ವಸ್ತುಗಳನ್ನು ಸಾಧ್ಯವದಷ್ಟು ಬೀಸಾಡುವುದು ಒಳಿತು ಎಂದು ಅವರು ಸಲಹೆ ನೀಡಿದರು.ಮಳೆಗಾಲ ಅವಧಿಯಲ್ಲಿ ಪುರಸಭೆಯಿಂದ ಬಿಡುವ ನೀರನ್ನು ಕಾಯಿಸಿ, ಸೋಸಿ ಕುಡಿಯುವುದರಿಂದ ಬರುವ ರೋಗಗಳನ್ನು ನೀಯಂತ್ರಿಸಬಹುದು ಎಂದು ನೀರು ವಿಭಾಗದ ಪ್ರಮುಖ ಈಶ್ವರ ತೆಲಂಗ ತಿಳಿಸಿದರು. ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ಮಹಾರುದ್ರ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)