ಗುರುವಾರ , ಮೇ 13, 2021
16 °C

ಸ್ವಾನಂದ ಕಲೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾನಂದಾಶ್ರಮ: ಭಾನುವಾರ ಗಣೇಶನ ವೈಶಿಷ್ಟ್ಯಗಳ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳ `ಸ್ವಾನಂದ ಕಲಾ ಮಹೋತ್ಸವ~. ನೃತ್ಯಪಟು ಮೀನಲ್ ಪ್ರಭು ಅವರಿಗೆ `ಸ್ವಾನಂದ ಕಲಾಶ್ರೀ ಪ್ರಶಸ್ತಿ~ ಮತ್ತು ಚಿತ್ರ, ನೃತ್ಯ, ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರದಾನ.ಉದ್ಯಮಿ ಶ್ರೀಹರಿ ಖೋಡೆ ಅವರಿಂದ ಉದ್ಘಾಟನೆ. ಎಂಬೆಸಿ ಗ್ರೂಪ್ ಅಧ್ಯಕ್ಷ ಜೀತು ವಿರ‌್ವಾನಿ ಅವರಿಂದ ಗುರುರಾಜ ಪೋಶೆಟ್ಟಿಹಳ್ಳಿ ಸಂಪಾದಕತ್ವದ `ಸ್ವಾನಂದ~ ವಿಶೇಷಾಂಕ ಹಾಗೂ `ಗಣೇಶ ಮಾನಸ ಪೂಜಾ~ ಕೃತಿ ಲೋಕಾರ್ಪಣೆ. ಅತಿಥಿಗಳು: ಎ.ಟಿ.ಗೋಪಿನಾಥ್, ಕೆ. ಪ್ರವೀಣ್‌ರೆಡ್ಡಿ, ರತನ್.ಬಿ ಲತ್ ಮತ್ತು ತೇಜ್‌ರಾಜ್ ಗುಲೇಚ. ಅಧ್ಯಕ್ಷತೆ: ಎಸ್. ಷಡಕ್ಷರಿ.ಕನಕಪುರ ರಸ್ತೆಯ ತಾತಗುಣಿ ಅಗರದಲ್ಲಿನ ಸ್ವಾನಂದಾಶ್ರಮ ಗಣೇಶೋಪಾಸನೆಯ ಕೇಂದ್ರ. ಶಿರಸಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಲವಾರು ಆಧ್ಯಾತ್ಮಿಕ, ಸಾಮಾಜಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ.ಇಲ್ಲಿ ಪಾರಂಪರಿಕ ಹೊಯ್ಸಳ ಶೈಲಿಯ ಮಹಾಗಣಪತಿ ಪಂಚಾಯತನ ದೇಗುಲವಿದೆ. ಹೊಯ್ಸಳ ಶಿಲ್ಪಕಲೆಯ ಪುನರುತ್ಥಾನ, ಶತಮಾನಗಳ ಹಿಂದೆ ಮೂಡಿದ ಕರ್ನಾಟಕದ ಅದ್ಭುತ ಕಲಾ ವೈಭವದ ಮಾದರಿಯನ್ನು ಭಕ್ತರ ಸಹಕಾರದೊಡನೆ ಪುನರುಜ್ಜೀವನಗೊಳಿಸುವುದು ಆಶ್ರಮದ ಉದ್ದೇಶ.ಭಕ್ತಾದಿಗಳು ತಮ್ಮ ಮನೆಯಲ್ಲಿ ಪೂಜಿಸಿದ ಗಣೇಶ ವಿಗ್ರಹಗಳನ್ನು ಆಶ್ರಮದ ಆವರಣದಲ್ಲಿರುವ ಜಲಾಗಾರದಲ್ಲಿ ವಿಸರ್ಜನೆ ಮಾಡುವ ವ್ಯವಸ್ಥೆಯೂ ಇದೆ.

ಸ್ಥಳ:12, ಅಗರ, ತಾತಗುಣಿ, ಕನಕಪುರ ರಸ್ತೆ. ಬೆಳಿಗ್ಗೆ 10 (ಕಲಾಸಿಪಾಳ್ಯದಿಂದ ಬಿಎಂಟಿಸಿ ಬಸ್ ಸಂಖ್ಯೆ 212). ಮಾಹಿತಿಗೆ: 2843 5853, 99800 21006.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.