ಶುಕ್ರವಾರ, ಫೆಬ್ರವರಿ 26, 2021
25 °C
ತ್ರಿವರ್ಣ ಧ್ವಜಕ್ಕೆ ನಮನ, ಆಕರ್ಷಕ ಪಥ ಸಂಚಲನ

ಸ್ವಾತಂತ್ರ್ಯ ಹಕ್ಕಿಗೆ 70ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಹಕ್ಕಿಗೆ 70ರ ಸಂಭ್ರಮ

ಚಿಕ್ಕಬಳ್ಳಾಪುರ: ರಂಗುರಂಗಿನ ಬಗೆ ಬಗೆಯ ವೇಷ ತೊಟ್ಟು ಬಂದವರ ಮೊಗದಲ್ಲಿ ಭಯಮಿಶ್ರಿತ ಪುಳಕ. ಹೊತ್ತೇರುವ ಮುನ್ನವೇ ಬಂದು ಕುರ್ಚಿ ಹಿಡಿದು ಕುಳಿತವರಿಗೆ ಮಕ್ಕಳ ಚೆಂದ ದಾಟ ನೋಡುವ ತವಕ. ಆ ವಿಶಾಲ ಬಯಲಿನೊಳು ಕೆಲ ಹೊತ್ತು ಶಿಸ್ತಿನ ಸಿಪಾಯಿಗಳು ಹಾಕಿದ ಹೆಜ್ಜೆಗಳನ್ನು ಬಣ್ಣಿಸುವುದಾದರೆ ಮನಮೋಹಕ.–ಇದು ನಗರದ ಸರ್‌ ಎಂ.ವಿಶ್ವೇಶ್ವ ರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ 70ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ ಕಾರ್ಯಕ್ರಮದ ಝಲಕ್.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಬೆಳಿಗ್ಗೆ  9ಕ್ಕೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪಥ ಪರಿವೀಕ್ಷಣೆ ನಡೆಸಿದರು.ಬಳಿಕ ಪರೇಡ್‌ ಕಮಾಂಡರ್‌ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್‌ಸ್ಪೆಕ್ಟರ್ ಎನ್‌.ಎಲ್‌.ನಾಗೇಂದ್ರಪ್ರಸಾದ್‌ ಅವರ ನೇತೃತ್ವದಲ್ಲಿ 19 ತಂಡಗಳು ಪಥ ಸಂಚಲನ ನಡೆಸಿದವು.ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌ ತುಕಡಿ, ಮಹಿಳಾ ತುಕಡಿ, ಜಿಲ್ಲಾ ಗೃಹ ರಕ್ಷಕದಳ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ಕಾರಿ ಪಿಯು ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು, ನ್ಯೂ ಹೊರೈಜನ್, ಸೇಂಟ್ ಜೋಸೆಫ್‌, ಪಂಚಗಿರಿ ಬೋಧನಾ ಪ್ರೌಢಶಾಲೆ, ಪೂರ್ಣ ಪ್ರಜ್ಞಾ, ಸರ್.ಎಂ.ವಿ, ಇಂಡಿ ಯನ್‌ ಪ್ಲಬಿಕ್‌, ಪ್ರಶಾಂತಿ ಬಾಲ ಮಂದಿರ, ಬ್ರೈಟ್‌, ಸರ್ಕಾರಿ ಪ್ರೌಢಶಾಲೆ ಸೇರಿ ದಂತೆ 10 ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ನಡೆಸಿದ ಆಕ ರ್ಷಕ ಕವಾಯತು ನೋಡುಗರ ಮನ ಸೆಳೆಯಿತು.ಪೊಲೀಸ್‌ ಬ್ಯಾಂಡ್, ಪಂಚ ಗಿರಿ ಬೋಧನಾ ಪ್ರೌಢಶಾಲೆ ಮತ್ತು ಸೇಂಟ್‌ ಜಾನ್ಸ್‌ ಪ್ರೌಢಶಾಲೆಯ ವಾದ್ಯ ವೃಂದಗಳು ಕಾರ್ಯಕ್ರಮಕ್ಕೆ ಹುರುಪು ತುಂಬಿದವು. ಕ್ರೀಡಾಪಟು ಎನ್‌.ವೆಂಕಟೇಶ್‌ ಬಾಬು, ಲೇಖಕಿ ಕೆ.ಪ್ರಭಾ ನಾರಾಯಣ ಗೌಡ, ನೇಕಾರ ಪಿ.ವೆಂಕಟೇಶಲು ಮತ್ತು ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್ ಟಿ.ಎಂ.ಮುನಿವೆಂಕಟಪ್ಪ ಅವರನ್ನು ಜಿಲ್ಲಾಡಳಿತದಿಂದ ಉಸ್ತುವಾರಿ ಸಚಿವರು ಸನ್ಮಾನಿಸಿದರು.ಸಚಿವರ ಸ್ವಾತಂತ್ರ್ಯ ದಿನಾಚರಣೆ ಸಂದೇಶದ ತರುವಾಯ ನಾಲ್ಕು ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಇಡೀ ಮೈದಾನಕ್ಕೆ ರಂಗು ತುಂಬಿದವು.ಆರಂಭದಲ್ಲಿ ಗುಡ್‌ ಶಫರ್ಡ್‌ ಪ್ರೌಢಶಾಲೆಯ ವಿದ್ಯಾರ್ಥಿಗಳು ತಿರಂಗ ವರ್ಣದ ಛತ್ರಿಗಳನ್ನು ಹಿಡಿದುಕೊಂಡು ಪ್ರದರ್ಶಿಸಿದ ‘ವಂದೇ ಮಾತರಂ’ ನೃತ್ಯ ಅಂಗಳದ ತುಂಬ ತ್ರಿವರ್ಣ ಧ್ವಜ ಹರಡಿದಂತೆ ಭಾಸವಾಯಿತು. ಲಂಗ ದಾವಣಿಯಲ್ಲಿ ಮಿಂಚಿದ ನ್ಯೂ ಹೊರೈಜನ್ ವಿದ್ಯಾರ್ಥಿಗಳು ಪ್ರಸ್ತುತಪ ಡಿಸಿದ ರಾಷ್ಟ್ರಕವಿ ಕುವೆಂಪು ಅವರ ‘ನೂರು ದೇವರನೆಲ್ಲ ನೂಕಾಚೆ ದೂರ ’ ಗೀತೆ ಮಾನವಕುಲದಲ್ಲಿ ವೈಚಾರಿಕ ದೃಷ್ಟಿಯ ಅಗತ್ಯವನ್ನು ಸಾರುವಂತಿತ್ತು.ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿಗಳ ‘ಬಾಂದಳದಿ ಹಾರುತಿದೆ ರಾಷ್ಟ್ರಧ್ವಜ’ ಮತ್ತು ಸಾಯಿರಾಮ್‌ ಪ್ರೌಢ ಶಾಲೆ ವಿದ್ಯಾರ್ಥಿಗಳ ‘ನಮ್ಮ ಇಂಡಿಯಾ’ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಗಂಜಿ ಗುಂಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳ ‘ಮಾ ತುಝೆ ಸಲಾಂ’ ನೃತ್ಯ ನೋಡುಗರ ಮನಸೂರೆ ಗೊಂಡವು.ಸಂಸದ ವೀರಪ್ಪ ಮೊಯಿಲಿ, ಶಾಸಕ ಡಾ.ಕೆ.ಸುಧಾಕರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾ, ನಗರಸಭೆ ಅಧ್ಯಕ್ಷ ಕೆ.ವಿ. ಮಂಜುನಾಥ್‌, ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜು ನಾಥ್  ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.ತಡವಾಗಿ ಬಂದ ಶಾಸಕ, ಸಂಸದ

