ಬುಧವಾರ, ಏಪ್ರಿಲ್ 14, 2021
24 °C

ಸ್ವಾತಂತ್ರ್ಯೋತ್ಸವ ಸಂಭ್ರಮ; ತಿರಂಗಾ ಮೆರಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯೋತ್ಸವ ಸಂಭ್ರಮ; ತಿರಂಗಾ ಮೆರಗು

ವಿಜಾಪುರ: ಸ್ವಾತಂತ್ರ್ಯೋತ್ಸವದ 66ನೇ ದಿನಾಚರಣೆಯನ್ನು ವಿಜಾಪುರ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದರು.ಪೊಲೀಸ್ ಬ್ಯಾಂಡ್, ಪೊಲೀಸ್ ಪಡೆ, ಎನ್‌ಸಿಸಿ, ಗೃಹರಕ್ಷಕ ದಳ, ಮಾಜಿ ಸೈನಿಕರು ಹಾಗೂ ವಿವಿಧ ಶಾಲಾ ಮಕ್ಕಳು ಆಕರ್ಷಕ ಪಥಸಂಚಲನ ನಡೆದಿದರು. ದಿ.ಶಂ.ಗು. ಬಿರಾದಾರ ಅವರ `ನಾವು ಎಳೆಯರು...~ ಗೀತೆಗೆ ಮಕ್ಕಳು ಸಮೂಹ ನೃತ್ಯ ಪ್ರದರ್ಶಿಸಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು.ಸಾಧಕರು, ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಸಾರಿಗೆ ಸಂಸ್ಥೆಯಲ್ಲಿ ಸತತ ಐದು ವರ್ಷಗಳ ಕಾಲ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.ಪತ್ರಕರ್ತರ ಸಂಘ:

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಪತ್ರಕರ್ತರಾದ ಅನಿಲ ಹೊಸಮನಿ, ಮಹೇಶ ಶೆಟಗಾರ, ಪತ್ರಕರ್ತ ಬಾಬುರಾವ ಕುಲಕರ್ಣಿ, ಸೀತಾರಾಮ ಕುಲಕರ್ಣಿ ಮಾತನಾಡಿದರು.ರಾಜೇಂದ್ರ ಸರಾಫ, ವಾಸುದೇವ ಹೇರಕಲ್, ರಾಹುಲ್ ಮಾನಕರ, ವಿಠ್ಠಲ ಲಂಗೋಟಿ, ಸಾಗರ ಕಾಂಬಳೆ, ಶಮಸುದ್ದಿನ ಸಯ್ಯದ, ಸರ್ದಾರ ಪತ್ತಾರ, ವಿಲಾಸ ವ್ಯಾಸ, ಲಂಬು ಇತರರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎನ್. ಕೊಂಡಗೂಳಿ ಸ್ವಾಗತಿಸಿದರು. ಸಚ್ಚೇಂದ್ರ ಲಂಬು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎನ್.ಎ. ನಾವಿ ಕಾರ್ಯಕ್ರಮ ನಿರೂಪಿಸಿದರು.ವಿ.ಎಸ್.ಜಿ. ಕಾಲೇಜು:

ಇಲ್ಲಿಯ ವೇದಮಾತೆ ಗಾಯತ್ರಿ ಪ್ರತಿಷ್ಠಾನದಿಂದ ವಿ.ಎಸ್.ಜಿ. ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎಚ್. ಕಡ್ಲಿಮಟ್ಟಿ ಧ್ವಜಾರೋಹಣ ನೆರವೇರಿಸಿದರು. ಅಶ್ವಿನಿಕುಮಾರ ಕೋಷ್ಟಿ, ಪ್ರಾಚಾರ್ಯ ರಶೀದ್ ಎಚ್. ಬಿರಾದಾರ ಮಾತನಾಡಿದರು. ಮಯೂರ ಕುದರಿ, ನಸೀಮಾ ಬೋಜಾ, ಆರ್.ಪಿ. ಸಾಲಿಮಠ, ಆರತಿ ಕುಲಕರ್ಣಿ, ಸಿದರಾಯ ಕೊಟ್ಟಲಗಿ ಪಾಲ್ಗೊಂಡಿದ್ದರು.ಹೊಳಿ ಸರ್ ಶಿಕ್ಷಣ ಸಂಸ್ಥೆ:

