ಚಾಮರಾಜನಗರ: ಕೈಯಲ್ಲಿ ಬಾವುಟ ಹಿಡಿದಿದ್ದ ಪುಟಾಣಿಗಳು. ಸಮವಸ್ತ್ರ ಧರಿಸಿ ಪಥ ಸಂಚಲನಕ್ಕೆ ಸಜ್ಜಾಗಿದ್ದ ವಿದ್ಯಾರ್ಥಿಗಳು. ಅವರ ಪಕ್ಕದಲ್ಲಿಯೇ ಚಾಮರಾಜ ಕಮಾಂಡೊ ಪಡೆ. ಧ್ವಜಾರೋಹಣ ನೋಡಲು ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ನಾಗರಿಕರು. ಸ್ವಾತಂತ್ರ್ಯ ಸೇನಾನಿಗಳ ವೇಷತೊಟ್ಟಿದ್ದ ಮಕ್ಕಳು. ಬಿರು ಬಿಸಿಲನ್ನೂ ಲೆಕ್ಕಿಸದೆ ತ್ರಿವರ್ಣ ಧ್ವಜ ಹಾರಾಡಿದ ಕ್ಷಣಕ್ಕೆ ಸಾಕ್ಷಿಯಾದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 66ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳು, ಪೊಲೀಸ್ ಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಸಚಿವ ವಿ.ಸೋಮಣ್ಣ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡುತ್ತಾ, `ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ. ಜಿಲ್ಲೆಯಲ್ಲಿ ಒಟ್ಟು 400 ಕೋಟಿ ರೂ ವೆಚ್ಚದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರವಾಸೋದ್ಯಮಕ್ಕೂ ಅನುದಾನ ನೀಡಲಾಗಿದೆ. ಜಿಲ್ಲೆಯ 297 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಸರ್ಕಾರದಿಂದ 262 ಕೋಟಿ ರೂ. ಬಿಡುಗಡೆಯಾಗಿದೆ~ ಎಂದರು.

ಜಿಲ್ಲೆಯ 11,491 ಹೆಕ್ಟೇರ್ ಪ್ರದೇಶದಲ್ಲಿ ಸಮಪಾತಳಿ ಬದು ನಿರ್ಮಾಣ, ಬದು ದುರಸ್ತಿ, ತಡೆಗೋಡೆ, ಇಂಗುಗುಂಡಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಬರಪರಿಹಾರ ಯೋಜನೆಯಡಿ ಜಿಲ್ಲೆಗೆ ಒಟ್ಟು 12.50 ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸಲು ಆದ್ಯತೆ ನೀಡಲಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ 25 ಸಾವಿರ ರೂ. ಬೆಳೆಸಾಲ ಮನ್ನಾ ಮಾಡಿದೆ ಎಂದು ವಿವರಿಸಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ನಡಿ 767.34 ಹೆಕ್ಟೇರ್ ಪ್ರದೇಶದಲ್ಲಿ ಮಾವು, ಸಪೋಟ, ಹುಣಿಸೆ, ತೆಂಗು, ನುಗ್ಗೆ ಬೆಳೆಯಲು 91,078 ಸಸಿ ವಿತರಿಸಲಾಗಿದೆ. ಸುವರ್ಣ ಭೂಮಿ ಯೋಜನೆಯಡಿ 9,400 ಫಲಾನುಭವಿಗಳಿಗೆ 5.50 ಕೋಟಿ ರೂ. ಆರ್ಥಿಕ ನೆರವು ನೀಡುವ ಗುರಿ ಹೊಂದಲಾಗಿದೆ. 3,257.45 ಹೆಕ್ಟೇರ್ ಪ್ರದೇಶದಲ್ಲಿ ತೇಗ, ಹೆಬ್ಬೇವು ಸೇರಿದಂತೆ 3 ಲಕ್ಷ ಸಸಿ ಬೆಳೆಸಲಾಗಿದೆ ಎಂದರು.

ಆರೋಗ್ಯ ಕವಚ ಯೋಜನೆಯಡಿ 9 ತುರ್ತು ವಾಹನಗಳಿದ್ದು, 4,300 ರೋಗಿಗಳಿಗೆ ಸೌಲಭ್ಯ ನೀಡಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಕೆರೆಗಳಲ್ಲಿ 6 ಲಕ್ಷ ವಿವಿಧ ಜಾತಿಯ ಮೀನುಮರಿ ಬಿತ್ತನೆ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ 43 ಕೋಟಿ ರೂ ವೆಚ್ಚದಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಭಾಗ್ಯಲಕ್ಷ್ಮೀ ಯೋಜನೆಯಡಿ 27,500 ಬಿಪಿಎಲ್ ಕುಟುಂಬಗಳು ಪ್ರಯೋಜನ ಪಡೆದಿವೆ. ಎಸ್ಜಿಎಸ್ವೈ ಯೋಜನೆಯಡಿ 326 ಸ್ವಸಹಾಯ ಗುಂಪುಗಳಿಗೆ 15 ಕೋಟಿ ರೂ ಸಾಲ ಹಾಗೂ 4 ಕೋಟಿ ರೂ ಸಹಾಯಧನ ಸೌಲಭ್ಯ ಕಲ್ಪಿಸಲಾಗಿದೆ.