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನಿಂದ ಬಂದು ನಗರದ ಪ್ರಶಾಂತನಗರದಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ ನಿಗದಿತ ಸಮಯಕ್ಕೆ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಬಂದರು.

ಈ ವೇಳೆಯಲ್ಲಿ ಸ್ಥಳೀಯ ಶಾಸಕ ಡಾ.ಕೆ.ಸುಧಾಕರ್‌ ಅವರು ಸೇರಿ ಯಾವೊಬ್ಬ ಗಣ್ಯರು ಬಂದಿರಲಿಲ್ಲ. ಕೆಲ ನಿಮಿಷಗಳ ಕಾಯ್ದ ರಾಮಲಿಂಗಾರೆಡ್ಡಿ ಅವರು ಸರಿಯಾದ ಸಮಯಕ್ಕೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಪಥ ಪರಿವೀಕ್ಷಣೆಗೆ ಪೊಲೀಸ್‌ ಜೀಪಿನಲ್ಲಿ ಸಾಗುತ್ತಿದ್ದ ವೇಳೆ ಸಂಸದ ವೀರಪ್ಪ ಮೊಯಿಲಿ ಮತ್ತು ಸುಧಾಕರ್‌ ಬಂದರು.ಧ್ವಜವಂದನೆ  ಮರೆತ ಎಸ್ಪಿ!

ಧ್ವಜಾರೋಹಣ ಸಮಯದಲ್ಲಿ ವೇದಿಕೆ ಮೇಲಿದ್ದ ಎಲ್ಲ ಗಣ್ಯರು, ಸರ್ಕಾರಿ ಅಧಿಕಾರಿಗಳು ಧ್ವಜವಂದನೆ ಸಲ್ಲಿಸಿದರು. ಆದರೆ ವೇದಿಕೆಯಲ್ಲಿ ಉಸ್ತುವಾರಿ ಸಚಿವರ ಬಲಗಡೆ ನಿಂತಿದ್ದ ಎಸ್ಪಿ ಎನ್‌.ಚೈತ್ರಾ ಅವರು ಮಾತ್ರ ಧ್ವಜವಂದನೆ ಸಲ್ಲಿಸಲಿಲ್ಲ. ಜತೆಗೆ ಪಥ ಸಂಚಲನದ ವೇಳೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮತ್ತು ರಾಮಲಿಂಗಾರೆಡ್ಡಿ ಅವರು ಕವಾಯತು ತಂಡಗಳಿಗೆ ವಂದನೆ ಸಲ್ಲಿಸಿದರು. ಈ ವೇಳೆ ಕೂಡ ಅವರೊಂದಿಗೆ ನಿಂತಿದ್ದ ಎಸ್ಪಿ ವಂದನೆ ಸಲ್ಲಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.