ಸ್ಥಳೀಯ ಎಸ್.ಬಿ. ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಧ್ವಜಾರೋಹಣದಲ್ಲಿ ಎನ್.ಎಸ್. ಹೊಳಿ, ಶಿವಯೋಗಿ ಹೊಳಿ, ಎಸ್.ಎನ್. ಹೊಳಿ, ಪಿ.ವಿ. ಮುರಗೋಡ, ಅನುರಾದ ಅಜನಾಳ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ದಯೆ ಸಂಸ್ಥೆ:

ನಗರದ ದಯೆ ಸಂಸ್ಥೆಯ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ಪಡೇಕನೂರ ಧ್ವಜಾರೋಹಣ ನೆರವೇರಿಸಿದರು. ಹಸೀನಾ ಮಕಾನದಾರ, ಶಾರದಾ ಪಾಟೀಲ, ಶಶಿಕಲಾ ರಾಠೋಡ, ವಿಜಯ ಬಿರಾದಾರ, ಶ್ರೀರಾಮ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.ಶಾಲೆ ನಂ.21:

ಮುರಾಣಕೇರಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.21ರಲ್ಲಿ ನಗರ ಸಭೆ ಸದಸ್ಯ ಗೂಳಪ್ಪ ಶೆಟಗಾರ ಧ್ವಜಾರೋಹಣ ನೆರವೇರಿಸಿದರು. ಎಸ್.ಜಿ. ರಾಂಪೂರ, ನಾಗಪ್ಪ ಸಾಹುಕಾರ, ಬಸವರಾಜ ಪಡಗಾನೂರ, ಎಚ್.ಜಿ. ದೊಡಮನಿ ಇತರರು ಪಾಲ್ಗೊಂಡಿದ್ದರು.ಕಾಳಿದಾಸ ಶಿಕ್ಷಣ ಸಂಸ್ಥೆ:

ನಗರದ ಅಥಣಿ ರಸ್ತೆಯ ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾಳಿದಾಸ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್. ಜಿದ್ದಿ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಷತ್‌ನ ಮಾಜಿ ಸದಸ್ಯ ಎಸ್.ಎ. ಜಿದ್ದಿ, ಉಪ ಪ್ರಾಚಾರ್ಯ ಕೆ.ಆರ್. ಜಾಧವ, ಎಲ್.ಎಸ್. ಜಿದ್ದಿ, ಎಸ್.ಡಿ. ದುರ್ಗಣ್ಣವರ, ಪಿ.ಆರ್. ಡಂಗಿ ಪಾಲ್ಗೊಂಡಿದ್ದರು.ಸಮಾಜ ಕಲ್ಯಾಣ ಸಂಸ್ಥೆ: 

 ಮಹಾತ್ಯಗಾಂಧಿ ವಿವಿಧೋದ್ದೇಶ ಹಾಗೂ ಸಮಾಜ ಕಲ್ಯಾಣ ಸಂಸ್ಥೆಯಿಂದ ಫಾದರ್ ಟಿ. ಮಚಾದು ಧ್ವಜಾರೋಹಣ ನೆರವೇರಿಸಿದರು. ಶೋಭಾ ಗಾಯಕವಾಡ, ಜುಬೇದಾ ಹಣಗಿ, ಶಾಮ್ ಸೂರ್ಯವಂಶಿ, ರವಿ ದೊಡಮನಿ ಮುಂತಾದವರು ಭಾಗವಹಿಸಿದ್ದರು.ರಾಜ್ಯ ಸರ್ಕಾರಿ ನೌಕರರ ಸಂಘ:

ನಗರದ ರಾಜ್ಯ ಸರ್ಕಾರಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೆಡಶ್ಯಾಳ ಧ್ವಜಾರೋಹಣ ನೆರವೇರಿಸಿದರು. ಎಸ್.ಬಿ. ನಿಂಬರಗಿ, ಎಸ್.ಎಂ. ಕರ್ಜಗಿ, ಎಸ್.ಎಸ್. ಬಿರಾದಾರ, ಬಿ.ಎಂ. ಬಿರಾದಾರ, ಎ.ಬಿ. ಕೋಷ್ಟಿ ಮತ್ತಿತರರು ಉಪಸ್ಥಿತರಿದ್ದರು.ವಿದ್ಯಾ ವಿಕಾಸ ಮಂದಿರ:

