ಸೋಮವಾರ, ಮೇ 17, 2021
25 °C

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಆರ್‌ಪಿಎಫ್ ವಸತಿ ಗೃಹ:ಕೇಂದ್ರದ ನೆರವು

ನವದೆಹಲಿ (ಪಿಟಿಐ):
ಅರೆ ಸೇನಾ ಪಡೆಯ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಹಾಗೂ ಗಡಿಯಲ್ಲಿರುವ ಕಾವಲು ಚೌಕಿಗಳನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ರೂಪಾಯಿ ನೀಡಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.ಸೋಮವಾರ ಸಿಆರ್‌ಪಿಎಫ್ ಆಯೋಜಿಸಿದ್ದ ಶೌರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಅವರು ಈ ವಿಷಯ ಪ್ರಕಟಿಸಿದ್ದಾರೆ. ವಸತಿ ಗೃಹಗಳ ನಿರ್ಮಾಣ ಹಾಗೂ ಗಡಿ ಕಾವಲು ಚೌಕಿಗಳ ಪುನರ್‌ನವೀಕರಣಕ್ಕೆ ಈ ಹಣವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.ನಕ್ಸಲ್ ನಿಗ್ರಹ ಪಡೆ, ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ಬಂಡುಕೋರರ ವಿರುದ್ಧ ಹೋರಾಡಿದ ಸಿಆರ್‌ಪಿಎಫ್‌ನ   84 ಯೋಧರಿಗೆ (13 ಮರಣೋತ್ತರ) ಶೌರ್ಯ ಪ್ರಶಸ್ತಿಯನ್ನು ಸಚಿವರು ಪ್ರದಾನ ಮಾಡಿದರು.

ಮುಂದಿನ ದಿನಗಳಲ್ಲಿ ಸಿಆರ್‌ಪಿಎಫ್ ಮತ್ತಷ್ಟು ಬಲಗೊಳ್ಳಬೇಕು ಎಂದು ಸಿಆರ್‌ಪಿಎಫ್ ಮುಖ್ಯಸ್ಥ ಕೆ.ವಿಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಕಳಪೆ ಆಹಾರ ಧಾನ್ಯ

ಶಿಮ್ಲಾ (ಐಎಎನ್‌ಎಸ್): 
ಹಿಮಾಚಲ ಪ್ರದೇಶದಲ್ಲಿ  2006ರಿಂದ 2011ರ ಅವಧಿಯಲ್ಲಿ 2,066 ಟನ್‌ಗಳಷ್ಟು ಕಳಪೆ ಗುಣಮಟ್ಟದ ಬೆಳೆಕಾಳುಗಳು ಮತ್ತು 1,167 ಟನ್ ಆಹಾರಧಾನ್ಯಗಳನ್ನು ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.ದುಂದು ವೆಚ್ಚ

ಪಟ್ನಾ(ಪಿಟಿಐ):
ಬಿಹಾರದ ಪಶು ಸಂಗೋಪನ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯು 19.1 ಕೋಟಿ ರೂಪಾಯಿಯಷ್ಟು ದುಂದುವೆಚ್ಚ ಮಾಡಿದೆ ಎಂದು ಮಹಾಲೇಖಾಪಾಲರು (ಸಿಎಜಿ) ವರದಿ ತಿಳಿಸಿದೆ.

ಇಲಾಖೆಯ ಅಧೀನದಲ್ಲಿರುವ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಂಸ್ಥೆಗಳ ಸಿಬ್ಬಂದಿಗೆ ವೇತನ, ಭತ್ಯೆ ಇತ್ಯಾದಿ ನೀಡಲು ಈ ಹಣ ವ್ಯಯಿಸಲಾಗಿದೆ ಎಂದು ವರದಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.