1,805 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿದ್ದು, 380 ಟನ್ ರೇಷ್ಮೆಗೂಡು ಉತ್ಪಾದಿಸಲಾಗಿದೆ. ಪರಿಶಿಷ್ಟರ ಕಾಲೊನಿಗಳ ಅಭಿವೃದ್ಧಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ ನೀಡಲಾಗಿದ್ದು, 113 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಾಸ್ಟೆಲ್ ದುರಸ್ತಿಗೆ 1.28 ಕೋಟಿ ರೂ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 232 ಕೋಟಿ ರೂ ಬಿಡುಗಡೆಯಾಗಿದೆ. ಕಾಮಗಾರಿಯೂ ಪ್ರಗತಿಯಲ್ಲಿದೆ. 291 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಪ್ರಸಕ್ತ ಸಾಲಿನಡಿ ಸುವರ್ಣ ಗ್ರಾಮ ಯೋಜನೆಯಡಿ 23 ಗ್ರಾಮಗಳು ಆಯ್ಕೆಯಾಗಿದ್ದು, 23 ಕೋಟಿ ರೂ ಮಂಜೂರಾಗಿದೆ. ಪಿಎಂಜಿಎಸ್ವೈ ಯೋಜನೆಯಡಿ 144 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗಿದೆ. ವಿವಿಧ ವಸತಿ ಯೋಜನೆಯಡಿ 32,757 ಮನೆಗಳು ಮಂಜೂರಾಗಿದ್ದು, 27.62 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕೇಂದ್ರದಲ್ಲಿರುವ ಕೊಳೆಗೇರಿಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 4 ಕೋಟಿ ರೂ ಹಾಗೂ ಎಡಿಬಿ ನೆರವಿನೊಂದಿಗೆ 3.50 ಕೋಟಿ ರೂ ಅನುದಾನ ಲಭಿಸಿದೆ. ಕೊಳೆಗೇರಿ ನಿವಾಸಿಗಳಿಗೆ 650 ಮನೆ ನಿರ್ಮಿಸಲಾಗುತ್ತಿದೆ. ಗ್ರಾಮೀಣರಿಗೆ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗಿದೆ. ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹರಿಗೆ ಮಾಸಾಶನ ಸೌಲಭ್ಯ ಒದಗಿಸಲಾಗಿದೆ ಎಂದರು.

ಸ್ವಾತಂತ್ರ್ಯ ಸಂಗ್ರಾಮ ನೃತ್ಯ
ಚಾಮರಾಜನಗರ: ಈ ಬಾರಿ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಆದರೆ, 8 ಶಾಲೆಯ ಮಕ್ಕಳನ್ನು ಒಳಗೊಂಡಂತೆ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿ ಕುರಿತು ನೃತ್ಯ ಪ್ರದರ್ಶನ ನಡೆದಿದ್ದು, ವಿಶೇಷ.

ಸ್ವಾತಂತ್ರ್ಯ ಹೋರಾಟ ಆರಂಭಗೊಂಡ ಘಟನೆಯಿಂದ ಹಿಡಿದು ಗಾಂಧೀಜಿ ಅವರ ಹೋರಾಟದವರೆಗೂ ಮಕ್ಕಳು ನೃತ್ಯದ ಮೂಲಕ ಸಾದರಪಡಿಸಿದರು. ಭಗತ್ಸಿಂಗ್, ಟಿಪ್ಪುಸುಲ್ತಾನ್, ಕಿತ್ತೂರುರಾಣಿ ಚನ್ನಮ್ಮ, ಗಾಂಧೀಜಿ ಅವರ ಹೋರಾಟ ಕ್ರೀಡಾಂಗಣದಲ್ಲಿ ಅನಾವರಣಗೊಂಡಿತು. ನೃತ್ಯಕ್ಕೆ ಸಾಕಷ್ಟು ತಾಲೀಮು ನಡೆಸಿದ್ದ ಚಿಣ್ಣರು, ಅರ್ಥಪೂರ್ಣವಾಗಿ ಪ್ರದರ್ಶಿಸಿದರು. ಇದರ ಹಿಂದೆ ಶಿಕ್ಷಕರ ಶ್ರಮ ಎದ್ದುಕಾಣುತ್ತಿತ್ತು.

ರಾಮಸಮುದ್ರದ ಸಿ.ಆರ್. ಬಾಲರಪಟ್ಟಣ, ಸಂತ ಜೋಸೆಫ್, ಜೆಎಸ್ಎಸ್ ಬಾಲಕಿಯರ ಪ್ರೌಢಶಾಲೆ, ಸೇವಾಭಾರತಿ, ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು, ಬಾಲಕರ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ ಹಾಗೂ ಸಂತಪೌಲರ ಶಾಲೆಯ ಸುಮಾರು 2 ಸಾವಿರ ಮಕ್ಕಳು ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.