ನಗರದ ತೊರವಿ ರಸ್ತೆಯ ವಿದ್ಯಾ ವಿಕಾಸ ಮಂದಿರ ಪ್ರಾಥಮಿಕ ಶಾಲೆಯಲ್ಲಿ ಗೋವಿಂದ ಡಂಬಳ ಧ್ವಜಾರೋಹಣ ನೆರವೇರಿಸಿದರು. ಧನಂಜಯ ಕುಲಕರ್ಣಿ, ವೈಜಯಂತಿ ಕುಲಕರ್ಣಿ, ಭಾರತಿ ಕುಲಕರ್ಣಿ, ವಿ.ಜೆ. ಚಿಮ್ಮಲಗಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.ರೋಟರಿ ಹೆರಿಟೇಜ್ ಕ್ಲಬ್:

ಇಲ್ಲಿಯ ರೋಟರಿ ಕ್ಲಬ್ ಆಫ್ ವಿಜಾಪುರ ಹೆರಿಟೇಜ್, ವಿಜಾಪುರ ಎಜ್ಯುಕೇಶನಲ್ ಅಕಾಡೆಮಿ ಹಾಗೂ ಜೈನ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಡಾ.ಖಾಲಿದ ಫಾರೂಖಿ, ಉಮೇಶ ಕಾರಜೋಳ, ಗೋಪಿ ಮುದ್ದೇಬಿಹಾಳ, ಡಾ.ಈರಣ್ಣ ತೊರವಿ, ಮುದ್ದಣ್ಣ ಭೀಮಾನಗರ, ಕೇತನ ಶಹಾ, ಅಮೀನ್ ಹುಲ್ಲೂರು, ಸುರೇಶ ವಿಜಾಪುರ, ಸೊಲೋಮನ್ ಹೊಸಳ್ಳಿ, ರವೀಂದ್ರ ಗುರುಮಠ, ಅಭಯ ಸಖದೇವ, ಪ್ರದೀಪ ಗಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾಖಂಡಕಿ:

ತಾಲ್ಲೂಕಿನ ಕಾಖಂಡಕಿ ಗ್ರಾಮದ ಸಮುದಾಯ ಭವನದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಮುತ್ತಪ್ಪ ಸಿದರಡ್ಡಿ ಧ್ವಜಾರೋಹಣ ನೆರವೇರಿಸಿದರು. ಯಮನಪ್ಪ ಸಿದರಡ್ಡಿ, ಶಿವಾನಂದ ಕಣಬೂರ, ಭೀಮಶಿ ದೊಡಮನಿ, ರಾಜು ಸಿದರಡ್ಡಿ, ತಪ್ಪಣ್ಣ ಬರಡ್ಡಿ ಇತರರು ಉಪಸ್ಥಿತರಿದ್ದರು.ನಾಗಠಾಣ:

ತಾಲ್ಲೂಕಿನ ನಾಗಠಾಣದ ಚಂದ್ರಶೇಖರ ಮಹಾರಾಜ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣಬಸು ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ರೊಳ್ಳಿ, ಪ್ರಶಾಂತ ಹೊಸಮನಿ, ಮ್ಯಾಗೇರಿ, ಸಾಯಬಣ್ಣ ಜನವಾಡ, ಅರುಣಕುಮಾರ ಬಡಿಗೇರ ಭಾಗವಹಿಸಿದ್ದರು.ಕಣಬೂರ:

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ಪ ಮುಧೋಳ ಧ್ವಜಾರೋಹಣ ನೆರವೇರಿಸಿದರು. ಬಸಪ್ಪ ಮುಧೋಳ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ಮಲ್ಲನಗೌಡ ಪಾಟೀಲ ಮಕ್ಕಳಿಗೆ ಸಿಹಿ ಹಂಚಿದರು. ಇನಾಮದಾರ, ರಾಜೇಶ ಪೂಜಾರಿ, ವೈ.ಎಸ್. ಈಳಗೇರಿ ಹಾಗೂ ಶಾಲಾ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾಸ್ಮೊನಿಕೇತನ ಸ್ಕೂಲ್:

ತಾಲ್ಲೂಕಿನ ಬುರಣಾಪೂರ ಗ್ರಾಮದ ಕಾಸ್ಮೊನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಭಾಷಣ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  ಸಂಸ್ಥೆಯ ಅಧ್ಯಕ್ಷ ಪ್ರಣವ್ ಕುಂಬಾರ, ಐ.ಸಿ. ಪಟ್ಟಣಶೆಟ್ಟಿ, ಎಸ್.ಎಸ್. ವಂಟಮುರಿ, ಕೆ.ಎಂ. ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.ಆಲಮಟ್ಟಿ ವರದಿ

