ಸ್ವಚ್ಛತೆ ಕಾಪಾಡಲು ಪಾಲಿಕೆ ವಿಫಲ: ಆರೋಪ
ಬಳ್ಳಾರಿ: ಸುಂದರ ನಗರ, ಸ್ವಚ್ಛ ನಗರ ಯೋಜನೆಯನ್ನು ಅಬ್ಬರದ ಪ್ರಚಾರ ಕ್ಕಾಗಿ ಬಳಸಿಕೊಂಡಿರುವ ಬಳ್ಳಾರಿ ಮಹಾನಗರ ಪಾಲಿಕೆ, ನಗರದ ಸ್ವಚ್ಛತೆ ಕಾಪಾಡುವಲ್ಲಿ ಸಂಪೂರ್ಣ ವಿಫಲ ವಾಗಿದೆ ಎಂದು ಜಿಲ್ಲಾ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೆ.ಎಸ್. ಆಂಜನೇಯಲು ಆರೋಪಿಸಿದ್ದಾರೆ.
ನಗರದ ವಿವಿಧ ಬಡಾವಣೆಗೆಳಿಗೆ ಶನಿವಾರ ಭೇಟಿ ನೀಡಿ ವೀಕ್ಷಿಸಿದ ಅವರು, ಒಡ್ಡರಬಂಡೆ, ದೊಡ್ಡ ಹಾಗೂ ಸಣ್ಣ ಮಾರುಕಟ್ಟೆ ಸೇರಿದಂತೆ ಬಹುತೇಕ ಪ್ರದೇಶಗಳು ಅಕ್ಷರಶಃ ಕೊಳೆಗೇರಿಗಳಂತೆ ಕಂಗೊಳಿಸುತ್ತಿವೆ. ಎಲ್ಲ ಬೀದಿಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಗಲೀಜು ತುಂಬಿಕೊಮಡಿರುವ ಚರಂಡಿಗಳು, ಒಳ ಚರಂಡಿಗಳನ್ನು ಸ್ವಚ್ಛಗೊಳಿಸದೆ ವರ್ಷ ಗಳೆ ಉರುಳಿವೆ ಎಂದು ಅವರು ಕಿಡಿಕಾರಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪ, ಸಿಬಿಐ ದಾಳಿಯ ಭಯದಿಂದ ಪಾಲಿಕೆಯ ಅನೇಕ ಸದಸ್ಯರು ಯಾರ ಕಣ್ಣಿಗೂ ಕಾಣದೇ ಓಡಾಡುತ್ತಿರುವುದ ರಿಂದ ಇಂತಹ ಸಮಸ್ಯೆಗಳು ಉದ್ಭವಿಸಿವೆ ಎಂದು ಅವರು ದೂರಿದ್ದಾರೆ.
ನಗರದಲ್ಲಿ ಡೆಂಗೆ, ಚಿಕೂನ್ಗುನ್ಯಾ, ಟೈಫೈಡ್, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದರೂ ಪಾಲಿಕೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ, ಅನೇಕ ಾವು- ನೋವುಗಳು ಸಂಭವಿಸುತ್ತಿವೆ, ಒಂದು ವೇಳೆ ಪಾಲಿಕೆ ತನ್ನ ಕಾರ್ಯ ವೈಖರಿ ಬದಲಿಸದೇ ಇದ್ದರೆ, ಕಾಂಗ್ರೆಸ್ ಬೀದಿಗಿಳಿದು ಹೋರಾಡಲಿದೆ ಎಂದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.