ಆಲಮಟ್ಟಿ:  ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನೀಯರ್ ಅನಂತರಾಮು  ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಜರುಗಿದ ಧ್ವಜಾರೋಹಣ ನೆರವೇರಿಸಿ  ಮಾತನಾಡಿದರು.ಈ ಸಂದರ್ಭದಲ್ಲಿ ಸಿದ್ಧೇಶ್ವರಾನಂದ ಸ್ವಾಮೀಜಿ, ವಿ.ಕೆ. ಪೋತದಾರ, ವಿ.ವಿ. ಶೀರಿ, ಆರ್. ತಿರಮೂರ್ತಿ, ಎಸ್.ಎಲ್. ತೆಲಗಿ, ಎಸ್.ಬಿ. ದಳವಾಯಿ, ಡಾ. ಎ.ಜಿ. ಬಿರಾದಾರ, ವೈ.ವೈ. ಸಂಶಿ, ಮಲ್ಲಿಕಾರ್ಜುನಯ್ಯ ಗುಮತಿಮಠ, ಎನ್.ಬಿ. ದೇಸಾಯಿ, ವೈ.ಎಚ್. ನಾಗಣಿ, ಅಮ್ಮಲ್, ಎಸ್.ಬಿ. ಪಾಟೀಲ, ಎಸ್.ಐ. ಹರಣಶಿಕಾರಿ, ಜಿ.ಸಿ. ದ್ಯಾವಣ್ಣವರ, ಎಂ.ಎಸ್. ಭಂಡಾರಿ, ಕಲಾಕ್ಷಿ ಹಿರೇಮಠ, ಬಿ.ಐ. ಖ್ಯಾಡಿ, ಎಸ್.ಆರ್. ಅಂಗಡಿ ಹಾಜರಿದ್ದರು. ಎಸ್.ಬಿ. ಪಾಟೀಲ ಸ್ವಾಗತಿಸಿದರು. ಜಿ.ಎಂ. ಕೊಟ್ಯಾಳ, ಎನ್.ಎಸ್. ಬಿರಾದಾರ  ನಿರೂಪಿಸಿದರು. ಎಂ.ಎಸ್. ಮಮದಾಪೂರ ವಂದಿಸಿದರು.

ಆಲಮಟ್ಟಿಯ ಶಾಲೆ: ಆಲಮಟ್ಟಿಯ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಲಮಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಸ್.ಹೆಬ್ಬಾಳ ಧ್ವಜಾರೋಹಣ ನೆರವೇರಿಸಿದರು. ಕೆ.ಎಸ್. ಧನಶೆಟ್ಟಿ, ಕೋಟೆಣ್ಣವರ, ಅಂಗಡಿ, ತಿಮ್ಮೋಪೂರ ಮೊದಲಾದವರಿದ್ದರು.  ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿದರು...

ಸಿಂದಗಿ: ಸ್ವಾತಂತ್ರ್ಯೋತ್ಸವ ದಿನದಂದು ಅರ್ಧ ರಾಷ್ಟ್ರಧ್ವಜ ಹಾರಿಸಿದ ಅವಘಡ ಸಿಂದಗಿ ತಾಲ್ಲೂಕಿನ ಕೋರವಾರದಲ್ಲಿ ಬುಧವಾರ ನಡೆದಿದೆ.ಕೋರವಾರ ಸಿಂಡಿಕೇಟ್ ಬ್ಯಾಂಕ್ ಮೇಲೆ ಸಿಬ್ಬಂದಿ ಅರ್ಧ ಧ್ವಜ ಹಾರಿಸಿ ಹೋಗಿದ್ದಾರೆ ಎಂದು ಸ್ಥಳೀಯ ಜಯಕರ್ನಾಟಕ ಘಟಕ ಆಕ್ರೋಶ ವ್ಯಕ್ತಪಡಿಸಿದೆ.ರಾಷ್ಟ್ರಧ್ವಜದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಯಕರ್ನಾಟಕ ಪದಾಧಿಕಾರಿಗಳಾದ ಸುಭಾಸ ಕುಳೇಕುಮಟಗಿ, ಎಚ್.ಬಿ.ಯತ್ನಾಳ, ಎಸ್.ಬಿ.ನಾಗರಾಳ, ಸಿ.ಎಸ್.ಬಿರಾದಾರ, ಐ.ವೈ.ನಾದ, ಎನ್.ಕೆ.ಬಡಿಗೇರ ಆಗ್ರಹಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.